4 ತಿಂಗಳ ಹಿಂದೆಯಷ್ಟೇ ವಿವಾಹ, ಪತ್ನಿಗೆ ಐಷಾರಾಮಿ ಜೀವನದ ಗೀಳು, ಕೌಟುಂಬಿಕ ಕಲಹ: ಪತಿ ನೇಣಿಗೆ ಶರಣು

4 ತಿಂಗಳ ಹಿಂದೆಯಷ್ಟೇ ವಿವಾಹ, ಪತ್ನಿಗೆ ಐಷಾರಾಮಿ ಜೀವನದ ಗೀಳು, ಕೌಟುಂಬಿಕ ಕಲಹ: ಪತಿ ನೇಣಿಗೆ ಶರಣು
ಪ್ರಾತಿನಿಧಿಕ ಚಿತ್ರ

ಗಮನಾರ್ಹವೆಂದರೆ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಚಾಂದ್ ಪಾಷಾ ಮತ್ತು ಉಸ್ನಾ ಇಬ್ಬರಿಗೂ ಇದು ಎರಡನೆಯ ಮದುವೆ. ನಿನ್ನೆ ಸೋಮವಾರ ಕೂಡ ಜಗಳ ನಡೆದು, ಗಂಡ ಹೆಂಡತಿ ಬೇರೆ ಬೇರೆ ಕಡೆ ಮಲಗಿದ್ದರು.

TV9kannada Web Team

| Edited By: sadhu srinath

Jan 25, 2022 | 12:57 PM

ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ಪತಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಮಂಜುನಾಥ ನಗರದ 6ನೇ ಕ್ರಾಸ್‌ನಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ಪತಿ ಚಾಂದ್ ಪಾಷಾ(31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4 ತಿಂಗಳ ಹಿಂದೆ ಉಸ್ನಾ (26) ಜತೆ ಚಾಂದ್ ಪಾಷಾ ವಿವಾಹವಾಗಿತ್ತು. ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ಉಸ್ನಾಗೆ ಐಷಾರಾಮಿ ಜೀವನದ ಗೀಳು ಹತ್ತಿತ್ತು. ದಿನವೂ ಹೊರಗೆ ಸುತ್ತಾಡಬೇಕು ಎನ್ನುವ ಅಭಿಲಾಷೆ ಆಕೆಗಿತ್ತು. ದುಬಾರಿ ಬಟ್ಟೆ ಧರಿಸಬೇಕು. ಚಿನ್ನಾಭರಣ ಬೇಕೆನ್ನುವ ಹುಚ್ಚು ಹತ್ತಿತ್ತು. ಆದರೆ ಮೆಕ್ಯಾನಿಕ್ ಆಗಿದ್ದ ಪತಿ ಚಾಂದ್ ಪಾಷಾಗೆ ಅದು ಕಷ್ಟ ಕಷ್ಟವಾಗಿತ್ತು. ಹೆಂಡತಿ ಅಂದುಕೊಂಡಿದ್ದನ್ನೆಲ್ಲ ಈಡೇರಿಸಲು ಆತನಿಗೆ ಆಗ್ತಾ ಇರಲಿಲ್ಲ. ಇದೇ ವಿಚಾರಕ್ಕೆ ದಿನ ನಿತ್ಯ ಮನೆಯಲ್ಲಿ ಜಗಳ ಜಗಳ.

ಇಬ್ಬರಿಗೂ 2ನೆಯ ಮದುವೆ, ಪತ್ನಿ ಉಸ್ನಾ ಈಗ 3 ತಿಂಗಳ ಗರ್ಭಿಣಿ! ಗಮನಾರ್ಹವೆಂದರೆ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಚಾಂದ್ ಪಾಷಾ ಮತ್ತು ಉಸ್ನಾ ಇಬ್ಬರಿಗೂ ಇದು ಎರಡನೆಯ ಮದುವೆ. ನಿನ್ನೆ ಸೋಮವಾರ ಕೂಡ ಜಗಳ ನಡೆದು, ಗಂಡ ಹೆಂಡತಿ ಬೇರೆ ಬೇರೆ ಕಡೆ ಮಲಗಿದ್ದರು. ಪತ್ನಿ ರೂಂ ನಲ್ಲಿ ಮಲಗಿದ್ದರೆ ಪತಿ ಹಾಲ್ ನಲ್ಲಿ ಪವಡಿಸಿದ್ದ. ಈ ವೇಳೆ ಪತಿ ಹಾಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಗ ಉಸ್ನಾ ಮೂರು ತಿಂಗಳ ಗರ್ಭಿಣಿ ಆಗಿದ್ದಾಳೆ. ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ತಮಿಳುನಾಡು ಮೂಲದ ಆರೋಪಿ ಬಂಧನ.. ವಿಲ್ಸನ್ ಗಾರ್ಡನ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ನರಸಿಂಹಪ್ಪ(60) ಬಂಧಿತ ಆರೋಪಿ. ತಮಿಳುನಾಡಿನ ಕಾಮನದೊಡ್ಡಿಯಿಂದ ಜಿಂಕೆ ಕೊಂಬುಗಳನ್ನ ತಂದಿದ್ದ ಆರೋಪಿ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಅದನ್ನುಮಾರಾಟಕ್ಕೆ ಯತ್ನಿಸುತ್ತಿದ್ದ. ಖಚಿತ ಮಾಹಿತಿ ಅಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಒಂಬತ್ತು ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಲೆಬಾಳುವ 22 ಮೊಬೈಲ್ ಕಳ್ಳತನ ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ಪ್ರೊ ಕನೆಕ್ಟ್ ಖಾಸಗಿ ವೇರ್ ಹೌಸ್‌ನಲ್ಲಿ ಬೆಲೆಬಾಳುವ 22 ಮೊಬೈಲ್ ಫೋನ್, ಸಿಸಿಟಿವಿ ಡಿವಿಆರ್ ಕಳ್ಳತನವಾಗಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವೇರ್ ಹೌಸ್ ಮ್ಯಾನೇಜರ್ ಚೆಂದಿಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Also Read: 19 ಮಂದಿ ಉನ್ನತ ಐಎಎಸ್ ಅಧಿಕಾರಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಬಸವರಾಜ ಬೊಮ್ಮಾಯಿ ಸರ್ಕಾರ

Also Read: ಅಂತ್ಯಸಂಸ್ಕಾರಕ್ಕೆ ಅಡ್ಡಿ: ಜಮೀನು ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾದ ಹಿಂದುಳಿದ ವರ್ಗ ಇಲಾಖೆ ಅಧಿಕಾರಿಗಳು

Follow us on

Related Stories

Most Read Stories

Click on your DTH Provider to Add TV9 Kannada