ಸಿನಿಮಾ ಸಕ್ಸಸ್​​ ಖುಷಿಯಲ್ಲಿ ಮುಂಜಾನೆವರೆಗೂ ಸ್ಟಾರ್ ಹೀರೋ ಪಾರ್ಟಿ; ಪಬ್ ವಿರುದ್ಧ ಎಫ್​ಐಆರ್  

ಇತ್ತೀಚೆಗಷ್ಟೇ ಆ ಸ್ಟಾರ್ ನಟನ‌ ಚಿತ್ರ ಬಿಡುಗಡೆಯಾಗಿತ್ತು. ಅದರ‌ ಸಕ್ಸಸ್ ಸೆಲೆಬ್ರೇಷನ್ ಬಳಿಕ ಪಬ್​ನಲ್ಲಿ ಸ್ಟಾರ್ಸ್ ಪಾರ್ಟಿಗೆ ಸೇರಿದ್ದರು. ಬೆಂಗಳೂರಿನ ಒರಾಯನ್‌ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್​​ನಲ್ಲಿ ಪಾರ್ಟಿ ನಡೆದಿತ್ತು.

ಸಿನಿಮಾ ಸಕ್ಸಸ್​​ ಖುಷಿಯಲ್ಲಿ ಮುಂಜಾನೆವರೆಗೂ ಸ್ಟಾರ್ ಹೀರೋ ಪಾರ್ಟಿ; ಪಬ್ ವಿರುದ್ಧ ಎಫ್​ಐಆರ್  
ಸಿಸಿಟಿವಿ ದೃಶ್ಯ
Follow us
Jagadisha B
| Updated By: ರಾಜೇಶ್ ದುಗ್ಗುಮನೆ

Updated on:Jan 06, 2024 | 8:38 AM

ಸರ್ಕಾರದ ನಿಯಮದ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್​ಗಳು ಕ್ಲೋಸ್ ಆಗಬೇಕು. ಆದರೆ, ಬೆಂಗಳೂರಿನಲ್ಲಿ ಸ್ಟಾರ್ ಹೀರೋಗಾಗಿ ಮುಂಜಾನೆ 5ರವರೆಗೆ ಪಬ್ ಓಪನ್ ಇಡಲಾಗಿತ್ತು. ಇತ್ತೀಚೆಗೆ ರಿಲೀಸ್ ಆಗಿ ಸಕ್ಸಸ್ ಕಂಡ ಸಿನಿಮಾದ ಹೀರೋ ಹಾಗೂ ತಂಡದವರು ಈ ಪಾರ್ಟಿಯಲ್ಲಿದ್ದರು ಎನ್ನಲಾಗಿದೆ. ಸ್ಟಾರ್ ಹೀರೋ ಎನ್ನುವ ಕಾರಣಕ್ಕೆ ಪೊಲೀಸರು ಕಣ್ಮುಚ್ಚಿ ಕುಳಿತರಾ ಎನ್ನುವ ಪ್ರಶ್ನೆ ಮೂಡಿದೆ. ಈಗ ಪಬ್​ (Pub) ಮಾಲೀಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಇತ್ತೀಚೆಗಷ್ಟೇ ಆ ಸ್ಟಾರ್ ನಟನ‌ ಚಿತ್ರ ಬಿಡುಗಡೆಯಾಗಿತ್ತು. ಅದರ‌ ಸಕ್ಸಸ್ ಸೆಲೆಬ್ರೇಷನ್ ಬಳಿಕ ಪಬ್​ನಲ್ಲಿ ಸ್ಟಾರ್ಸ್ ಪಾರ್ಟಿಗೆ ಸೇರಿದ್ದರು. ಬೆಂಗಳೂರಿನ ಒರಾಯನ್‌ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್​​ನಲ್ಲಿ ಪಾರ್ಟಿ ನಡೆದಿತ್ತು. ನಟ, ನಿರ್ದೇಶಕ, ನಿರ್ಮಾಪಕ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಜನವರಿ‌ 3ರಂದು‌ ರಾತ್ರಿ‌ ಪಬ್​ಗೆ ಸಿನಿಮಾ ತಂಡ ಆಗಮಿಸಿದ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.

ನಿಯಮಗಳ ಪ್ರಕಾರ ರಾತ್ರಿ 1 ಗಂಟೆಗೆ ಪಬ್ ಕ್ಲೋಸ್ ಆಗಬೇಕಿತ್ತು. ಒಂದು ಗಂಟೆ ಆಗುತ್ತಿದ್ದಂತೆ ಪಾರ್ಟಿ ಪೂರ್ಣಗೊಳಿಸಬೇಕಿತ್ತು. ಆದರೆ, ಮುಂಜಾನೆವರೆಗೂ ಪಾರ್ಟಿ ನಡೆದಿದೆ. ಬೀಟ್​ನಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ? ಮಾಹಿತಿ ಇದ್ದೂ ಸುಮ್ಮನಾದರೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಹೆಚ್ಚಿತು ‘ಕಾಟೇರ’ ಥಿಯೇಟರ್​ ಸಂಖ್ಯೆ

ಸ್ಟಾರ್ ನಟನ ನೋಡಲು ಮುಂಜಾನೆಯೂ ಅಭಿಮಾನಿಗಳು ನೆರೆದಿದ್ದರು. ರಸ್ತೆ ಮೇಲೆಯೇ‌ ಕಾರು ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಮಾಡಿದ್ದಾರೆ ಎನ್ನಲಾಗಿದೆ. ಸ್ಟಾರ್ಸ್ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ವಿಚಾರ ನಗರ ಪೊಲೀಸ್ ಆಯುಕ್ತ ದಯಾನಂದ್​​ಗೆ ಗೊತ್ತಾಗುತ್ತಿದ್ದಂತೆ ಅವರು ಕ್ಲಾಸ್ ತೆಗೆದಿಕೊಂಡಿದ್ದಾರೆ ಎನ್ನಲಾಗಿದೆ. ಆ ಬಳಿಕ ತರಾತುರಿಯಲ್ಲಿ ಪಬ್ ಮಾಲೀಕರ ಮೇಲೆ ಎಫ್ಐಆರ್ ಬಿದ್ದಿದೆ ಎನ್ನಲಾಗಿದೆ.

ಜೆಟ್ ಲ್ಯಾಗ್ ಮ್ಯಾನೇಜರ್ ಪ್ರಶಾಂತ್, ಮಾಲೀಕರಾದ ಶಶಿರೇಖಾ ಜಗದೀಶ್ ಮೇಲೆ ಎಫ್ಐಆರ್ ದಾಖಲಾಗಿದೆ. ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು‌ ಉಲ್ಲಂಘನೆ ಆರೋಪದಡಿ ಎಫ್ಐಆರ್ ಹಾಕಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:37 am, Sat, 6 January 24