ಬೆಂಗಳೂರು, ಸೆ.19: ಬೆಂಗಳೂರಿನ ಎಮ್.ಎಸ್ ರಾಮಯ್ಯ(MS Ramaiah Hospital) ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಅವಘಡದಲ್ಲಿ ಕೆಲ ನರ್ಸ್ಗಳಿಗೆ ಸಣ್ಣಪುಟ್ಟ ಸುಟ್ಟ ಗಾಯವಾಗಿದೆ. ಕಾರ್ಡಿಯಾಕ್ ಐಸಿಯು ವಾರ್ಡ್ನ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದುರಂತದಲ್ಲಿ ನರ್ಸ್ಗಳ ಸಮಯಪ್ರಜ್ಞೆಯಿಂದ 8 ರೋಗಿಗಳು ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಎಂ.ಎಸ್.ರಾಮಯ್ಯ ಆಸ್ಪತ್ರೆ ಸಿಇಓ ಶ್ರೀನಿವಾಸ್ ಮೂರ್ತಿ, ‘ಇಂದು(ಗುರುವಾರ) ಮಧ್ಯಾಹ್ನ 1.15 ಕ್ಕೆ ಕಾರ್ಡಿಕ್ ಯುನಿಟ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಎಲ್ಲಾ ಸಿಬ್ಬಂದಿ ರೋಗಿಗಳನ್ನ ಶಿಫ್ಟ್ ಮಾಡಿಲಾಗಿದೆ. ಆಸ್ಪತ್ರೆಯಲ್ಲಿ ಇದ್ದ ಅಗ್ನಿಶಾಮಕ ಪರಿಕರಗಳಿಂದ ಬೆಂಕಿ ನಂದಿಸುವ ಪ್ರಯತ್ನ ಆಗಿದೆ. ಹೀಗಾಗಿ ಆಸ್ಪತ್ರೆಯ ಅರ್ಧದಷ್ಟು ಭಾಗದಲ್ಲಿ ವಿದ್ಯುತ್ ಸಂಪರ್ಕ ನಿಲ್ಲಿಸಿ, ರೋಗಿಗಳನ್ನ ಶಿಫ್ಟ್ ಮಾಡಲಾಗಿದೆ. ಎಲ್ಲಾ ರೀತಿಯ ಸೇಫ್ಟಿ ಮೆಜರ್ ತೆಗೆದುಕೊಳ್ಳಲಾಗಿತ್ತು. ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ನಡೆದಿದೆ ಎನ್ನಿಸುತ್ತಿದೆ. ಎಲ್ಲಾ ವಿಐಪಿ ಪೇಷೆಂಟ್ಗಳಿಗೂ, ಯಾರಿಗೂ ಏನೂ ತೊಂದರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:Video: ಗ್ಯಾಸ್ ಸೋರಿಕೆಯಿಂದ ಆಟೋ ಸ್ಫೋಟ; ಭೀಕರ ಅಗ್ನಿ ಅವಘಡದ ಭಯಾನಕ ದೃಶ್ಯ ವೈರಲ್
ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಲಾರಿ ನದಿಗೆ ಬಿದ್ದಿದ್ದು, ಇತ್ತ ಚಾಲಕ ಈಜಿ ಪ್ರಾಣ ಉಳಿಸಿಕೊಂಡ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಬಳಿ ನಡೆದಿದೆ. ವಂಟಮೂರಿ ಗ್ರಾಮದ ಘಟಪ್ರಭಾ ನದಿಗೆ ಲಾರಿ ಉರುಳಿದ್ದು, ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಹೌದು, ರಸ್ತೆ ಕಾಮಗಾರಿ ನಡೆಯುತ್ತಿದ್ದು ತಡೆಗೋಡೆ ಇಲ್ಲದ ಕಾರಣಕ್ಕೆ ಲಾರಿ ನದಿಗೆ ಉರುಳಿದೆ. ಇದೀಗ ಜೆಸಿಬಿ ಬಳಸಿ ಲಾರಿ ಮೇಲಕ್ಕೆತ್ತುವ ಕೆಲಸ ನಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Thu, 19 September 24