ಇನ್ನೂ ಸರ್ಕಾರಿ ನಿವಾಸ ಖಾಲಿ ಮಾಡದ ಸಿಪಿ ಯೋಗೇಶ್ವರ್; ಅದೇ ಮನೆ ಬೇಕು ಅಂತಾ ಐದಾರು ಮಂದಿ ಕ್ಯೂನಲ್ಲಿದ್ದಾರೆ!

| Updated By: ಸಾಧು ಶ್ರೀನಾಥ್​

Updated on: Sep 01, 2021 | 12:13 PM

ಸರ್ಕಾರಿ ನಿವಾಸಕ್ಕಾಗಿ ಸಚಿವರ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಇದ್ದ ನಿವಾಸವೇ ಬೇಕು ಎಂದು ಐದು ಮಂದಿ ಸಚಿವರು ಹಠ ಮಾಡುತ್ತಿದ್ದಾರೆ. ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನೂ ಸರ್ಕಾರಿ ನಿವಾಸ ಖಾಲಿ ಮಾಡದ ಸಿಪಿ ಯೋಗೇಶ್ವರ್; ಅದೇ ಮನೆ ಬೇಕು ಅಂತಾ ಐದಾರು ಮಂದಿ ಕ್ಯೂನಲ್ಲಿದ್ದಾರೆ!
ಬಸವರಾಜ ಹೊರಟ್ಟಿ ಮತ್ತು ಸಿ.ಪಿ.ಯೋಗೇಶ್ವರ್
Follow us on

ಬೆಂಗಳೂರು: ಒಂದೇ ಸರ್ಕಾರಿ ನಿವಾಸಕ್ಕಾಗಿ ಐವರು ಸಚಿವರು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ಸಿ.ಪಿ.ಯೋಗೇಶ್ವರ್ ಇದ್ದ ಸರ್ಕಾರಿ ನಿವಾಸಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಗಣಿ ಸಚಿವ ಹಾಲಪ್ಪ ಆಚಾರ್ ಸೇರಿ ಐವರು ಸಚಿವರು ಪಟ್ಟು ಹಿಡಿದಿದ್ದಾರೆ. ಇವರ ಮಧ್ಯೆ ಸಭಾಪತಿ ಹೊರಟ್ಟಿ ಕೂಡ ಅದೇ ಮನೆಗೆ ಪಟ್ಟು ಹಿಡಿದಿದ್ದಾರೆ. ಆದರೆ ಸಿ.ಪಿ.ಯೋಗೇಶ್ವರ್ ಇನ್ನೂ ಮನೆಯನ್ನ ಖಾಲಿ ಮಾಡಿಲ್ಲ.

ಸರ್ಕಾರಿ ನಿವಾಸಕ್ಕಾಗಿ ಸಚಿವರ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಇದ್ದ ನಿವಾಸವೇ ಬೇಕು ಎಂದು ಐದು ಮಂದಿ ಸಚಿವರು ಹಠ ಮಾಡುತ್ತಿದ್ದಾರೆ. ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಸರ್ಕಾರಿ ನಿವಾಸ ಇಲ್ಲದೇ ಅನಾನುಕೂಲ ಎದುರಿಸುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಸಿ ನಾಗೇಶ್, ಹಾಲಪ್ಪ ಆಚಾರ್ರ ಮಧ್ಯೆ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಯೋಗೇಶ್ವರ್ ಇದ್ದ ನಿವಾಸವೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಆದ್ರೆ ಇತ್ತ ಯೋಗೇಶ್ವರ್ ಇನ್ನೂ ನಿವಾಸ ಖಾಲಿ ಮಾಡಿಲ್ಲ. ನಿವಾಸ ಖಾಲಿ ಮಾಡಲು ಸಮಯಾವಕಾಶ ಕೇಳಿದ್ದಾರೆ. ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ ಖಾಲಿ ಇದ್ದರೂ ಕೂಡ ಕೆಲ ಸಚಿವರು ಅಲ್ಲಿಗೆ ಹೋಗಲು ನಿರಾಕರಿಸಿದ್ದಾರೆ.

ಟ್ರಾಫಿಕ್ ತೊಂದರೆ ಆಗಬಾರದು ಅಂತಾ ಸಿಎಂ ಬೊಮ್ಮಾಯಿ ರೇಸ್ ಕೋರ್ಸ್ ನಿವಾಸಕ್ಕೆ ಶಿಫ್ಟ್​​

ಈ ಮಧ್ಯೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕೈದು ಕಡೆ ವಾಸ ಇರುವುದರಿಂದ ವಿಧಾನಸೌಧದತ್ತ ಅವರ ಓಡಾಟಕ್ಕೆ ಟ್ರಾಫಿಕ್ ಸಮಸ್ಯೆ ಉದ್ಭವ ಆಗುತ್ತೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ತೊಂದರೆ ಆಗಬಾರದು ಅಂತಾ ಸಿಎಂ ಬೊಮ್ಮಾಯಿ ರೇಸ್ ಕೋರ್ಸ್ ನಿವಾಸಕ್ಕೆ ಶಿಫ್ಟ್​​ ಆಗಲಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಜಯಲಲಿತಾ ವಿಶ್ವವಿದ್ಯಾಲಯದ ಹೆಸರು ಬದಲಾವಣೆ ವಿವಾದ; ಎಐಎಡಿಎಂಕೆ ನಾಯಕರಿಂದ ಪ್ರತಿಭಟನೆ

Published On - 11:46 am, Wed, 1 September 21