ಎಸ್ಕೇಪ್ ಕಾರ್ತಿಕ್ ಸಹವಾಸದಿಂದ ಬೈಕ್ ಕಳ್ಳತನದಿಂದ ಮನೆಗಳ್ಳತನಕ್ಕೆ ಅಪ್ಡೇಟ್ ಆದ ಕಳ್ಳನ ಬಂಧನ
ಜೈಲಿನಲ್ಲಿದ್ದಾಗ ಎಸ್ಕೇಪ್ ಕಾರ್ತಿಕ್ ಪರಿಚಯವಾಗಿದ್ದ. ಬಿಡುಗಡೆ ಬಳಿಕ ಜೊತೆಯಾಗಿ ತುಮಕೂರಿನಲ್ಲಿ ಇಬ್ಬರು ಸೇರಿ ಮನೆಗಳ್ಳತನ ಮಾಡಿದ್ದಾರೆ. ಬಂದ ಚಿನ್ನದಲ್ಲಿ ಸಮವಾಗಿ ಹಂಚಿಕೊಂಡು ಕಾರ್ತಿಕ್ ಎಸ್ಕೇಪ್ ಆಗಿದ್ದಾನೆ.
ಬೆಂಗಳೂರು: ಕುಖ್ಯಾತ ಕಳ್ಳರಿಬ್ಬರು ಮನೆಗಳ್ಳತನ ಮಾಡಿ, 300 ಗ್ರಾಂ ಕ್ಕೂ ಅಧಿಕ ಚಿನ್ನಾಭರಣಗಳನ್ನು ಕದ್ದು ಪರಿಯಾಗಿರುವಂತಹ ಘಟನೆ ನಡೆದಿದೆ. ಎಸ್ಕೇಪ್ ಕಾರ್ತಿಕ್, ಪೆಪ್ಸಿ ರಘು ಬಂಧಿತರು. 14ಕ್ಕೂ ಅಧಿಕ ಬೈಕ್ ಕಳ್ಳತನ ಕೇಸ್ ರಘು ಹೊಂದಿದ್ದ. ಕಳೆದ ವರ್ಷ ತಲಘಟ್ಟಪುರ ಪೊಲೀಸರಿಂದಲೇ ಬಂಧಿಸಲ್ಪಟ್ಟಿದ್ದ. ನಂತರ ಜೈಲಿನಲ್ಲಿದ್ದಾಗ ಎಸ್ಕೇಪ್ ಕಾರ್ತಿಕ್ ಪರಿಚಯವಾಗಿದ್ದ. ಬಿಡುಗಡೆ ಬಳಿಕ ಜೊತೆಯಾಗಿ ತುಮಕೂರಿನಲ್ಲಿ ಇಬ್ಬರು ಸೇರಿ ಮನೆಗಳ್ಳತನ ಮಾಡಿದ್ದಾರೆ. ಬಂದ ಚಿನ್ನದಲ್ಲಿ ಸಮವಾಗಿ ಹಂಚಿಕೊಂಡು ಕಾರ್ತಿಕ್ ಎಸ್ಕೇಪ್ ಆಗಿದ್ದಾನೆ. ಆದರೇ ಬೆಂಗಳೂರು ಪೊಲೀಸರ ಪರಿಶೀಲನೆ ವೇಳೆ ರಘು ಸಿಕ್ಕಿ ಬಿದಿದ್ದಾನೆ. ಪರಪ್ಪನ ಅಗ್ರಹಾರ ಜೈಲಿನಿಂದ ಕಾರ್ತಿಕ್ ಎಸ್ಕೇಪ್ ಆದ ಕುಖ್ಯಾತ ಹೊಂದಿದ್ದ. ಸದ್ಯ ರಘು ಬಳಿಕ ಎಸ್ಕೇಪ್ ಆದ ಕಾರ್ತಿಕ್ಗಾಗಿ ಶೋಧ ನಡೆಸಲಾಗುತ್ತಿದೆ. ತಪಾಸಣೆ ವೇಳೆ ತಲಘಟ್ಟಪುರ ಪೊಲೀಸರಿಗೆ ರಘು ಅಲಿಯಾಸ್ ಪೆಪ್ಸಿ ಸಿಕ್ಕಿ ಬಿದಿದ್ದಾನೆ. ಸದ್ಯ ಆರೋಪಿ ರಘು ಬಂಧಿಸಿ 130 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲಘಟ್ಟಪುರ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.
ಕುಳ್ಳರಿಜ್ವಾನ್ ಸಹಚರ ಸಾಗರ್ ಗೂಂಡಾ ಕಾಯ್ದೆ ಅಡಿ ಬಂಧನ
ಬೆಂಗಳೂರು: ಕುಳ್ಳರಿಜ್ವಾನ್ ಸಹಚರ ಸಾಗರ್ ಗೂಂಡಾ ಕಾಯ್ದೆ ಅಡಿ ಬಂಧನ ಮಾಡಲಾಗಿದೆ. ಕಾಮಾಕ್ಷಿ ಪಾಳ್ಯದ ಸಾಗರ್ ಎಲ್ ಅಲಿಯಾಸ್ ವೀರು ಬಂಧಿತ ಆರೋಪಿ. 4 ಕೊಲೆಯತ್ನ ಸೇರಿದಂತೆ 8ಕ್ಕೂ ಅಧಿಕ ಪ್ರಕರಣ ಹೊಂದಿದ್ದು, ಬೆಂಗಳೂರಿನ ದಕ್ಷಿ ವಿಭಾಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದ. ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಆರೋಪಿ ಬಂಧನ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ.
ಬ್ರೂಟಲ್ ಮರ್ಡರ್ಗೆ ಸಾಕ್ಷಿಯಾದ ಸಕ್ಕರೆ ನಗರಿ ಮಂಡ್ಯ
ಮಂಡ್ಯ: ಎಣ್ಣೆ ಏಟಲ್ಲಿ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಪುರದಲ್ಲಿ ನಡೆದಿದೆ. ಧನುಷ್ ಮೃತ ವ್ಯಕ್ತಿ. ಡಾಬಾದಲ್ಲಿ ಕುಡಿಯಲು ಕುಳಿತಿದ್ದ ಎರೆಡು ಗುಂಪುಗಳ ನಡುವೆ ಕಿರಿಕ್ ಉಂಟಾಗಿದೆ. ಗುರಾಯಿಸಿದ ಅನ್ನೋ ಕಾರಣಕ್ಕೆ ಎರೆಡು ಗುಂಪುಗಳ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ವೇಳೆ ಅಲ್ಲೆ ಇದ್ದ ಚಾಕು ಹಾಗೂ ಡ್ಯಾಗರ್ನಿಂದ ದಾಳಿ ಮಾಡಲಾಗಿದೆ. ಸ್ದಳಕ್ಕೆ ಪಾಂಡವಪುರ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದು, ಮತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪಾಂಡವಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.