Bengaluru News: ದರೋಡೆಗೆ ಸಂಚು ರೂಪಿಸಿದ್ದ ರೌಡಿಶೀಟರ್ನ ಐವರು ಸಹಚರರ ಸೆರೆ
ಕಳೆದ ವರ್ಷ ಮದನ್ ಅಲಿಯಾಸ್ ಪಿಟೀಲ್ನನ್ನು ಗ್ಯಾಂಗ್ ಹತ್ಯೆಗೈದಿತ್ತು. ವಿಲ್ಸನ್ ಗಾರ್ಡನ್ ನಾಗನ ವಿರೋಧ ಟೀಂ ಲೀಡರ್ ಸಿದ್ದಾಪುರ ಮಹೇಶ್ ಆತನ ಮೇಲೆ ದಾಳಿಗೆ ತಂಡ ಸಂಚು ರೂಪಿಸಿತ್ತು. ಈ ವೇಳೆ ಮಹೇಶ್@ ಸಿದ್ದಾಪುರ ಮಹೇಶ್ ರೌಡಿಶೀಟರ್ನ ಐವರು ಸಹಚರರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಮಹೇಶ್@ ಸಿದ್ದಾಪುರ ಮಹೇಶ್ ರೌಡಿಶೀಟರ್ (rowdy-sheeter) ನ ಐವರು ಸಹಚರರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕಳೆದ ವರ್ಷ ಮದನ್ ಅಲಿಯಾಸ್ ಪಿಟೀಲ್ನನ್ನು ಗ್ಯಾಂಗ್ ಹತ್ಯೆಗೈದಿತ್ತು. ವಿಲ್ಸನ್ ಗಾರ್ಡನ್ ನಾಗನ ವಿರೋಧ ಟೀಂ ಲೀಡರ್ ಸಿದ್ದಾಪುರ ಮಹೇಶ್ ಆತನ ಮೇಲೆ ದಾಳಿಗೆ ತಂಡ ಸಂಚು ರೂಪಿಸಿತ್ತು. ಹಾಗಾಗಿ ಕೆಎಸ್ಆರ್ಟಿಸಿ ಕೇಂದ್ರ ಕಚೇರಿ ಬಳಿ ಹೊಂಚು ಹಾಕಿ ಕೂತಿದ್ದರು. ಈ ವೇಳೆ ಪೊಲೀಸರು ಬಂಧಿಸಿದ್ದಾರೆ.
ಕಳೆದ 6-7 ತಿಂಗಳ ಹಿಂದೆ ದಾಳಿ ನಡೆಸಿ ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಸಿದ್ದಾಪುರ ಮಹೇಶ್ ಎಸ್ಕೇಪ್ ಆಗಿ ತಲೆಮರೆಸಿಕೊಂಡಿದ್ದ. ಬಳಿಕ ಮತ್ತೆ ಅರೆಸ್ಟ್ ಮಾಡಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.
ಇದನ್ನೂ ಓದಿ: ಈಜಲು ತೆರಳಿದ್ದ ಯುವಕ ನೀರು ಪಾಲು: ಮೃತದೇಹ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ
ನಕಲಿ ಪೊಲೀಸ್ನಿಂದ ಸಾರ್ವಜನಿಕರಿಂದ ಹಣ ವಸೂಲಿ: ಅರೆಸ್ಟ್
ಕೊಪ್ಪಳ: ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಅರಣ್ಯ ಇಲಾಖೆ ಪೊಲೀಸ್ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ನನ್ನು ಬಂಧಿಸಲಾಗಿದೆ. ಜಿಲ್ಲೆಯ ಗಂಗಾಪುರಪೇಟೆಯ ನಿವಾಸಿ ಸಂಜಯ್ ಕೊಪ್ಪದ ಬಂಧಿತ ಆರೋಪಿ. ಮೇ 25ರಂದು ಕೊಪ್ಪಳ ಬಳಿ ಬೈಕ್ ಸವಾರ ಬೊಚನಹಳ್ಳಿಯ ಹನುಮೇಶ್ ಎಂಬುವವರ ಬಳಿ ಹಣ ವಸೂಲಿ ಮಾಡಿದ್ದರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Shivamogga News: ಯುವತಿಯೊಂದಿಗಿನ ಅಶ್ಲೀಲ ವಿಡಿಯೋ ವೈರಲ್, ತೀರ್ಥಹಳ್ಳಿ ಎಬಿವಿಪಿ ಅಧ್ಯಕ್ಷ ಅರೆಸ್ಟ್
ಗಂಧದ ಕಟ್ಟಿಗೆ ಕಳವುವಾಗಿದೆ, ನಿಮ್ಮ ಮೇಲೆ ಅನುಮಾನವಿದೆ ಎಂದು ಓರ್ವ ಬೈಕ್ ಸವಾರನ ಬಳಿ 49,000 ನಗದು, 2 ಚಿನ್ನದ ಉಂಗುರ ದೋಚಿದ್ದಾನೆ. ಅನುಮಾನ ಬಂದು ಗ್ರಾಮೀಣ ಠಾಣೆಗೆ ಹನುಮೇಶ್ ಎಂಬುವವರು ದೂರು ನೀಡಿದ್ದಾರೆ. ದೂರು ಆಧರಿಸಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.