ಬೆಂಗಳೂರು: ಕಚ್ಚಾ ವಸ್ತುಗಳ ಬೆಲೆ ಗಣನೀಯ ಏರಿಕೆ; ಪೀಣ್ಯ ಕೈಗಾರಿಕಾ ಸಂಘದಿಂದ ನಾಳೆ ಬಂದ್‌ಗೆ ಕರೆ

ಬೆಂಗಳೂರು: ಕಚ್ಚಾ ವಸ್ತುಗಳ ಬೆಲೆ ಗಣನೀಯ ಏರಿಕೆ; ಪೀಣ್ಯ ಕೈಗಾರಿಕಾ ಸಂಘದಿಂದ ನಾಳೆ ಬಂದ್‌ಗೆ ಕರೆ
ಸಾಂದರ್ಭಿಕ ಚಿತ್ರ

ಕಿರು, ಸಣ್ಣ ಮತ್ತು ಮಧ್ಯಮ ವಲಯದ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದೆ. ಹೀಗಾಗಿ ನಾಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ತಮ್ಮ ಉದ್ಯಮಗಳನ್ನು ಬಂದ್ ಮಾಡಿ ನಾಳೆಯ ಪ್ರತಿಭಟನೆಗೆ ಹಲವು ಅಸೋಸಿಯೇಷನ್‌ಗಳು ಸಾಥ್ ನೀಡುತ್ತಿವೆ.

TV9kannada Web Team

| Edited By: preethi shettigar

Dec 19, 2021 | 12:49 PM

ಬೆಂಗಳೂರು: ಕಚ್ಚಾ ವಸ್ತುಗಳ ಬೆಲೆ ಗಣನೀಯ ಏರಿಕೆ ಖಂಡಿಸಿ ನಾಳೆ (ಡಿಸೆಂಬರ್ 20) ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಬಂದ್ ಮಾಡಲು, ಪೀಣ್ಯ ಕೈಗಾರಿಕಾ ಸಂಘ ಕರೆ ನೀಡಿದೆ. ನಾಳೆಯ ಬಂದ್​ಗೆ ರಾಜಾಜಿನಗರ ಇಂಡಸ್ಟ್ರೀಸ್ ಅಸೋಸಿಯೇಷನ್, ಬೊಮ್ಮಸಂದ್ರ ಇಂಡಸ್ಟ್ರೀಸ್ ಅಸೋಸಿಯೇಷನ್ ಹಾಗೂ ಮೈಸೂರು ಇಂಡಸ್ಟ್ರೀಸ್ ಅಸೋಸಿಯೇಷನ್‌ಗಳು ಸಾಥ್ ನೀಡಲಿವೆ. ಆ ಮೂಲಕ ಏಷ್ಯಾದಲ್ಲೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಎಂದು ಖ್ಯಾತಿ ಪಡೆದಿರುವ ಪೀಣ್ಯ ಕೈಗಾರಿಕಾ ಪ್ರದೇಶ, ಬೆಲೆ ಏರಿಕೆ ವಿರುದ್ಧ ನಾಳೆ ಬೃಹತ್ ಪ್ರತಿಭಟನೆಗೆ (Protest) ಮುಂದಾಗಿದೆ.

ಕಿರು, ಸಣ್ಣ ಮತ್ತು ಮಧ್ಯಮ ವಲಯದ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದೆ. ಹೀಗಾಗಿ ನಾಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ತಮ್ಮ ಉದ್ಯಮಗಳನ್ನು ಬಂದ್ ಮಾಡಿ ನಾಳೆಯ ಪ್ರತಿಭಟನೆಗೆ ಹಲವು ಅಸೋಸಿಯೇಷನ್‌ಗಳು ಸಾಥ್ ನೀಡುತ್ತಿವೆ.

ಕಚ್ಚಾ ವಸ್ತುಗಳ ಬೆಲೆ ಗಗನಕುಸುಮವಾಗಿದೆ. ಶೇ.40 ರಿಂದ ಶೇ.70 ರಷ್ಟು ಹೆಚ್ಚಾಗಿವೆ. ಏರಿಕೆಯಾಗುತ್ತಿರುವ ಬೆಲೆಯನ್ನು ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಕೈಗಾರಿಕೆ ಸ್ಥಗಿತಗೊಳಿಸಲು ಪೀಣ್ಯ ಕೈಗಾರಿಕಾ ಸಂಘ ತೀರ್ಮಾನ ಮಾಡಿದೆ.

ಕಳೆದ ಒಂದೂವರೆ ವರ್ಷದಿಂದ ಕಚ್ಚಾ ವಸ್ತುಗಳ ಬೆಲೆ ಏರುತ್ತಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಗೆ ಭಾರೀ ಹೊಡೆತ ಬಿದ್ದಿದೆ. ಈ ಹಿನ್ನೆಲೆ ಶೇ.15 ರಷ್ಟು ಇಂಡಸ್ಟ್ರೀಸ್ ಮುಚ್ಚಿವೆ. ಇವತ್ತಿನ ಸ್ಥಿತಿಯಲ್ಲಿ ಶೇ.30 ರಷ್ಟು ಇಂಡಸ್ಟ್ರೀಸ್​ಗಳು ಐಸಿಯುನಲ್ಲಿದೆ. ಆಲ್ ಇಂಡಿಯಾ ಕೌನ್ಸಿಲಿಂಗ್ ಆಫ್ ಅಸೋಸಿಯೇಷನ್ ಎಂಎಸ್​ಎಂಇ ಕೈಗಾರಿಕಾ ಬಂದ್​ಗೆ ಕರೆ ಕೊಟ್ಟಿತ್ತು. ಈ ನಿಟ್ಟಿನಲ್ಲಿ ನಾಳೆ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಾಳೆ ಹಲವು ಕೈಗಾರಿಕೆಗಳು ಬಂದ್ ಆಗಲಿವೆ ಎಂದು ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Budget 2021 ನಿರೀಕ್ಷೆ: ಸಣ್ಣ ಉದ್ಯಮ ಬೆಳೆಯಲು ಕಚ್ಚಾವಸ್ತುಗಳ ಬೆಲೆ ಇಳಿಯಬೇಕು

ಔಷಧ ಉತ್ಪಾದಕ ಕಂಪನಿಗಳಿಂದ ಶೇ. 20ರಷ್ಟು ಔಷಧಗಳ ಬೆಲೆ ಏರಿಕೆಗೆ ಸರ್ಕಾರಕ್ಕೆ ಮನವಿ

Follow us on

Related Stories

Most Read Stories

Click on your DTH Provider to Add TV9 Kannada