KIT launched: ಒಂಭತ್ತು ವಿಶ್ವವಿದ್ಯಾಲಯಗಳನ್ನು ಉದ್ಘಾಟಿಸಿ ಮಾತಾಡಿದ ಮುಖ್ಯಮಂತ್ರಿ ಬೊಮ್ಮಾಯಿ ವಿದ್ಯಾರ್ಥಿಗಳನ್ನು ರಂಜಿಸಿದರು

KIT launched: ಒಂಭತ್ತು ವಿಶ್ವವಿದ್ಯಾಲಯಗಳನ್ನು ಉದ್ಘಾಟಿಸಿ ಮಾತಾಡಿದ ಮುಖ್ಯಮಂತ್ರಿ ಬೊಮ್ಮಾಯಿ ವಿದ್ಯಾರ್ಥಿಗಳನ್ನು ರಂಜಿಸಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 28, 2023 | 12:32 PM

ಐಐಟಿ ಮಾದರಿಯಲ್ಲಿ ಕರ್ನಾಟಕ ಇನ್ ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿಯನ್ನುಸ್ಥಾಪಿಸಿದ್ದೇವೆ, ಕರ್ನಾಟಕ ಶಿಕ್ಷಣ ಮಾಡೆಲ್ ಎಲ್ಲ ರಾಜ್ಯಗಳಿಗೆ ಮಾದರಿಯಾಗಲಿದೆ ಹೇಳಿದಾಗ ಸಿಎಂ ಹೇಳಿದಾಗ ವಿದ್ಯಾರ್ಥಿಗಳು ಕಿವಿಗಡಚಿಕ್ಕುವಂತೆ ಶಿಳ್ಳೆ, ಕೇಕೆ ಹಾಕುತ್ತಾ ಚಪ್ಪಾಳೆ ತಟ್ಟಿದರು.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನಿಸ್ಸಂದೇಹವಾಗಿ ಯುವಕರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ನಡುವೆ ಹೆಚ್ಚು ಜನಪ್ರಿಯರಾಗಿದ್ದಾರೆ. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಒಂಭತ್ತು ವಿಶ್ವವಿದ್ಯಾಲಯಗಳನ್ನು (universities) ಉದ್ಘಾಟಿಸಿ ಮಾತಾಡಿದ ಮುಖ್ಯಮಂತ್ರಿಯವರು, ತಮ್ಮ ಮಾತುಗಳಿಂದ ವಿದ್ಯಾರ್ಥಿಗಳನ್ನು ರಂಜಿಸಿದರು. ಇಂಡಿಯನ್ ಇನ್ ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ ಮಾದರಿಯಲ್ಲಿ ಕರ್ನಾಟಕ ಇನ್ ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿಯನ್ನು (Karnataka Institute of Technology) ನಾವು ಸ್ಥಾಪಿಸಿದ್ದೇವೆ, ಕರ್ನಾಟಕ ಶಿಕ್ಷಣ ಮಾಡೆಲ್ ಎಲ್ಲ ರಾಜ್ಯಗಳಿಗೆ ಮಾದರಿಯಾಗಲಿದೆ, ಯೂಥ್ ಅಂದರೆ ಶಕ್ತಿ ಅನ್ನೋದನ್ನು ನಾವು ಮನಗಂಡಿದ್ದೇವೆ ಅಂತ ಅವರು ಹೇಳಿದಾಗ ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಕಿವಿಗಡಚಿಕ್ಕುವಂತೆ ಶಿಳ್ಳೆ, ಕೇಕೆ ಹಾಕುತ್ತಾ ಚಪ್ಪಾಳೆ ತಟ್ಟಿದರು. ನಿಮ್ಮಲ್ಲಿರುವ ಉತ್ಸಾಹ, ಹುಮ್ಮಸ್ಸು ನೋಡುತ್ತಿದ್ದರೆ ನನಗೂ ನಿಮ್ಮ ನಡುವೆ ಬಂದು ಕೂರಬೇಕೆನಿಸುತ್ತಿದೆ ಅಂತ ಬೊಮ್ಮಾಯಿಯವರು ಹೇಳಿದಾಗ ಮತ್ತೇ ಶಿಳ್ಳೆ, ಕೇಕೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ