Linguistic Affinity: ಲಿಥುವೇನಿಯ ಮತ್ತು ಸಂಸ್ಕೃತ ಭಾಷೆಗಳ ನಡುವೆ ನಿಕಟ ಬಾಂಧವ್ಯವಿದೆ, ಇಲ್ಲಿದೆ ಪುರಾವೆ!
ವೀರ್, ಲೋಕ್ ಮತ್ತು ರಸ್ ಮೊದಲಾದ ಸಂಸ್ಕೃತ ಪದಗಳಿಗೆ ಹೋಲುವ ಲಿಥುವೇನಿಯ ಭಾಷೆಯ ಪದಗಳನ್ನು ರಾಯಬಾರಿ ಕಚೇರಿಯವರು ಚಿತ್ರಪಟದ ಮೇಲೆ ರಚಿಸಿದ್ದಾರೆ.
ಲಿಥುವೇನಿಯ: ಸಂಸ್ಕೃತ (Sanskrit) ಮತ್ತು ಲಿಥುವೇನಿಯ (Lithuania) ಭಾಷೆಯ ನಡುವೆ ಸಮಾನತೆ, ಸಮನ್ವಯತೆಗಳಿವೆ ಅನ್ನೋದನ್ನು ನಿದರ್ಶಿಸಿಲು ಲಿಥುವೇನಿಯ ರಾಯಭಾರ ಕಚೇರಿಯು (embassy) ಒಂದು ಚಿತ್ರಪಟವನ್ನು ತಯಾರಿಸಿದೆ. ದೆಹಲಿಯ ಮಂದಿರ್ ಮಾರ್ಗ್ ನಲ್ಲಿರುವ ಹೇರ್ ಕೋರ್ಟ್ ಬಟ್ಲರ್ ಶಾಲೆಯಲ್ಲಿ ಬೇಲಿಗೋಡೆಯ ಮೇಲೆ ಪಟವನ್ನು ಚಿತ್ರಿಸಲಾಗಿದೆ. ಲಿಥುವೇನಿಯದ ರಾಯಭಾರಿ ಡಯಾನಾ ಮಿಕೆವಿಸೀನ್ ಸೋಮವಾರ ಇದನ್ನು ಉದ್ಘಾಟಿಸಿದರು.
‘ಅಧಿಕೃತವಾಗಿ ಲಿಥುವೇನಿಯ ಭಾಷೆಯು ಸಂಸ್ಕೃತಕ್ಕೆ ತೀರ ಸನಿಹದ ಭ್ರಾತೃ ಭಾಷೆ ಎಂದು ಪರಿಗಣಿಸಲಾಗಿದೆ. ಅದಕ್ಕೆ ಕಾರಣಗಳೇನು ಅಂತ ನಮಗೆ ಗೊತ್ತಿಲ್ಲ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ ಮತ್ತು ಆ ಅಂಶವನ್ನು ನಾವು ಕಂಡುಕೊಳ್ಳುತ್ತೇವೆ. ಈ ಹಿನ್ನೆಲೆಯಲ್ಲೇ ಲಿಥುವೇನಿಯ ರಾಯಭಾರಿ ಕಚೇರಿಯು ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. ಅಸಲು ಸಂಗತಿಯೇನೆಂದರೆ, ಸುಮಾರು ವರ್ಷಗಳ ಹಿಂದೆಯೇ ಲಿಥುವೇನಿಯ ಮತ್ತು ಸಂಸ್ಕೃತ ಭಾಷೆಗಳ ನಡುವೆ ಸಮಾನತೆಯನ್ನು ತೋರುವ 108 ಪದಗಳ ಡಿಕ್ಷನರಿಯನ್ನು ನಾವು ಪ್ರಕಾಶಿಸಿದ್ದೇವೆ,’ ಎಂದು ಡಯಾನಾ ಮಿಕೆವಿಸೀನ್ ಹೇಳಿದರು.
ವೀರ್, ಲೋಕ್ ಮತ್ತು ರಸ್ ಮೊದಲಾದ ಸಂಸ್ಕೃತ ಪದಗಳಿಗೆ ಹೋಲುವ ಲಿಥುವೇನಿಯ ಭಾಷೆಯ ಪದಗಳನ್ನು ರಾಯಬಾರಿ ಕಚೇರಿಯವರು ಚಿತ್ರಪಟದ ಮೇಲೆ ರಚಿಸಿದ್ದಾರೆ.
ಇದನ್ನೂ ಓದಿ: KKR Captain: ವಿದೇಶಿ ಆಟಗಾರನಲ್ಲ; ಕೆಕೆಆರ್ ತಂಡದ ನಾಯಕತ್ವವಹಿಸಿಕೊಂಡ ಎಡಗೈ ಬ್ಯಾಟರ್..!
ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ದೆಹಲಿ ಬೀದಿಕಲೆ ಉತ್ಸವದಲ್ಲಿ ಚಿತ್ರಪಟವನ್ನು ರಚಿಸಿ ಪ್ರದರ್ಶಿಸಲು ಲಿಥುವೇನಿಯ ದೇಶದಿಂದ ಒಬ್ಬ ಬೀದಿ ಕಲಾವಿದನನ್ನು ಕರೆತರಲಾಗಿದೆ.
ಲಿಥುವೇನಿಯದೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತವು ಆ ದೇಶದಲ್ಲಿ ರಾಯಭಾರಿ ಕಚೇರಿಯನ್ನು ಆರಂಭಿಸಲು ನಿರ್ಧರಿಸಿದೆ. ಏಪ್ರಿಲ್ ನಿಂದ ಭಾರತದ ರಾಯಭಾರಿ ಕಚೇರಿ ಕಾರ್ಯಾರಂಭಗೊಳ್ಳಲಿದೆ ಎಂದು ಡಯಾನಾ ಮಿಕೆವಿಸೀನ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ