ಮಹಾರಾಷ್ಟ್ರದಿಂದ ಬರುವ ಉತ್ಪನ್ನಗಳ ಲೋಡ್, ಅನ್‌ಲೋಡ್ ಮಾಡಲ್ಲ: ಅರುಣ್ ಪರಮೇಶ್ವರ್
ನಾಳೆಯಿಂದ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕಳಿಸುವ ಉತ್ಪನ್ನಗಳ ಲೋಡ್ ಮತ್ತು ಮಹಾರಾಷ್ಟ್ರದಿಂದ ಬರುವ ಉತ್ಪನ್ನಗಳ ಅನ್‌ಲೋಡ್ ಮಾಡದಿರಲು ನಿರ್ಧಾರ ಮಾಡಲಾಗಿದೆ ಎಂದು ರಾಜ್ಯ ಎಪಿಎಂಸಿ ಹಮಾಲಿ ಮತ್ತು ಕೂಲಿ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಅರುಣ್ ಪರಮೇಶ್ವರ್ ಟಿವಿ9 ಡಿಜಿಟಲ್ಗೆ ಹೇಳಿಕೆ ನೀಡಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ಎಂಇಎಸ್ (MES) ಪುಂಡರ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಎಪಿಎಂಸಿ (APMC) ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದ ವತಿಯಿಂದ ಹೊಸ ನಿರ್ಧಾರ ಕೈಗೊಳ್ಳಲಾಗಿದೆ. ಆ ಪ್ರಕಾರ ನಾಳೆಯಿಂದ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕಳಿಸುವ ಉತ್ಪನ್ನಗಳ ಲೋಡ್ ಮತ್ತು ಮಹಾರಾಷ್ಟ್ರದಿಂದ ಬರುವ ಉತ್ಪನ್ನಗಳ ಅನ್‌ಲೋಡ್ ಮಾಡದಿರಲು ನಿರ್ಧಾರ ಮಾಡಲಾಗಿದೆ ಎಂದು ರಾಜ್ಯ ಎಪಿಎಂಸಿ ಹಮಾಲಿ ಮತ್ತು ಕೂಲಿ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಅರುಣ್ ಪರಮೇಶ್ವರ್ ಟಿವಿ9 ಡಿಜಿಟಲ್ಗೆ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಮೇಲೆ ಎಂಇಎಸ್ ದಾಳಿ ಖಂಡಿಸುತ್ತೇವೆ. ಕನ್ನಡಿಗರ ಮೇಲೆ ನಡೆಯುತ್ತಿರುವ ದಾಳಿ ನಿಲ್ಲುವವರೆಗೆ ನಿರಂತರ ಹೋರಾಟ ಮಾಡುತ್ತೇವೆ. ನಮಗೆ ಕೂಲಿ ಇಲ್ಲ ಎಂದರೂ ಪರವಾಗಿಲ್ಲ ಹೋರಾಟ ಬಿಡಲ್ಲ ಎಂದು ಟಿವಿ9 ಡಿಜಿಟಲ್ಗೆ ಎಂಪಿಎಂಸಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅರುಣ್ ಪರಮೇಶ್ವರ್ ತಿಳಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಪುತ್ಥಳಿ ದ್ವಂಸ ಪ್ರಕರಣದ ವಿವರಣೆ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಪ್ರತಿಮೆ ದ್ವಂಸ ಮಾಡಿದ ಘಟನೆಯಿಂದ ರಾಜ್ಯದಲ್ಲಿ ಪರಿಸ್ಥತಿ ಉದ್ವಗ್ನಗೊಂಡಿದೆ. ಈ ನಡುವೆ ಬೆಂಗಳೂರಿನಲ್ಲಿರುವ ಶಿವಾಜಿ ಪ್ರತಿಮೆಗಳಿಗೆ ಭದ್ರತೆ ನೀಡಲು ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಮಹಾರಾಷ್ಟ್ರದಿಂದ ಬರುವ ಬಸ್, ವಾಹನಗಳಿಗೆ ಭದ್ರತೆ ನೀಡುವಂತೆ ಸೂಚನೆ ನೀಡಲಾಗಿದೆ. ಶುಕ್ರವಾರ ರಾತ್ರಿ ಎಂಇಎಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ದ್ವಂಸಗೊಳಿಸಿದ್ದರು. ಈ ಹಿನ್ನಲೆಯಲ್ಲಿ ಕನ್ನಡಪರ ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬೆಂಗಳೂರಿನಲ್ಲಿ ಮರಾಠಿ ಜನ ವಾಸಿಸುವ ಕಾಲೋನಿ ಸೇರಿದಂತೆ ಎಲ್ಲೆಡೆ ಪೊಲೀಸರನ್ನು ನಿಯೋಜನೆ ಮಾಡಿ ಬಂದೋಬಸ್ತ್ ಮಾಡಲು ಸೂಚನೆ ನೀಡಲಾಗಿದೆ.
ಸಭೆ ನಡೆಸುವಂತೆ ಗೃಹ ಸಚಿವರಿಗೆ ಸೂಚನೆ ನೀಡಿರುವ ಸಿಎಂ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ದಾಂಧೆಲೆ ಹಿನ್ನಲೆ ಸಭೆ ನಡೆಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಘಟನೆಯಿಂದಾಗಿ ಕಾನೂನು ಸುವ್ಯವಸ್ಥೆ ವೈಫಲ್ಯ ಎದ್ದುಕಾಣುತ್ತಿದೆ. ಬೆಳಗಾವಿ ಅಧಿವೇಶನ ಮುಗಿಯುವವರಿಗೂ ಗೃಹ ಇಲಾಖೆ ಇನ್ನಷ್ಟು ಕಟ್ಟೇಚ್ಚರ ವಹಿಸಬೇಕು. ಮುಂಜಾಗ್ರತ ಬಿಗಿಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡುವಂತೆ ಗೃಹ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಹೀಗಾಗಿ ಇಂದು ಸಿಎಂ ಸಲಹೆ ಮೇರೆಗೆ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಗೃಹ ಸಚಿವರ ಸಭೆ ನಡೆಯಲಿದೆ. ಬೆಂಗಳೂರು ಪೊಲೀಸ್ ಆಯುಕ್ತ, ಬೆಳಗಾವಿ ಐಜಿ, ಬೆಳಗಾವಿ ಪೊಲೀಸ್ ಆಯುಕ್ತ ಹಾಗೂ ಬೆಳಗಾವಿ ಎಸ್ಪಿ ಜೊತೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಯಲಿದೆ.
ಗೃಹಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ಭಗ್ನಗೊಳಿಸಿ, ಪುಂಡಾಟಿಕೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಗಡಿ ಜಿಲ್ಲೆಯಲ್ಲಿ ಕನ್ನಡ ಹಾಗೂ ಮರಾಠಿ ಮಾತನಾಡುವ ಜನತೆ, ಅತ್ಯಂತ ಅನ್ಯೋನ್ಯತೆ, ಪ್ರೀತಿ ಹಾಗೂ ಸಾಮರಸ್ಯದಿಂದ ಇದ್ದಾರೆ. ಆದರೆ ರಾಯಣ್ಣ ಹಾಗೂ ಶಿವಾಜಿಯವರಂಥ ಮಹನೀಯರ ಬಗ್ಗೆ ಎಳ್ಳಷ್ಟೂ ಗೌರವ ವಿಲ್ಲದ ದುಷ್ಕರ್ಮಿಗಳ ಒಂದೇ ಉದ್ದೇಶ, ಸಮಾಜದಲ್ಲಿನ ನೆಮ್ಮದಿಗೆ ಭಂಗ ತರುವುದಾಗಿದ್ದು, ಅವರನ್ನು ಬಗ್ಗು ಬಡಿಯಲಾಗುವುದು. ಬೆಳಗಾವಿ ಹಾಗೂ ಬೆಂಗಳೂರಿನ ಘಟನೆಗಳ ಬಗ್ಗೆ ಸಂಬಂಧಿಸಿ ಪೊಲೀಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು, ತೆಗೆದುಕೊಳ್ಳಲು ನಿರ್ದೇಶಿಸಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ದೇಶಭಕ್ತರಿಗೆ ಗೌರವ ಕೊಡಬೇಕು ಎಂದು ಎಲ್ಲರಿಗೂ ಮನವಿ ಮಾಡುವೆ; ಸಿಎಂ ಬೊಮ್ಮಾಯಿ ರಾಯಣ್ಣ ಪ್ರತಿಮೆ ಭಗ್ನ, ವಾಹನಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ದೇಶಕ್ಕಾಗಿ ತ್ಯಾಗ ಮಾಡಿದ್ದಕ್ಕೆ ಅವರ ಮೂರ್ತಿ ಸ್ಥಾಪಿಸಲಾಗಿದೆ. ನಮ್ಮ ಸರ್ಕಾರ ಇಂತಹ ಘಟನೆಗಳನ್ನು ಸಹಿಸುವುದಿಲ್ಲ. ಏನೇ ಹೇಳುವುದಿದ್ದರೂ ಶಾಂತವಾಗಿ ಹೇಳಬೇಕು. ಸರ್ಕಾರ ಕಾನೂನು ಭಂಗ ಮಾಡುವವರಿಗೆ ಅವಕಾಶ ನೀಡಲ್ಲ. ದೇಶಭಕ್ತರಿಗೆ ಗೌರವ ಕೊಡಬೇಕು ಎಂದು ನಾನು ಎಲ್ಲರಿಗೂ ಈ ಮೂಲಕ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಇಬ್ಬರೂ ದೇಶಭಕ್ತರು. ಇವರು ಭಾಷೆ, ಸಮುದಾಯ ಎಲ್ಲವನ್ನೂ ಮೀರಿ ಬೆಳೆದವರು. ಚೆನ್ನಮ್ಮ, ರಾಯಣ್ಣನ ಹೆಸರಿನಲ್ಲಿ ದೇಶವನ್ನು ಒಗ್ಗೂಡಿಸಬೇಕು. ಇವರನ್ನು ಒಂದು ಭಾಷೆ, ಜಾತಿಗೆ ಸೀಮಿತಗೊಳಿಸಬಾರದು. ಈಗ ಆಗಿರುವ ಗೊಂದಲದ ಬಗ್ಗೆ ಸರ್ಕಾರ ಕ್ರಮಕೈಗೊಂಡಿದೆ. ರಾಯಣ್ಣ ಮೂರ್ತಿ ಭಗ್ನ, ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೃತ್ಯವೆಸಗಿದವರನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುವಾಗ ಎಂದಿನಂತೆ ಪುಂಡಾಟ ಮೆರೆದ ಎಮ್ ಈ ಎಸ್ ಗೂಂಡಾಗಳು
Published On - 11:27 am, Sun, 19 December 21