AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಔಷಧಕ್ಕೆ ಅಸಲಿ ಲೇಬಲ್​​!: ಎಸ್​ಐಟಿ ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಹಿರಂಗ

ರಾಜ್ಯದಲ್ಲಿ ಬೆಳಕಿಗೆ ಬಂದಿದ್ದ ನಕಲಿ ಔಷಧ ದಂಧೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರಶಾಂತ್‌ ಬಂಧನದ ನಂತರ ಸ್ಫೋಟಕ ವಿಚಾರಗಳು ಹೊರಬಿದ್ದಿವೆ. ಟರ್ಕಿಯಿಂದ ಒರಿಜಿನಲ್ ಲೇಬಲ್‌ ತರಿಸಿ ನಕಲಿ ಮೆಡಿಸಿನ್‌ಗೆ ಬಳಸಿರುವುದು ಎಸ್‌ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ. ಹಲವು ಬಾರಿ ಒರಿಜಿನಲ್ ಮೆಡಿಸಿನ್​ಗಳ ಜೊತೆಗೆ ನಕಲಿ ಮೆಡಿಸಿನ್​ಗಳನ್ನು ಜೋಡಿಸಿ ಸರಬರಾಜು ಮಾಡುತ್ತಿದ್ದರು ಎಂಬುದನ್ನು ಕೂಡ ಗೊತ್ತಾಗಿದೆ.

ನಕಲಿ ಔಷಧಕ್ಕೆ ಅಸಲಿ ಲೇಬಲ್​​!: ಎಸ್​ಐಟಿ ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಹಿರಂಗ
ಪ್ರಮುಖ ಆರೋಪಿ ಪ್ರಶಾಂತ್Image Credit source: Tv9 Kannada
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Oct 04, 2026 | 12:18 PM

Share

ಬೆಂಗಳೂರು, ಅಕ್ಟೋಬರ್​​ 04: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನಕಲಿ ಔಷಧಿ ದಂಧೆ ಪ್ರಕರಣ ಸಂಬಂಧ ಬಗೆದಷ್ಟೂ ಸ್ಫೋಟಕ ವಿಚಾರಗಳು ಬಯಲಾಗುತ್ತಿದ್ದು, ಪ್ರಮುಖ ಆರೋಪಿ ಪ್ರಶಾಂತ್ ಬಂಧನದ ಬೆನ್ನಲ್ಲೇ ಮತ್ತಷ್ಟು ಶಾಕಿಂಗ್​​ ವಿಚಾರಗಳು ಹೊರಬಂದಿವೆ. ಫೈಜರ್ ಕಂಪನಿ ಒರಿಜಿನಲ್ ಲೇಬಲ್ ತರೋದಕ್ಕಾಗಿಯೇ ಟರ್ಕಿಗೆ ವರ್ಷದಲ್ಲಿ ಹತ್ತಾರು ಬಾರಿ ಪ್ರಶಾಂತ್ ಹೋಗಿದ್ದ. ಪದೇಪದೆ ಹೋಗ್ತಿದ್ದ ಕಾರಣಕ್ಕೆ ಟರ್ಕಿ ವೀಸಾ ಕ್ಯಾನ್ಸಲ್ ಕೂಡ ಆಗಿತ್ತು. ಹೀಗಾಗಿ ಟರ್ಕಿಯ ಅಕ್ಕಪಕ್ಕದ ದೇಶಗಳಿಗೆ ಹೋಗಲು ಈತ ಆರಂಭಿಸಿದ್ದ. ಅಜರ್ ಬೈಜಾನ್ ಸೇರಿ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುತ್ತಿದ್ದ ಎಂಬುದು ಗೊತ್ತಾಗಿದೆ.

ಮಧ್ಯವರ್ತಿಗಳ ಮೂಲಕ ಡೀಲ್​​

ಇನ್ನು ಟರ್ಕಿಯಲ್ಲಿ ಪೈಜರ್ ಕಂಪನಿಯ ಒರಿಜಿನಲ್ ಲೇಬಲ್‌ ತಯಾರಿಕೆ ಹಿನ್ನೆಲೆ ಮಧ್ಯವರ್ತಿಗಳ ಮೂಲಕ ಅಲ್ಲಿಂದ ಪ್ರಶಾಂತ್​​ ಔಷಧಗಳ​​ ಲೇಬಲ್​ ತರಿಸಿಕೊಳ್ಳುತ್ತಿದ್ದ. ಆ ಒರಿಜಿನಲ್ ಲೇಬಲ್​​ಗಳನ್ನು ನಕಲಿ ಮೆಡಿಸಿನ್​ಗೆ ಹಾಕಿ ಗ್ಯಾಂಗ್​​ ಪ್ಯಾಕ್ ಮಾಡ್ತಿತ್ತು. ಹಲವು ಬಾರಿ ಒರಿಜಿನಲ್ ಮೆಡಿಸಿನ್​ಗಳ ಜೊತೆಗೆ ನಕಲಿ ಮೆಡಿಸಿನ್​ಗಳನ್ನು ಜೋಡಿಸಿ ಸರಬರಾಜು ಮಾಡುತ್ತಿದ್ದರು ಎಂಬುದು ಕೂಡ ಎಸ್​​ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆ ಮೂಲಕ ಆರೋಪಿಗಳ ಮತ್ತೊಂದು ಕಳ್ಳಾಟ ಕಂಡು ಅಧಿಕಾರಿಗಳೇ ಶಾಕ್​​ ಆಗಿದ್ದಾರೆ.

LIVE TV

ಇದನ್ನೂ ಓದಿ: ನಕಲಿ ಔಷಧ ದಂಧೆಯ ಕಿಂಗ್​ಪಿನ್ ಕೊನೆಗೂ ಸೆರೆ: ಅಜರ್ ಬೈಜಾನ್​ನಿಂದ ವಾಪಸಾದ ವೇಳೆ ಏರ್​ಪೋರ್ಟ್​ನಲ್ಲಿ ಪ್ರಶಾಂತ್ ರಂಜನ್​ ಬಾಬು ಬಂಧನ

ಅಜರ್‌ಬೈಜಾನ್‌ನಿಂದ ಹಿಂದಿರುಗಿದ್ದ ಆರೋಪಿ ಪ್ರಶಾಂತ್​​ನನ್ನು ಸೆಪ್ಟೆಂಬರ್​​ 28ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈತನ ವಿರುದ್ಧ ಲುಕ್​​ಔಟ್​​ ನೋಟಿಸ್​ ಜಾರಿಯಾಗಿದ್ದ ಹಿನ್ನೆಲೆ ವಿಮಾನ ನಿಲ್ದಾಣದ ಅರೈವಲ್ ಗೇಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಪ್ರಶಾಂತ್​​ನ ಎಸಿಪಿ ಅಂಜನ್ ಕುಮಾರ್ ನೇತೃತ್ವದ ತಂಡಕ್ಕೆ ಹಸ್ತಾಂತರಿಸಲಾಗಿತ್ತು. ವೀರೇಶ್ ಜೈನ್ ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯಾಗಿದ್ದು, ನಕಲಿ ಔಷಧಗಳ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಈತ ಪಾತ್ರ ವಹಿಸಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿತ್ತು. ವೀರೇಶ್ ಬೆಂಗಳೂರಿನ ಆಸ್ಪತ್ರೆಗಳು ಮತ್ತು ಮೆಡಿಕಲ್‌ಗಳಿಗೆ ನಕಲಿ ಔಷಧಗಳನ್ನು ಪೂರೈಸುತ್ತಿದ್ದ ಎನ್ನಲಾಗಿದ್ದು, ಜಾಲದ ವಹಿವಾಟು ವಾರ್ಷಿಕ ಸುಮಾರು 15 ಕೋಟಿಯಷ್ಟಿತ್ತು ಎಂಬುದನ್ನೂ ಅಧಿಕಾರಿಗಳು ಪತ್ತೆ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More