ಬೆಂಗಳೂರು, ಜ.8: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ ಆರೋಪ ಸಂಬಂಧ ಡಿವೈಎಸ್ಪಿ ಶಾಂತಕುಮಾರ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಬೆಂಗಳೂರು (Bengaluru) ನಗರದ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಡುಗೋಡಿ ಕಾವೇರಿ ಪೊಲೀಸ್ ಸಂಕೀರ್ಣದಲ್ಲಿ ವಾಸವಿರುವ ವಿದ್ಯಾ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಿವೈಎಸ್ಪಿ ಶಾಂತಕುಮಾರ್, ಪತ್ನಿ ಲಕ್ಷ್ಮಿಕಾಂತ, ಮಕ್ಕಳಾದ ಮಹೇಶ್ ಹಾಗೂ ಸಾಯಿಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾವೇರಿ ಪೊಲೀಸ್ ಸಂಕೀರ್ಣದಲ್ಲಿ ವಾಸವಿರುವ ವಿದ್ಯಾ ಅವರು ಜನವರಿ 7 ರಂದು ಬೆಳಗ್ಗೆ ವಾಕಿಂಗ್ ಮುಗಿಸಿಕೊಂಡು ಬರುತ್ತಿದ್ದ ವೇಳೆ ಆವರಣದಲ್ಲಿ ತೆಂಗಿನ ಕಾಯಿ, ನಿಂಬೆ ಹಣ್ಣು, ಬೂದು ಕುಂಬಳಕಾಯಿ ಒಡೆದು ಹಾಕಲಾಗಿತ್ತು.
ಇದನ್ನೂ ಓದಿ: ಸಿನಿಮಾ ಸಕ್ಸಸ್ ಖುಷಿಯಲ್ಲಿ ಮುಂಜಾನೆವರೆಗೂ ಸ್ಟಾರ್ ಹೀರೋ ಪಾರ್ಟಿ; ಪಬ್ ವಿರುದ್ಧ ಎಫ್ಐಆರ್
ಇದನ್ನು ನೋಡಿದ ವಿದ್ಯಾ ಅವರು ಕಸ ಗುಡಿಸುವವರ ಬಳಿ ಕ್ಲೀನ್ ಮಾಡುವಂತೆ ಹೇಳಿದಾಗ ಲಕ್ಷ್ಮಿಕಾಂತ ಅವರು ವಿನಾಕಾರಣ ಜಗಳ ತೆಗೆದಿದ್ದಾರೆ. ಈ ವೇಳೆ ಪತ್ನಿಯ (ಲಕ್ಷ್ಮಿ ಕಾಂತ) ಸಹಾಯಕ್ಕೆ ಶಾಂತಕುಮಾರ್ ಹಾಗೂ ಮಕ್ಕಳು ಆಗಮಿಸಿದ್ದಾರೆ. ಬಳಿಕ ವಿದ್ಯಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಆರೋಪಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ