Bengaluru News: ಹೆಂಡತಿ ಜೊತೆ ಜಗಳ, ಮಗನನ್ನೇ ಕಿಡ್ನಾಪ್ ಮಾಡಿಸಿದ ತಂದೆ

ಹೆಂಡತಿ ಜೊತೆ ಜಗಳ ಮಾಡಿಕೊಂಡ ಪತಿ ತನ್ನ ಮಗನನ್ನೇ ಕಿಡ್ನಾಪ್ ಮಾಡಿಸಿರುವ ಘಟನೆ ನಡೆದಿದೆ. ಈ ಪ್ರಕರಣ ಪೊಲೀಸರಿಗೆ ತಲೆನೋವು ತಂದಿದೆ. ಕಿಡ್ನಾಪ್ ಮಾಡಿಸಿದ ತಂದೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Bengaluru News: ಹೆಂಡತಿ ಜೊತೆ ಜಗಳ, ಮಗನನ್ನೇ ಕಿಡ್ನಾಪ್ ಮಾಡಿಸಿದ ತಂದೆ
ಮಗು ಕಿಡ್ನಾಪ್​ಗೆ ಬಳಸಲಾದ ಆಟೋ
Edited By:

Updated on: Jun 17, 2023 | 8:05 AM

ಬೆಂಗಳೂರು: ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಹೆಂಡತಿ ಜೊತೆ ಜಗಳ ಮಾಡಿಕೊಂಡ ಪತಿ ತನ್ನ ಮಗನನ್ನೇ ಕಿಡ್ನಾಪ್(kidnap) ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಗು ಕಿಡ್ನಾಪ್​ ಅನ್ನು ಕಣ್ಣಾರೆ ಕಂಡ ಸಬ್ ಇನ್ಸ್ ಪೆಕ್ಟರ್ ಕಿಡ್ನಾಪ್​ ಮಾಡಿಕೊಂಡು ಹೋದ ಆಟೋವನ್ನು ಚೇಸ್ ಮಾಡಿ ಆರೋಪಿಗಳನ್ನು ಹಿಡಿದಿದ್ದಾರೆ. ಸದ್ಯ ತಂದೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಜೂನ್ 16ರ ಶುಕ್ರವಾರ ಬೆಳ್ಳಂಬೆಳಿಗ್ಗೆ ನಡೆದ ಆ ಒಂದು ಘಟನೆ ಪೊಲೀಸರಿಗೆ ಕೆಲ ಘಂಟೆಗಳ ಕಾಲ ತಲೆನೋವು ತರಿಸಿತ್ತು. ಗಂಡ ಹೆಂಡತಿಯ ನಡುವಿನ ಆ ಒಂದು ಜಗಳ ಮಗನನ್ನು ಸಿನಿಮೀಯ ಸ್ಟೈಲ್​ನಲ್ಲಿ ಕಿಡ್ನಾಪ್ ಮಾಡಿಸಿದ್ದು ಈ ಘಟನೆ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ತನ್ನ ಮಗುವನ್ನು ತಂದೆಯೇ ತಾಯಿಯಿಂದ ಕರೆದೊಯ್ದಿದ್ದು, ಇದು ಕಿಡ್ನಾಪ್ ಅಂತ ತಾಯಿ ಆರೋಪಿಸಿದ್ದಾರೆ. ಅಸಲಿಗೆ ನೈಟ್ ಡ್ಯೂಟಿ ಮುಗಿಸಿದ್ದ ವಿದ್ಯಾರಣ್ಯಪುರ ಸಬ್ ಇನ್ಸ್ ಪೆಕ್ಟರ್ ಶುಕ್ರವಾರ ಬೆಳಿಗ್ಗೆ ಮನೆ ಕಡೆ ತೆರಳುತಿದ್ರು. ಈ ವೇಳೆ ಜಿಕೆವಿಕೆ ಬಳಿ ಶಾಲೆಗೆ ಮಗುವನ್ನು ಕರೆದೊಯ್ಯುತಿದ್ದ ತಾಯಿ ಅಡ್ಡಗಟ್ಟಿದ ಎರಡು ಆಟೋದಲ್ಲಿ ಬಂದ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಮಹಿಳೆಯ ಬಳಿ ಇದ್ದ ಮಗುವನ್ನು ಎಳೆದುಕೊಂಡಿದ್ರು. ಬಳಿಕ ಪುರುಷ ತಾನು ಬಂದಿದ್ದ ಆಟೋದಲ್ಲಿ ಮಗುವನ್ನು ಕರೆದೊಯ್ದಿದ್ದ. ಮತ್ತೊಂದೆಡೆ ಇದನ್ನು ಕಂಡ ಸಬ್ ಇನ್ಸ್ ಪೆಕ್ಟರ್ ಕೂಡಲೇ ಹೊಯ್ಸಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಮತ್ತೊಂದು ಆಟೋದಲ್ಲಿ ಮೂವರು ಮಹಿಳೆಯರು ಸಹಿತ ಆಟೋ ಚಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ: 5 ವರ್ಷ ಪ್ರೀತಿಸಿ, ತಾಳಿ ಕಟ್ಟಿಸಿಕೊಂಡ ನಂತರ ಇಷ್ಟವಿಲ್ಲ ಎಂದಿದ್ದ ತಂಗಿ; ಸಹೋದರಿ ತಪ್ಪಿಗೆ ಅಣ್ಣನ ಕೊಲೆ

ಆಗ ಮಗು ಕಿಡ್ನಾಪ್ ಕೇಸ್​ನ ಸತ್ಯ ಬಯಲಾಗಿದೆ. ಅಸಲಿಗೆ ಮಗುವಿನ ತಾಯಿ ಹಾಗೂ ತಂದೆ ಬೇರೆ ಬೇರೆ ವಾಸವಿದ್ದಾರೆ. ತಾಯಿ ಬಳಿ ಇದ್ದ ಮಗುವನ್ನು ತಂದೆ ಕರೆದೊಯ್ದಿದ್ದಾನಂತೆ. ಆದ್ರೆ ಈ ವಿಚಾರ ಕಿಡ್ನಾಪ್ ರೀತಿ ಕಂಡಿದ್ದು ಪೊಲೀಸರೇ ಒಂದು ಕ್ಷಣ ಟೆನ್ಶನ್ ಆಗಿದ್ದರು. ಸದ್ಯ ಕೊಡಿಗೆಹಳ್ಳಿ ಪೊಲೀಸರಿಂದ ಮಗು ಕರೆದೊಯ್ದ ತಂದೆ ಬಗ್ಗೆ ಮಾಹಿತಿ ಕಲೆಹಾಕುತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:04 am, Sat, 17 June 23