ಬೆಂಗಳೂರು ನೈಸ್ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ 5 ಕುಖ್ಯಾತ ದರೋಡೆಕೋರರ ಬಂಧನ

| Updated By: sandhya thejappa

Updated on: Dec 19, 2021 | 11:33 AM

ಶೋಕಿ ಜೀವನಕ್ಕಾಗಿ ದರೋಡೆ ನಡೆಸುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರಿಂದ ಲಾಂಗ್, ಡ್ರಾಗರ್, ಚಾಕು, ದೊಣ್ಣೆ, ಖಾರದಪುಡಿ, 5 ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ನೈಸ್ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ 5 ಕುಖ್ಯಾತ ದರೋಡೆಕೋರರ ಬಂಧನ
ಬಂಧಿತ ಆರೋಪಿಗಳು
Follow us on

ನೆಲಮಂಗಲ: ನೈಸ್ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಐದು ಕುಖ್ಯಾತ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್(23), ಸಂಜು ಅಲಿಯಾಸ್ ಕೊಳಕ ಸಂಜು(23), ಶ್ರೀನಿವಾಸ್ ಅಲಿಯಾಸ್ ಸೀನಾ(23), ಧನುಷ್ ಅಲಿಯಾಸ್ ಧನು(23), ಕಾರ್ತಿಕ ಅಲಿಯಾಸ್ ಪುಂಗ(27) ಎಂಬುವವರು ಅರೆಸ್ಟ್ ಆಗಿದ್ದಾರೆ. ಶೋಕಿ ಜೀವನಕ್ಕಾಗಿ ದರೋಡೆ ನಡೆಸುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರಿಂದ ಲಾಂಗ್, ಡ್ರಾಗರ್, ಚಾಕು, ದೊಣ್ಣೆ, ಖಾರದಪುಡಿ, 5 ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ.

ಇನ್ಸ್​ಪೆಕ್ಟರ್​ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಬಂಧಿಸಲಾಗಿದ್ದು, ಈ ಪ್ರಕರಣ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮಾರಕಾಸ್ತ್ರದಿಂದ ಬೆದರಿಸಿ ಚಿನ್ನ ದೋಚಿದ್ದ ಆರೋಪಿಗಳು ಸೆರೆ
ಚಿತ್ರದುರ್ಗ: ಮಾರಕಾಸ್ತ್ರದಿಂದ ಬೆದರಿಸಿ ನಗದು ಮತ್ತು ಚಿನ್ನ ದೋಚಿದ್ದ ಐವರು ಆರೋಪಿಗಳನ್ನ ತುರುವನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಒಂದು ಲಕ್ಷ ನಗದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಬೆಂಗಳೂರು ಮೂಲದ ಅಭಿಷೇಕ್, ವಿಕಾಸ್, ವಜ್ರಮಣಿ, ಚಿಕ್ಕಗೊಂಡನಹಳ್ಳಿಯ ತಿಪ್ಪೇಸ್ವಾಮಿ ಮತ್ತು ಶಿವು ಎಂಬುವವರನ್ನು ಬಂಧಿಸಲಾಗಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ರಾಮನಗರ ಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ರಾಮನಗರದ ಮಲ್ಲೇಶ್ವರ ಬಡಾವಣೆಯ ನಿವಾಸಿ ಹಬೀಬ್ ಖಾನ್(26) ಎಂಬಾತನನ್ನು ಬಂಧಿಸಿ, ಬಂಧಿತನಿಂದ 1 ಕೆಜಿ 68ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ರಾಮನಗರದ ಹಾಜಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ

ಮಹಾರಾಷ್ಟ್ರದಿಂದ ಬರುವ ಉತ್ಪನ್ನಗಳ ಲೋಡ್, ಅನ್‌ಲೋಡ್ ಮಾಡಲ್ಲ: ಅರುಣ್ ಪರಮೇಶ್ವರ್

Golden Temple: ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ; ಯುವಕನನ್ನು ಥಳಿಸಿ ಕೊಂದ ಸಿಖ್ಖರು!