ಆನೇಕಲ್: ಜಾಗಕ್ಕಾಗಿ ಮನಷ್ಯರು ಜಗಳವಾಡೋದು ಸಾಮಾನ್ಯವಾಗಿದೆ. ಆದರೆ ಪ್ರಾಣಿಗಳು (Animals) ಸಹಿತ ಇದರಿಂದ ಹೊರತಾಗಿಲ್ಲ ಅಂದರೆ ನಿಜಕ್ಕೂ ಆಶ್ಚರ್ಯಪಡುವ ಸಂಗತಿ. ಜಾಗದ ವಿಚಾರಕ್ಕಾಗಿ ಕೋತಿಗಳ (Monkeys) ಎರಡು ಗುಂಪು ಪರಸ್ಪರ ಕಚ್ಚಾಡುತ್ತಿದ್ದು, ಪ್ರವಾಸಿಗರಿಗೆ ಭಯ ಹುಟ್ಟಿಸಿವೆ. ಇದು ಆಶ್ಚರ್ಯವೆನಿಸಿದರೂ ಇಂತಹ ಘಟನೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವಣಕನಹಳ್ಳಿಯಲ್ಲಿರುವ ಪ್ರಸಿದ್ಧ ಮುತ್ಯಾಲ ಮಡುವು ಪ್ರದೇಶದಲ್ಲಿ ಕೋತಿಗಳ ಮಧ್ಯೆ ಗ್ಯಾಂಗ್ ವಾರ್ ನಡೆಯುತ್ತಿದ್ದು, ಜಗಳದ ಕಾರಣ ಕೆಲ ಕೋತಿಗಳು ಸಾವನ್ನಪ್ಪುತ್ತಿವೆ.
ಮುತ್ಯಾಲ ಮುಡವು ಪ್ರವಾಸಿ ಕ್ಷೇತ್ರ. ಇಲ್ಲಿ ದಿನವೊಂದಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ. ಪ್ರವಾಸಿಗರ ಬಳಿ ತಿಂಡಿ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದ ಕೋತಿಗಳು, ಕೊರೊನಾ ಸಂದರ್ಭದಲ್ಲಿ ಪ್ರವಾಸಿಗರು ಕಡಿಮೆ ಆದ ನಂತರ ಜಲಪಾತದ ಬಳಿ ಇರುವ ಚಿಕ್ಕ ದೇವಸ್ಥಾನ ಬಳಿ ಶಿಫ್ಟ್ ಆಗಿದ್ದವು. ಲಾಕ್ಡೌನ್ ಕಾರಣ ಪ್ರವಾಸಿಗರು ಬರದೇ ಇದ್ದಾಗ ತಿಂಡಿ ಸಿಗದ ಕೋತಿಗಳು, ದೇವಸ್ಥಾನದ ಬಳಿ ಇರುವ ಗಿಡ ಮರಗಳ ಹಣ್ಣು ಕಾಯಿ ತಿನ್ನುವ ವಿಚಾರದಲ್ಲಿ ಜಗಳ ಶುರುವಾಗಿರಬಹುದು ಅಂತ ಹೇಳಲಾಗುತ್ತಿದೆ. ಜಗಳದ ಕಾರಣ ಮಂಗಗಳಿಗೆ ಕೈ, ಕಾಲು, ಮುಖದಲ್ಲಿ ಹಲವು ಗಾಯಗಳಾಗಿವೆ. ಅಲ್ಲದೇ ಕೈ ಕಳೆದುಕೊಂಡ ಹಲವು ಕೋತಿಗಳು ಇಲ್ಲಿ ಕಾಣ ಸಿಗುತ್ತಿವೆ.
ಕೆಲ ದಿನಗಳ ಹಿಂದೆ ಕೋತಿ ಹಾಗೂ ನಾಯಿಗಳ ಮಧ್ಯೆ ಕಾಳಗ ನಡೀತಿದೆ ಅಂತ ಸುದ್ದಿಯಾಗಿತ್ತು. ಆದರೆ ಇಲ್ಲಿ ಕೋತಿಗಳ ನಡುವೇಯೇ ಇಂತಹ ಘರ್ಷಣೆ ಉಂಟಾಗಿರುವ ಬಗ್ಗೆ ಪ್ರಸ್ತಾಪ ಮಾಡಲಾಗುತ್ತಿದೆ. ಸದ್ಯ ಇದೆ ಬಗ್ಗೆ ತಜ್ಞರು ಸ್ಪಷ್ಟ ಪಡಿಸಬೇಕಿದೆ.
ವರದಿ: ಸೈಯ್ಯದ್ ನಿಜಾಮುದ್ದೀನ್
ಇದನ್ನೂ ಓದಿ
ಹೊಸ ಸಾಹಸಕ್ಕೆ ಮುಂದಾದ ನಟ ವಸಿಸ್ಠ ಸಿಂಹ; ಲಾಂಚ್ ಆಯ್ತು ‘ಸಿಂಹ ಆಡಿಯೋ’
Viral Video: ದೇವಸ್ಥಾನದ ಹೊರಗೆ ಬೆಂಕಿ ಹೊತ್ತಿಕೊಂಡು ಹೊಸ ರಾಯಲ್ ಎನ್ಫೀಲ್ಡ್ ಬೈಕ್ ಸ್ಫೋಟ