ಬೆಂಗಳೂರು: ಕೆಲ ದಿನಗಳಿಂದ ತಣ್ಣಗಾಗಿದ್ದ ಹಿಜಾಬ್ ವಿವಾದ ಈಗ ಮತ್ತೆ ಭುಗಿಲೇಳ್ತಿದೆ. ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ತೆಗೆಯದಿರಲು 12 ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಇದು ಒಂದು ಕಡೆಯಾದ್ರೆ ನೀಟ್ ಪರೀಕ್ಷೆಗೆ ಹಿಜಾಬ್ ಧರಿಸಿದ್ದವರಿಗೆ ಅವಕಾಶ ನೀಡುವ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.
ನೀಟ್ ಪರೀಕ್ಷೆಗೆಂದು ಮಾರ್ಗಸೂಚಿ ಇದೆ, ಅದನ್ನು ಪಾಲನೆ ಮಾಡ್ತೇವೆ. ಸಿಇಟಿಗೂ ಗೈಡ್ಲೈನ್ಸ್ ಪ್ರಕಟ ಮಾಡುತ್ತೇವೆ. ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಇನ್ನು ಇದೇ ವೇಳೆ ಆರ್ಎಸ್ಎಸ್ ನಪುಂಸಕ ಸಂಘಟನೆ ಎಂಬ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ, ಇಂಥ ಹೇಳಿಕೆಗಳು ಶೋಭೆ ತರಲ್ಲ, ಇದನ್ನು ನಾನು ಖಂಡಿಸುತ್ತೇನೆ. ಈ ರೀತಿ ಮಾತನಾಡುವುದನ್ನು ಮೊದಲು ಕಾಂಗ್ರೆಸ್ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ನಾಡೋಜ ಡಾ.ಹಂಪ ನಾಗರಾಜಯ್ಯ ರಾಜೀನಾಮೆ
ಇನ್ನು ಬೆಂಗಳೂರು ಯುನಿವರ್ಸಿಟಿ ಪೇಪರ್ ಲೀಕ್ ವಿಚಾರಕ್ಕೆ ಸಂಬಂಧಿಸಿ ಸಚಿವ ಅಶ್ವತ್ಥ್ ನಾರಾಯಣ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸುತ್ತೇವೆ. ವಿವಿ ಪ್ರತಿಭಟನೆ ಬಗ್ಗೆ ಮಾಹಿತಿ ತೆಗೆದುಕೊಂಡು ಕ್ರಮ ವಹಿಸುತ್ತೇವೆ. ನಾನ್ ಬೇಲೆಬಲ್ ಓಫೆನ್ಸ್ ಮಾಡುತ್ತೇವೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮಂಗಳೂರು ವಿವಿಯಲ್ಲಿ ಹಿಜಾಬ್ ತೆಗೆಯದಿರಲು 12 ವಿದ್ಯಾರ್ಥಿನಿಯರ ಪಟ್ಟು
ಕರಾವಳಿಯಲ್ಲಿ ಹಿಜಾಬ್ ವಿವಾದ ಮತ್ತೆ ಭುಗಿಲೇಳ್ತಿದೆ. ಹಿಜಾಬ್ ತೆಗೆಯದಿರಲು 12 ವಿದ್ಯಾರ್ಥಿನಿಯರು ಪಟ್ಟು ಡಿಸಿ ಡಾ.ಕೆ.ವಿ.ರಾಜೇಂದ್ರ ಭೇಟಿಯಾದ ವಿದ್ಯಾರ್ಥಿನಿಯರು, ಕಾಲೇಜು ಪ್ರಾಂಶುಪಾಲೆ ಅನಸೂಯಾರನ್ನು ಕರೆಸಿದ ಡಿಸಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರ ಬಗ್ಗೆ ಡಿಸಿ ಚರ್ಚೆ.
ಸರ್ಕಾರವೇ ಹೇಳಲಿ, ನ್ಯಾಯಾಲಯವೇ ಹೇಳಲಿ, ಮನವಿಯನ್ನೆ ಮಾಡಲಿ, ಎಚ್ಚರಿಕೆಯನ್ನೇ ಕೊಡಲಿ, ಹಿಜಾಬ್ಗಾಗಿ ಕೆಲವರು ಪಟ್ಟು ಹಿಡಿದು ನಿಂತಿದ್ದಾರೆ. ಹಿಜಾಬ್ ಧರಿಸಿಯೇ ಕ್ಲಾಸ್ನಲ್ಲಿ ಕೂರಲು ಹಠ ಹಿಡಿದಿದ್ದಾರೆ. ಹೀಗಾಗಿ, ಈಗಾಗಲೇ ಒಂದು ಸುತ್ತಿನ ಕೋಲಾಹಲ ಎಬ್ಬಿಸಿದ್ದ ಹಿಜಾಬ್ ಸಂಘರ್ಷ, ಮತ್ತೊಮ್ಮೆ ಭುಗಿಲೇಳ್ತಿದೆ. ಇದನ್ನೂ ಓದಿ: ಹಲಸಿನ ಹಣ್ಣು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳು
ಕಾಲೇಜು ಪ್ರವೇಶವಿಲ್ಲ.. ಡಿಸಿ ಕಚೇರಿಯಲ್ಲಿ ಹೈಡ್ರಾಮಾ
ತಣ್ಣಗಾಯ್ತು ಅನ್ನುವಷ್ಟ್ರಲ್ಲೇ ಹಿಜಾಬ್ ಜಟಾಪಟಿ ಮತ್ತೊಮ್ಮೆ ಸ್ಫೋಟವಾಗ್ತಿದೆ. ಈ ಸಲವೂ ಕರಾವಳಿಯಲ್ಲೇ ಮುಸುಕಿನ ಗುದ್ದಾಟದ ಮತ್ತೊಂದು ಅಧ್ಯಾಯ ತೆರೆದುಕೊಂಡಿದೆ. ಮಂಗಳೂರಿನ ಹಂಪನಕಟ್ಟೆಯ ಮಂಗಳೂರು ವಿವಿ ಘಟಕದ ಕಾಲೇಜಿಗೆ ಇವತ್ತು, ಅನೇಕರು ಹಿಜಾಬ್, ಬುರ್ಖಾ ಧರಿಸಿ ಬಂದಿದ್ರು. ಆದ್ರೆ, ಎಲ್ಲರೂ ಹಿಜಾಬ್ ತೆಗೆದಿಟ್ಟು ತರಗತಿಗೆ ತೆರಳಿದ್ರೆ, 12 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ತೆಗೆಯೋಕೆ ನಿರಾಕರಿಸಿದ್ರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಹಿಜಾಬ್ ಧರಿಸಲು ನಿರಾಕರಿಸಿದ ವಿದ್ಯಾರ್ಥಿನಿಯರಿಗೆ, ಕಾಲೇಜು ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.. ಕೊನೆಗೆ 12 ಮಂದಿ ವಿದ್ಯಾರ್ಥಿನಿಯರು ನೇರವಾಗಿ ಜಿಲ್ಲಾಧಿಕಾರಿ ಕಚೇರಿಯತ್ತ ತೆರಳಿದ್ರು.. ಮಂಗಳೂರು ಸ್ಟೇಟ್ಬ್ಯಾಂಕ್ ಬಳಿ ಇರುವಂತಹ ಡಿಸಿ ಕಚೇರಿಗೆ ತೆರಳಿದ ಎಲ್ಲರೂ, ಹಿಜಾಬ್ಗೆ ಅವಕಾಶ ನೀಡುವಂತೆ ಮನವಿ ಮಾಡಿದ್ರು. ಈ ವೇಳೆ ಕಾಲೇಜು ಪ್ರಾಂಶುಪಾಲೆ ಅನುಸೂಯಾರನ್ನೂ ಕರೆಸಿದ ಡಿಸಿ ಚರ್ಚೆ ನಡೆಸಿದ್ರು.
Published On - 4:14 pm, Mon, 30 May 22