- Kannada News Photo gallery Cricket photos MS Dhoni files FIR against ex business partners claims cheating of over Rs 15 crore
ಎಂಎಸ್ ಧೋನಿಗೆ 15 ಕೋಟಿ ರೂ. ವಂಚನೆ..! ಎಫ್‌ಐಆರ್ ದಾಖಲಿಸಿದ ಕ್ಯಾಪ್ಟನ್ ಕೂಲ್
MS Dhoni: ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ಅವರ ಮಾಜಿ ಉದ್ಯಮ ಪಾಲುದಾರರಿಂದಲೇ ಕೋಟಿಗಟ್ಟಲೆ ವಂಚನೆಯಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಧೋನಿ ತಮ್ಮ ಮಾಜಿ ಬ್ಯುಸಿನೆಸ್ ಪಾಲುದಾರರು 15 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪ ಮಾಡಿ ನ್ಯಾಯಾಲಯದ ಮೊರೆ ಹೀಗಿದ್ದಾರೆ.
Updated on: Jan 05, 2024 | 3:32 PM

ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ಅವರ ಮಾಜಿ ಉದ್ಯಮ ಪಾಲುದಾರರಿಂದಲೇ ಕೋಟಿಗಟ್ಟಲೆ ವಂಚನೆಯಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಧೋನಿ ತಮ್ಮ ಮಾಜಿ ಬ್ಯುಸಿನೆಸ್ ಪಾಲುದಾರರು 15 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪ ಮಾಡಿ ನ್ಯಾಯಾಲಯದ ಮೊರೆ ಹೀಗಿದ್ದಾರೆ.

ವರದಿಯ ಪ್ರಕಾರ ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಸೌಮ್ಯ ಬಿಸ್ವಾಸ್ ಮತ್ತು ಮಿಹಿರ್ ದಿವಾಕರ್ ವಿರುದ್ಧ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಮಾಜಿ ಉದ್ಯಮ ಪಾಲುದಾರರಾದ ದಿವಾಕರ್ ಅವರು ಧೋನಿ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಮಿಹಿರ್ ದಿವಾಕರ್ ಅವರು ಒಪ್ಪಂದದಲ್ಲಿದ್ದ ಷರತ್ತುಗಳನ್ನು ಪಾಲಿಸಿಲ್ಲ ಎಂದು ದೂರಿನಲ್ಲಿ ಧೋನಿ ಉಲ್ಲೇಖಿಸಿದ್ದಾರೆ.

ಹಾಗೆಯೇ ದಿವಾಕರ್ ಅವರು ಅರ್ಕಾ ಸ್ಪೋರ್ಟ್ಸ್ ಫ್ರಾಂಚೈಸಿ ಶುಲ್ಕ ಮತ್ತು ಷೇರು ಲಾಭವನ್ನು ಧೋನಿಯವರಿಗೆ ಪಾವತಿಸಿಲ್ಲ. ಹೀಗಾಗಿ ಧೋನಿ 15 ಆಗಸ್ಟ್ 2021 ರಂದು ಅರ್ಕಾ ಸ್ಪೋರ್ಟ್ಸ್‌ಗೆ ನೋಟಿಸ್ ಕಳುಹಿಸಿದ್ದರು. ಆ ಬಳಿಕ ಅರ್ಕಾ ಸ್ಪೋರ್ಟ್ಸ್‌ಗೆ ನೀಡಲಾಗಿದ್ದ ಹಕ್ಕುಗಳನ್ನು ರದ್ದುಗೊಳಿಸಲಾಗಿತ್ತು.

ಆ ಬಳಿಕ ಧೋನಿ ತಮ್ಮ ಮಾಜಿ ಉದ್ಯಮ ಪಾಲುದಾರರ ವಿರುದ್ಧ ಹಲವಾರು ಬಾರಿ ನೋಟಿಸ್ ಕಳುಹಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ವಿಧಿ ಅಸೋಸಿಯೇಟ್ಸ್ ಮೂಲಕ ಎಂಎಸ್ ಧೋನಿ ಅವರನ್ನು ಪ್ರತಿನಿಧಿಸುತ್ತಿರುವ ದಯಾನಂದ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.

ಇನ್ನು ಧೋನಿಯ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ಕ್ಯಾಪ್ಟನ್ ಕೂಲ್, ಇತ್ತೀಚೆಗೆ ದುಬೈನಲ್ಲಿ ತಮ್ಮ ಕುಟುಂಬದೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡಿದ್ದರು. ಪ್ರವಾಸದ ವೇಳೆ ಧೋನಿ ಜೊತೆ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೂಡ ಕಾಣಿಸಿಕೊಂಡಿದ್ದರು.

ಧೋನಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ದುಬೈನಲ್ಲಿ ಕ್ರಿಸ್ಮಸ್ ಆಚರಿಸಿದ್ದರು. ಡಿಸೆಂಬರ್ 19 ರಂದು ಯುಎಇಯಲ್ಲಿ ಮೊದಲ ಬಾರಿಗೆ ನಡೆದ ಐಪಿಎಲ್ 2024 ಮಿನಿ ಹರಾಜಿಗಾಗಿ ದುಬೈಗೆ ಆಗಮಿಸಿದ ನಂತರ ಪಂತ್ ಎಂಎಸ್ ಧೋನಿಯೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.




