ಬೆಂಗಳೂರಿನ ಈಜಿಪುರ ಮೇಲ್ಸೇತುವೆ(Ejipura flyover) ಯೋಜನೆಯು ಕಳೆದ ಆರು ವರ್ಷಗಳಿಂದ ನಿರ್ಮಾಣ ಹಂತದಲ್ಲಿಯೇ ಇದೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದ್ರೆ ಇದೀಗ ಈ ಮೇಲ್ಸೇತುವೆ ಬಗ್ಗೆ ಚರ್ಚೆಗಳಾಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಗೂಗಲ್ ಲೊಕೇಶನ್ನಲ್ಲಿ ಭೇಟಿ ನೀಡಲೇಬೇಕಾದ ಸ್ಮಾರಕವೆಂದು ಈಜಿಪುರ ಮೇಲ್ಸೇತುವೆಯನ್ನು ಟ್ಯಾಗ್ ಮಾಡಲಾಗಿದೆ. ಈ ಮೂಲಕ 6 ವರ್ಷಗಳಿಂದ ನಿಂತಲ್ಲೇ ನಿಂತಿರುವ ಕಾಮಗಾರಿ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸವಾಗುತ್ತಿದೆ. ಹಾಗೂ ಚುನಾವಣೆ ಹಿನ್ನೆಲೆ ಯಾವ ಯಾವುದೂ ಹೆದ್ದಾರಿ, ರಸ್ತೆ, ಮೇಲ್ಸೇತುವೆಗಳನ್ನು ಉದ್ಘಾಟನೆ ಮಾಡಲಾಗಿದೆ. ಆದ್ರೆ 6 ವರ್ಷದಿಂದ ಪೂರ್ಣಗೊಳ್ಳದೇ ಇರುವ ಈಜಿಪುರ ಮೇಲ್ಸೇತುವೆಯನ್ನು ಏಕೆ ಪೂರ್ಣಗೊಳಿಸಲಾಗಿಲ್ಲ ಎಂದು ಕೆಲ ಟ್ವಿಟರ್ ಬಳಕೆದಾರರು ವ್ಯಂಗ್ಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಗಳನ್ನು ಬಹುತೇಕ ಪ್ರದೇಶಗಳಲ್ಲಿ ಕಾಣಬಹುದು. ಆದರೆ ಈಜಿಪುರ ಮೇಲ್ಸೇತುವೆಯು ಗೂಗಲ್ ಸ್ಥಳಗಳಲ್ಲಿ ಭೇಟಿ ನೀಡಲೇಬೇಕಾದ ಸ್ಮಾರಕವೆಂದು ಗುರುತಿಸಲ್ಪಟ್ಟ ನಂತರ ಈ ಮೇಲ್ಸೇತುವೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಕ್ಯಾಲೆಬ್ ಫ್ರೈಸೆನ್ ಎಂಬ ಟ್ವಿಟ್ಟರ್ ಬಳಕೆದಾರ ‘ಸ್ಟೋನ್‌ಹೆಂಜ್’ ಎಂಬ ಟೈಟಲ್ನಡಿ ಸರ್ಚ್ ಮಾಡಲಾದ ಗೂಗಲ್ ಲ್ಯಾಂಡ್ ಮಾರ್ಕ್ ಹಂಚಿಕೊಂಡಿದ್ದಾರೆ, ಇದರಲ್ಲಿ ಅಪೂರ್ಣವಾಗಿರುವ ಈಜಿಪುರ ಫ್ಲೈಓವರ್ ಕೂಡ ಲಿಸ್ಟ್ ಆಗಿದೆ. ಅಷ್ಟೇ ಅಲ್ಲದೆ ‘ಸ್ಟೋನ್‌ಹೆಂಜ್’ಗೆ ಗೂಗಲ್ ಬಳಕೆದಾರರು ವಿಮರ್ಶೆಗಳನ್ನು ಸಹ ಮಾಡಿದ್ದಾರೆ.
Okay, which one of you did this! ? pic.twitter.com/vS1J5A6X4m
— Caleb Friesen (@caleb_friesen2) March 25, 2023
ಈ ಸ್ಮಾರಕಗಳು ಬೆಂಗಳೂರಿನ ಅತ್ಯಂತ ಹೆಚ್ಚು ನಡೆಯುತ್ತಿರುವ ಭಾಗದಲ್ಲಿ ಪ್ರವಾಸೋದ್ಯಮದ ಒಂದು ಸಾರಾಂಶವಾಗಿದೆ. ತಪ್ಪದೇ ಭೇಟಿ ನೀಡಿ! ಆದ್ರೆ ಈ ಸುಂದರವಾದ ರಚನೆಗಳ ಹಿರಿಮೆಯನ್ನು ವೀಕ್ಷಿಸಲು ಇಲ್ಲಿಗೆ ಬಂರುವ ಅಪಾರ ಪ್ರಮಾಣದ ಜನಸಮೂಹಕ್ಕಾಗಿ ದಯವಿಟ್ಟು ಸಿದ್ಧರಾಗಿರಿ ಎಂದು ಒಬ್ಬ ಟ್ವಿಟರ್ ಬಳಕೆದಾರ ವ್ಯಂಗ್ಯವಾಡಿದ್ದಾರೆ.
I live right next to Sony signal, where the structures have been built and abandoned. The flyover was supposed to connect Ejipura and Madiwala. They have caused traffic jams everyday for the last 5 years. And still no plans to finish the project. Pathetic really.
— akshath (@akshathk5) March 26, 2023
ಮತ್ತೊಬ್ಬರು, ನಾನು ಸೋನಿ ಸಿಗ್ನಲ್ ಪಕ್ಕದಲ್ಲೇ ವಾಸಿಸುತ್ತಿದ್ದೇನೆ, ಇಲ್ಲಿ ಮೇಲ್ಸೇತುವೆಯನ್ನು ಕಟ್ಟಿ ಅರ್ಧಕ್ಕೆ ಕೈಬಿಡಲಾಗಿದೆ. ಈ ಮೇಲ್ಸೇತುವೆ ಈಜಿಪುರ ಮತ್ತು ಮಡಿವಾಳಕ್ಕೆ ಸಂಪರ್ಕ ಕಲ್ಪಿಸಬೇಕಿತ್ತು. ಆದ್ರೆ ಅಪೂರ್ಣ ಕಾಮಗಾರಿಯಿಂದ ಇಲ್ಲಿ ಕಳೆದ 5 ವರ್ಷಗಳಿಂದ ಪ್ರತಿದಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಮತ್ತು ಇನ್ನೂ ಈ ಯೋಜನೆಯನ್ನು ಪೂರ್ಣಗೊಳಿಸಲು ಯಾವುದೇ ಯೋಜನೆಗಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ‘ಸ್ಟೋನ್‌ಹೆಂಜ್’ನಲ್ಲಿ ಈಜಿಪುರ ಮೇಲ್ಸೇತುವೆಯನ್ನು ಗೂಗಲ್ನಿಂದ ತೆಗೆದು ಹಾಕಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:04 pm, Tue, 28 March 23