ಬೆಂಗಳೂರು, ಅಕ್ಟೋಬರ್ 18: ಇಂದು ಬೆಳಗ್ಗೆ ತಾವರೆಕೆರೆ ಮುಖ್ಯರಸ್ತೆಯೊಂದರಲ್ಲಿರುವ ಪಬ್ನಲ್ಲಿ (pub on Tavarekere road) ಸಿಲಿಂಡರ್ಗಳು ಸ್ಫೋಟಗೊಂಡ ಪರಿಣಾಮ ಅಗ್ನಿ ದುರಂತ ಸಂಭವಿಸಿದೆ. ಈ ವೇಳೆ ಪ್ರಾಣವುಳಿಸಿಕೊಳ್ಳಲು ಯುವಕನೊಬ್ಬ ಕಟ್ಟಡದ ನಾಲ್ಕನೇ ಅಂತಸ್ತಿನಿಂದ ಹಾರಿರುವಂತಹ ದೃಶ್ಯ ಸಾಕಷ್ಟು ವೈರಲ್ ಆಗಿದೆ. ಸದ್ಯ ದುರಂತ ಕುರಿತಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಪ್ರತಿಕ್ರಿಯಿಸಿದ್ದು, ಇಂದು ಮಧ್ಯಾಹ್ನ 12 ಗಂಟೆ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಬೆಂಕಿ ನಂದಿಸಿದ್ದಾರೆ. ದುರಂತಹದ ಸ್ಥಳದಲ್ಲಿ ಹುಕ್ಕಾಬಾರ್ ನಡೆಸಲಾಗುತ್ತಿತ್ತಾ ಅಥವಾ ರೆಸ್ಟೋರೆಂಟ್ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತೆ ಎಂದು ಹೇಳಿದ್ದಾರೆ.
ಬಿಲ್ಡಿಂಗ್ ಜಿಗಿದ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿ ತನಿಖೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಡ್ ಪೈಪ್ ಕೆಫೆ ಮಾಲೀಕ ಕರಣ್ ಜೈನ್ ವಿರುದ್ಧ ಎಸ್.ಜಿ.ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಬ್ ಬೆಂಕಿ ದುರಂತ, ಬೆಂಗಳೂರು; ಸುತ್ತಮುತ್ತ ಶಾಲಾ ಕಾಲೇಜುಗಳಿದ್ದರೂ ಪಬ್ ನಡೆಸಲು ಅನುಮತಿ ನೀಡಲಾಗಿದೆ: ಪ್ರತ್ಯಕ್ಷದರ್ಶಿ
ಅಗ್ನಿ ಅವಘಡ ಕುರಿತಾಗಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ರೆಸ್ಟೋರೆಂಟ್ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಒಬ್ಬರಿಗೆ ಕಾಲು, ಕೈಗೆ ಗಾಯವಾಗಿದೆ, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ನಾನು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ತಿಲಕ್ ನಗರದ ಕೆಜಿ ಆಸ್ಪತ್ರೆಯ ಡಾ.ಹರೀಶ್ ಮಾತನಾಡಿ, ಗಾಯಾಳು ಪ್ರೇಮ್ ಕುಮಾರ್ಗೆ ಹೆಚ್ಚುವರಿ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಗಾಯಾಳು ಪ್ರೇಮ್ ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಕೈ ಮೂಳೆ ಮುರಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಎಂಆರ್ಐ ಇಲ್ಲ ಹೀಗಾಗಿ ಅಪೋಲೋ ಆಸ್ಪತ್ರೆಗೆ ಕಳಿಸಿದ್ದೇವೆ ಎಂದರು.
ಇದನ್ನೂ ಓದಿ: ಬೆಂಗಳೂರಿನ ಫೋರಂ ಮಾಲ್ ಬಳಿ ಅಗ್ನಿ ಅವಘಡ, ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ವ್ಯಕ್ತಿ
ಗಾಯಾಳು ಪ್ರೇಮ್ ಸಹೋದರ ಮಾತನಾಡಿ, ನಾವೆಲ್ಲಾ ನೇಪಾಳದವರು, ಪ್ರೇಮ್ ನನ್ನ ಸಹೋದರ. ರೆಸ್ಟೋರೆಂಟ್ನಲ್ಲಿ ನಾವೆಲ್ಲಾ 15 ಜನ ಕೆಲಸ ಮಾಡುತ್ತಿದ್ದೆವು. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಪ್ರೇಮ್ ಫೋನ್ ಮಾಡಿದ್ದ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.