Protest in Bagalkot: ಒಳಮೀಸಲಾತಿ ವಿರೋಧಿಸಿ ಹೆಚ್ಚುತ್ತಿವೆ ಬಂಜಾರಾ ಸಮುದಾಯದ ಪ್ರತಿಭಟನೆಗಳು

Protest in Bagalkot: ಒಳಮೀಸಲಾತಿ ವಿರೋಧಿಸಿ ಹೆಚ್ಚುತ್ತಿವೆ ಬಂಜಾರಾ ಸಮುದಾಯದ ಪ್ರತಿಭಟನೆಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 28, 2023 | 11:35 AM

ತಾಂಡಾದ ಮುಖಂಡರೊಬ್ಬರು ಲಂಬಾಣಿ ಭಾಷೆಯಲ್ಲಿ ಮಾತಾಡುತ್ತಾ, ಬಿಜೆಪಿಯ ಶಾಸಕ ಹಾಗೂ ಸಂಸದರನ್ನು ತಾಂಡಾದೊಳಗೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಬಾಗಲಕೋಟೆ: ಒಳ ಮೀಸಲಾತಿಗೆ (internal reservation) ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬಂಜಾರಾ ಸಮುದಾಯದ (Banjara community) ಆಕ್ರೋಶ ಹೆಚ್ಚುತ್ತಿದೆ. ನಿನ್ನೆ ಶಿವಮೊಗ್ಗ ಜಿಲ್ಲೆಯಲ್ಲಿ ಸಮುದಾಯದ ಜನ ಉಗ್ರವಾಗಿ ಪ್ರತಿಭಟನೆ ನಡೆಸಿದ್ದನ್ನು ವರದಿ ಮಾಡಲಾಗಿದೆ. ಇಂದು ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ತಾಂಡಾದಲ್ಲಿ (Muchakhandi Tanda) ಲಂಬಾಣಿ ಜನ ಪ್ರತಿಭಟನೆ ನಡೆಸಿದರಲ್ಲದೆ ಬಿಜೆಪಿ ಕಚೇರಿ ಮೇಲೆ ಮತ್ತು ರಸ್ತೆಗಳಲ್ಲಿನ ವಿದ್ಯುದ್ದೀಪಗಳಿಗೆ ಕಟ್ಟಿದ್ದ ಪಕ್ಷದ ಧ್ಚಜಗಳನ್ನು ಕಿತ್ತು ಹಾಕಿದರು. ತಾಂಡಾದ ಮುಖಂಡರೊಬ್ಬರು ಲಂಬಾಣಿ ಭಾಷೆಯಲ್ಲಿ ಮಾತಾಡುತ್ತಾ, ಬಿಜೆಪಿಯ ಶಾಸಕ ಹಾಗೂ ಸಂಸದರನ್ನು ತಾಂಡಾದೊಳಗೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ