ಚೀನಾ ಒಡೆತನದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಕಂಪೆನಿ‌ ಮೇಲೆ ಇಡಿ ದಾಳಿ

ಓಡಾ ಕ್ಲಾಸ್ ಹೆಸರಿನಲ್ಲಿ ಆನ್‌ಲೈನ್ ಶಿಕ್ಷಣವನ್ನು ಒದಗಿಸುವ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಎರಡು ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಚೀನಾ ಒಡೆತನದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಕಂಪೆನಿ‌ ಮೇಲೆ ಇಡಿ ದಾಳಿ
ಚೀನಾ ಒಡೆತನದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈ ಲಿ. ಕಂಪನಿ ಮೇಲೆ ಇಡಿ ದಾಳಿ
Rakesh Nayak Manchi

Updated on: Apr 27, 2023 | 5:43 PM

ಬೆಂಗಳೂರು: ಆನ್‌ಲೈನ್ ಶಿಕ್ಷಣ ಸಂಸ್ಥೆ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ. (Pigeon Education Technology India Pvt Ltd) ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (Enforcement Directorate -ED) ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ‘ಓಡಾ ಕ್ಲಾಸ್’ ಹೆಸರಿನಲ್ಲಿ ಆನ್‌ಲೈನ್ ಶಿಕ್ಷಣವನ್ನು ಒದಗಿಸುವ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಎರಡು ಸ್ಥಳಗಳನ್ನು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (FEMA) ಅಡಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿ ಚೀನಾಕ್ಕೆ ಕಾನೂನುಬಾಹಿರವಾಗಿ 82 ಕೋಟಿ ರೂ.ಗಳನ್ನು ರವಾನೆ ಮಾಡಿದ ಆರೋಪದ ಮೇಲೆ ಚೀನಾ ಪ್ರಜೆಗಳ ಸಂಪೂರ್ಣ ಮಾಲೀಕತ್ವ ಮತ್ತು ನಿಯಂತ್ರಣದಲ್ಲಿರುವ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಕಂಪನಿ ಮೇಲೆ ದಾಳಿ ನಡೆಸಿ ಶೋಧ ನಡೆಸಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

“ಕಂಪನಿಯು 100 ಪ್ರತಿಶತ ಚೀನೀ ಪ್ರಜೆಗಳ ಒಡೆತನದಲ್ಲಿದೆ ಮತ್ತು ಕೇಮನ್ ದ್ವೀಪಗಳಲ್ಲಿ ನಿಯಂತ್ರಣ ಕಂಪನಿಯನ್ನು ಹೊಂದಿರುವ ಘಟಕಗಳ ಸಂಕೀರ್ಣ ವೆಬ್ ಅನ್ನು ಒಳಗೊಂಡಿರುವ ಗುಂಪಿನ ಭಾಗವಾಗಿದೆ” ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯ ಪ್ರಸ್ತುತ ನಿರ್ದೇಶಕರು, ಚೀನಾದ ಲಿಯು ಕ್ಯಾನ್ ಮತ್ತು ವೇದಾಂತ್ ಹಮಿರ್ವಾಸಿಯಾ.

ಇದನ್ನೂ ಓದಿ: Lokayukta Raid: BBMP ಎಡಿಟಿಪಿ ಗಂಗಾಧರಯ್ಯ ಮನೆಯಲ್ಲಿ ಕೋಟಿ ಕೋಟಿ ಹಣ, ಚಿನ್ನಾಭರಣ ಪತ್ತೆ!

“ಕಂಪನಿಯ ಸಂಪೂರ್ಣ ವ್ಯವಹಾರಗಳನ್ನು ಚೀನಾದಿಂದ ಲಿಯು ಕ್ಯಾನ್ ನಿಯಂತ್ರಿಸುತ್ತಾರೆ. ಆದರೆ ಭಾರತೀಯ ನಿರ್ದೇಶಕರು ಕಂಪನಿಯ ವ್ಯವಹಾರಗಳಿಗೆ ಯಾವುದೇ ನಿಯಂತ್ರಣ ಹೊಂದಿಲ್ಲ. ಆದದರೆ ಅವರು ಚೀನಾದ ನಿರ್ದೇಶಕರ ಎಲ್ಲಾ ಸೂಚನೆಗಳನ್ನು ಅನುಸರಿಸುತ್ತಾರೆ. ಭಾರತದಲ್ಲಿ ನಿರ್ವಹಿಸುತ್ತಿರುವ ಕಂಪನಿಯ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ಚೀನಾದ ನಿರ್ದೇಶಕರು ಅಧಿಕೃತ ಸಹಿದಾರರಾಗಿದ್ದಾರೆ ಮತ್ತು ಚೀನಾದ ಮೂಲಕ ಆನ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಇಡಿ ಹೇಳಿದೆ.

“ಚೀನಾದ ವ್ಯಕ್ತಿಗಳ ಸೂಚನೆಗಳ ಮೇರೆಗೆ ಕಂಪನಿಯು ಮಾರುಕಟ್ಟೆ ವೆಚ್ಚದ ಹೆಸರಿನಲ್ಲಿ ಸುಮಾರು 82 ಕೋಟಿ ರೂ.ಗಳನ್ನು ಚೀನಾಕ್ಕೆ ರವಾನಿಸಿದೆ. ದಾಳಿ ವೇಳೆ ಮಹತ್ವದ ಪಣೆಯ ದಾಖಲೆಗಳು ಮತ್ತು ಫೋರೆನ್ಸಿಕ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ. ಕಂಪನಿಯ ಮಾಜಿ ನಿರ್ದೇಶಕರಾದ ಸುಶಾಂತ್ ಶ್ರೀವಾಸ್ತವ, ಪ್ರಿಯಾಂಕಾ ಖಂಡೇಲಾವಾಲ್ ಮತ್ತು ಹಿಮಾಂಶು ಗಾರ್ಗ್ (ಕಳೆದ ವರ್ಷ ರಾಜೀನಾಮೆ ನೀಡಿದವರು) ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ” ಎಂದು ಇಡಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Thu, 27 April 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us