ಬೆಂಗಳೂರು: ದೇಶದಲ್ಲಿ ಎಜುಕೇಶನ್ ಎಮರ್ಜೆನ್ಸಿ (Education Emergency) ಸೃಷ್ಟಿ ಆಗಿದೆ. ಸರ್ಕಾರಿ ಶಾಲೆಗಳಿಗೆ ಸರಿಯಾದ ಅನುದಾನ ನೀಡುತ್ತಿಲ್ಲ. ಹೀಗಾಗಿ ಪಾಲಕರು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ ಎಂದು ರಾಜ್ಯಸಭಾ (Rajyasbha) ಮಾಜಿ ಸದಸ್ಯ ಪ್ರೊ.ರಾಜೀವ್ ಗೌಡ ಬೆಂಗಳೂರಿನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಹೊಸ ರೀತಿಯ ಕಾಸ್ಟ್ಸಿಸ್ಟಮ್ ಬಂದು ಸಮಸ್ಯೆಗಳು ಸೃಷ್ಟಿ ಆಗುತ್ತಿದೆ. ಹಿಜಾಬ್ ವಿವಾದದಿಂದ ಹೆಣ್ಣು ಮಕ್ಕಳಿಗೆ ಅವಕಾಶ ಸಿಗುತ್ತಿಲ್ಲ ಅನ್ನೋ ಚರ್ಚೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗೆ ಆಗಿದೆ. ಮ್ಯಾನಿಫೆಸ್ಟೋ ಸಿದ್ದಪಡಿಸುವಾಗ ಕಾಂಗ್ರೆಸ್ ಈ ಎಲ್ಲ ಅಭಿಪ್ರಾಯ ಅಪೇಕ್ಷೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ಇಂದು ಬಿಜೆಪಿ ಸರ್ಕಾರ ತಂದಿರುವ ಶಿಕ್ಷಣ ನೀತಿ ಬಗ್ಗೆ ಚರ್ಚೆ ಆಗುತ್ತಿದೆ. ಎನ್ಇಪಿ ಬಂದ ಮೇಲೆ ಮೂರು ದೊಡ್ಡ ಸಮಸ್ಯೆಗಳಾಗುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಕಮ್ಯುನಲ್ ಪಾಯ್ಸನ್ ಅಂಶ ಬಂದುಬಿಟ್ಟಿವೆ. ಹೊಸ ಮಿಥಾಲಜಿ ಸೃಷ್ಟಿ ಮಾಡಿ ಐಡಿಯಾಲಜಿ ತುಂಬುವ ಪ್ರಯತ್ನ ನಡೆಯುತ್ತಿದೆ ಆರ್ಎಸ್ಎಸ್ನವರಿಗೆ ಸರ್ಕಾರದಿಂದ ಹಣ ಹೋಗುತ್ತಿದೆ. ಇದನ್ನು ಎಕ್ಸಪೋಸ್ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಿದರು.
ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿರುವ ನಾಗಪುರದ ಅಜೆಂಡಾ ಹೊಂದಿರುವ NEP ಕುರಿತಾಗಿ ಇಂದು @RahulGandhi ಅವರು ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿದರು.#BharatJodoYatra pic.twitter.com/RudVTS6QzC
— Karnataka Congress (@INCKarnataka) October 7, 2022
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಂಡ್ಯದಲ್ಲಿ ನೂತನ ಶಿಕ್ಷಣ ನೀತಿ ಕುರಿತು ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿದರು. ಸಂವಾದದಲ್ಲಿ ಬಜೆಟ್ ಸ್ಕೂಲ್ ಮಾಲೀಕರು, ಶಿಕ್ಷಣ ನೀತಿ ತಜ್ಞರು ಹಾಗೂನ್ಯಾಷನಲ್ ಲಾ ಸ್ಕೂಲ್ ಪ್ರೊಫೆಸರ್ಗಳ ಜೊತೆ ಸಂವಾದ ನಡೆಸಿದರು.
ಸಂವಾದದಲ್ಲಿ ಶಿಕ್ಷಣ ತಜ್ಞರು, ಪೋಷಕ ಸಂಘಟನೆ ಹಿಂದಿ ಹೇರಿಕೆ ವಿರೋಧಿಸಿದರು. ಮಾತೃಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಆಗ್ರಹಿಸಿದರು. ಆಗ ರಾಹುಲ್ ಗಾಂಧಿ ಎಲ್ಲ ಭಾಷೆಗಳಿಗೂ ಮಾನ್ಯತೆ ನೀಡುವುದಾಗಿ ಭರವಸೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕಲ್ಲಿಕ್ ಮಾಡಿ
Published On - 5:38 pm, Fri, 7 October 22