AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar PAN Card Link Status: ಪ್ಯಾನ್-ಆಧಾರ್ ಕಾರ್ಡ್​ ಲಿಂಕ್ ಆಗಿದ್ಯಾ? ಅಥವಾ ಇಲ್ಲ? ಪರಿಶೀಲಿಸುವುದು ಹೇಗೆ? ಇಲ್ಲಿದೆ ಸರಳ ಮಾರ್ಗ

ಪ್ಯಾನ್ ಕಾರ್ಡ್‌ಗೆ ಈಗಾಗಲೇ ಆಧಾರ್ ಲಿಂಕ್ ಆಗಿದೆಯೇ ಎಂದು ಕೂಡಾ ನೀವು ಚೆಕ್ ಮಾಡಬಹುದು. ಈ ಬಗ್ಗೆ ಇಲ್ಲಿದೆ ವಿವರ ಈ ಕೆಳಗಿನಂತಿದೆ ನೋಡಿ.

Aadhaar PAN Card Link Status:  ಪ್ಯಾನ್-ಆಧಾರ್ ಕಾರ್ಡ್​ ಲಿಂಕ್ ಆಗಿದ್ಯಾ? ಅಥವಾ ಇಲ್ಲ? ಪರಿಶೀಲಿಸುವುದು ಹೇಗೆ? ಇಲ್ಲಿದೆ ಸರಳ ಮಾರ್ಗ
Follow us
ರಮೇಶ್ ಬಿ. ಜವಳಗೇರಾ
|

Updated on:Mar 28, 2023 | 11:41 AM

ಆಧಾರ್ ಕಾರ್ಡ್, ಪಾನ್ ಕಾರ್ಡ್​ ಲಿಂಕ್​ ಮಾಡಲು(pan Aadhaar link) ಇದೇ ಮಾರ್ಚ್ 31ರಂದು ಕೊನೇ ದಿನವಾಗಿದೆ. ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆಗೆ ಇನ್ನು 4 ದಿನಗಳು ಮಾತ್ರ ಬಾಕಿ ಇದ್ದು, ಈ ಅವಧಿಯೊಳಗೆ ಜೋಡಣೆಯಾಗದಿದ್ದರೆ ಪಾನ್‌ ಕಾರ್ಡ್‌ ಅಮಾನ್ಯವಾಗಲಿದೆ. ಜೊತೆಗೆ ಬ್ಯಾಂಕ್‌ ವ್ಯವಹಾರಗಳು ಕೂಡಾ ಸಾಧ್ಯವಾಗದು. ಅಲ್ಲದೇ ತೆರಿಗೆ ಪಾವತಿಸುವಾಗ ಹೆಚ್ಚುವರಿಯಾಗಿ ಶೇ.10 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿ ಆಧಾರ್, ಪಾನ್ ಕಾರ್ಡ್ ಲಿಂಕ್ ಮಾಡಿಸಲು ಸೈಬರ್​ ಸೆಂಟರ್​ಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಫೈನ್ ಕಟ್ಟುವ ಭೀತಿಯಲ್ಲಿ ಕ್ಯೂನಲ್ಲಿ ನಿಂತು ಲಿಂಕ್​​ ಮಾಡಿಸುತ್ತಿದ್ದಾರೆ, ಇದನ್ನೇ ಕೆಲ ಸೈಬರ್ ಸೆಂಟರ್​ಗಳು ಬಂಡವಾಳ‌ ಮಾಡಿಕೊಂಡಿವೆ. ಬೇರೆ ಬೇರೆ ವೆಬ್​ಸೈಟ್​ಗಳಲ್ಲಿ ಪಾನ್ ಹಾಗೂ ಆಧಾರ್ ಲಿಂಕ್‌‌ ಮಾಡುತ್ತಿದ್ದಾರೆ. 1 ಸಾವಿರ ಶುಲ್ಕದ ಜೊತೆಗೆ ಸೈಬರ್ ಸೆಂಟರ್ ಮಾಲೀಕರು ಜೊತೆಗೆ ಪ್ರೊಸೆಸಿಂಗ್ ಶುಲ್ಕ ಎಂದು 500 ರೂಪಾಯಿ ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ. ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಇಲಾಖೆಯು ತೆರಿಗೆದಾರರಿಗೆ ತನ್ನ ವೆಬ್‌ಸೈಟ್‌ನಲ್ಲಿ ಲಿಂಕ್‌ಗಳನ್ನು ನೀಡಿದೆ. ಹಾಗಾದ್ರೆ, ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಪರಿಶೀಲಿಸುವುದು ಹೇಗೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Aadhaar: ವ್ಯಕ್ತಿ ಸತ್ತ ಬಳಿಕ ಆತನ ಆಧಾರ್ ಕಾರ್ಡ್ ಏನಾಗುತ್ತದೆ? ಸ್ವಯಂ ಆಗಿ ನಿಷ್ಕ್ರಿಯಗೊಳ್ಳುವ ವ್ಯವಸ್ಥೆ ಬರುತ್ತಿದೆಯಾ?

ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಪರಿಶೀಲಿಸುವುದು ಹೇಗೆ?

  • ಆಧಾಯ ತೆರಿಗೆ ಇಲಾಖೆ ಇ-ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/
  • ಎಡ ಭಾಗದಲ್ಲಿ ಕಾಣುವ Quick Linksನಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ.
  •  ನಿಮ್ಮ 10 ಡಿಜಿಟ್‌ನ ಪ್ಯಾನ್ ಸಂಖ್ಯೆಯನ್ನು ನಮೂದಿಸಿ
  • ನಿಮ್ಮ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ನಮೂದಿಸಿ
  •  View Link Aadhaar Status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿಯಲಿದೆ.
  • ಎಡಬದಿಯಲ್ಲಿ Quick Liks ಕಾಣಿಸುತ್ತದೆಅಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿಬಳಿಕ View Link Aadhaar Status ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ, “Your PAN is already linked to given Aadhaar” (ನಿಮ್ಮ ಪಾನ್ ಈಗಾಗಲೇ ಈ ಆಧಾರ್ ಜೊತೆ ಲಿಂಕ್ ಆಗಿದೆಎಂಬಂತಹ ಸಂದೇಶ ಬರುತ್ತದೆ.
  • ಇನ್ನು, ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್​ಗೆ https://incometaxindiaefiling.gov.in/ ಹೋಗಿ ಅಲ್ಲಿ ನೀವು ಲಾಗಿನ್ ಆಗಬೇಕು. ಅಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ನಡೆಸಬಹುದು.
  • ಪಾನ್ ಜೊತೆ ನಿಮ್ಮ ಆಧಾರ್ ಲಿಂಕ್ ಅಗಿದ್ದರೆ ಆಧಾರ್ ನಂಬರ್ ಕಾಣುತ್ತದೆ. ಇಲ್ಲದಿದ್ದರೆ ಲಿಂಕ್ ಆಧಾರ್ ಸ್ಟೇಟಸ್ ಕಾಣುತ್ತದೆ. ನೀವು ಆಧಾರ್ ಮತ್ತು ಪಾನ್  ಲಿಂಕ್ ಮಾಡಬೇಕಾಗುತ್ತದೆ.

ಎಸ್‌ಎಂಎಸ್ ವಿಧಾನದ ಮೂಲಕವೂ ಆಧಾರ್ ಲಿಂಕ್ ಸ್ಟೇಟಸ್ ತಿಳಿಯಿರಿ

ಆಧಾರ್ ಲಿಂಕ್ ಸ್ಟೇಟಸ್ ತಿಳಿಯಲು ಇನ್ನೊಂದು ವಿಧಾನ ನೀವು ಎಸ್‌ಎಂಎಸ್ ಮೂಲಕವೂ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿದುಕೊಳ್ಳಬಹುದು. ಎಸ್‌ಎಂಎಸ್ ಮೂಲಕ ತಿಳಿಯಲು ನೀವು 567678 ಅಥವಾ 56161ಗೆ ಎಸ್‌ಎಂಎಸ್ ಮಾಡಬೇಕಾಗುತ್ತದೆ. UIDPAN ಎಂದು ಟೈಪ್ ಮಾಡಿ ಒಂದು ಸ್ಪೇಸ್ ನೀಡಿ ಬಳಿಕ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ, ಒಂದು ಸ್ಪೇಸ್ ನೀಡಬೇಕು. ಅದಾದ ಬಳಿಕ ಪ್ಯಾನ್ ಸಂಖ್ಯೆಯನ್ನು ನಮೂದಿಸಿ 567678 ಅಥವಾ 56161ಗೆ ಎಸ್‌ಎಂಎಸ್‌ ಕಳುಹಿಸಬೇಕು.

ಇನ್ನಷ್ಟು ಬ್ಯುಸಿನೆಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:24 am, Tue, 28 March 23

ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ