ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುವಾಗ ಎಂದಿನಂತೆ ಪುಂಡಾಟ ಮೆರೆದ ಎಮ್ ಈ ಎಸ್ ಗೂಂಡಾಗಳು

ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುವಾಗ ಎಂದಿನಂತೆ ಪುಂಡಾಟ ಮೆರೆದ ಎಮ್ ಈ ಎಸ್ ಗೂಂಡಾಗಳು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 18, 2021 | 5:36 PM

ಅವರು ಎಸಗುವ ಕುಕೃತ್ಯವೆಲ್ಲ ಕೆಮೆರಾನಲ್ಲಿ ಸೆರೆಯಾಗಿದೆ. ಮೊದಲಿಗೆ ಅವರು ಕಲ್ಲು ತೂರಿ ಪೊಲೀಸ್ ವಾಹನವನ್ನು ಜಖಂಗೊಳಿಸುತ್ತಾರೆ. ಕಲ್ಲು ಬೀಸಿದ ನಂತರ ಅಧಮರು ಗೇಟಿನ ಹೊರಗೋಡುತ್ತಾರೆ.

ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆದಾಗಲೆಲ್ಲ ಆ ನಗರದಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರು ತಮ್ಮ ಪುಂಡಾಟ ಶುರುವಿಟ್ಟುಕೊಳ್ಳುತ್ತಾರೆ. ಇಡೀ ಕರ್ನಾಟಕ ಸರ್ಕಾರವೇ ಬೆಳಗಾವಿಯಲ್ಲಿದ್ದರೂ ನಮ್ಮನೇನೂ ಮಾಡಲಾಗದು ಅಂತ ದಾರ್ಷ್ಟ್ಯತೆ ಮೆರೆಯುವ ಪ್ರವೃತ್ತಿ ಅವರಲ್ಲಿ ಬೆಳೆದಂತಿದೆ. ಶುಕ್ರವಾರ ರಾತ್ರಿ ಎಮ್ ಈ ಎಸ್ ದುಷ್ಕರ್ಮಿಗಳು ಪ್ರದರ್ಶಿಸಿದ ದೂಂಡಾವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ಈ ದೃಶ್ಯ ಬೆಳಗಾವಿ ನಗರದರ ಲಾಡ್ಜೊಂದರ ಮುಂದೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 20 ಎಮ್ ಈ ಎಸ್ ಪುಂಡರ ಗುಂಪು ಮಧ್ಯರಾತ್ರಿಯ ನಂತರ ಲಾಡ್ಜ್ ಮುಂದೆ ಪಾರ್ಕ್ ಮಾಡಿರುವ ಪೋಲಿಸ್ ವಾಹನದ ಮೇಲೆ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ.

ಅವರು ಎಸಗುವ ಕುಕೃತ್ಯವೆಲ್ಲ ಕೆಮೆರಾನಲ್ಲಿ ಸೆರೆಯಾಗಿದೆ. ಮೊದಲಿಗೆ ಅವರು ಕಲ್ಲು ತೂರಿ ಪೊಲೀಸ್ ವಾಹನವನ್ನು ಜಖಂಗೊಳಿಸುತ್ತಾರೆ. ಕಲ್ಲು ಬೀಸಿದ ನಂತರ ಅಧಮರು ಗೇಟಿನ ಹೊರಗೋಡುತ್ತಾರೆ. ಗೇಟ್ ಆಚೆ ನಿಂತು ಕಲ್ಲು ತೂರಾಟದ ಸದ್ದು ಕೇಳಿ ಯಾರಾದರೂ ಹೊರ ಬಂದರಾ ಅಂತ ಗಮನಿಸುತ್ತಾರೆ. ಬಂದಿಲ್ಲ ಅನ್ನುವುದನ್ನು ಖಚಿತಪಡಿಸಿಕೊಂಡ ನಂತರ ಒಂದಿಬ್ಬರು ಪುನ: ಒಳಗೆ ಬಂದು ಪೊಲೀಸ್ ವಾಹನಕ್ಕೆ ಕೊಳ್ಳಿಯಿಟ್ಟು ವಾಪಸ್ಸು ಓಡುತ್ತಾರೆ.

ಆದರೆ, ಪ್ರಾಯಶಃ ಸೆಕ್ಯುರಿಟಿ ಗಾರ್ಡ್ ಇರಬಹುದು, ಅವನು ಒಂದು ಬಕೆಟ್ನಲ್ಲಿ ನೀರನ್ನು ತುಂಬಿಕೊಂಡು ಬಂದು ಬೆಂಕಿ ಆರಿಸುತ್ತಾನೆ. ಗಾರ್ಡ್ನ ವರ್ತನೆ ಆಶ್ಚರ್ಯ ಹುಟ್ಟಿಸುತ್ತದೆ. ಅವನು ಅವರೊಂದಿಗೆ ಬೆರೆತಿರುವನಾ ಎಂಬ ಸಂಶಯ ಮೂಡದಿರದು. ಪುಂಡರ ಗುಂಪು ಒಳಬರುವುದನ್ನು ಅವನು ಗಮನಿಸುತ್ತಾನೆ.

ಆದರೆ ರಾತ್ರಿ ಸಮಯದಲ್ಲಿ ನೋಡಲು ಗೂಂಡಾಗಳಂತೆ ಕಾಣುವ 15-20 ಜನರ ಗುಂಪು ಗೇಟಿನಿಂದ ಒಳಬರುತ್ತಿದ್ದರೂ ಅವನು ನೋಡಿ ಯಾರು ಏನು ಎತ್ತ ಎಂದು ವಿಚಾರಿಸದೆ ಲಾಡ್ಜನೊಳಗೆ ಹೋಗುತ್ತಾನೆ. ನಂತರ ಬೆಂಕಿ ಆರಿಸುವಾಗಲೂ ಅವನು ಯಾವುದೇ ಧಾವಂತ ತೋರುವುದಿಲ್ಲ. ಆರಾಮಾಗಿ ಬಂದು ಬೆಂಕಿಯ ಮೇಲೆ ನೀರು ಸುರಿಯುತ್ತಾನೆ.

ಇಷ್ಟೆಲ್ಲ ಆದರೂ ಅವನೇನಾದರೂ ಪೊಲೀಸರಿಗೆ ಮಾಹಿತಿ ನೀಡುವ ಪ್ರಯತ್ನ ಮಾಡಿದನಾ? ಇಲ್ಲ ಅನಿಸುತ್ತದೆ.

ಪೊಲೀಸರು ಮೊದಲು ಅವನ ವಿವಾರಣೆ ನಡೆಸಿದರೆ ಪುಂಡರ ಬಗ್ಗೆ ವಿವರವಾದ ಮಾಹಿತಿ ಸಿಗಬಹುದು.

ಇದನ್ನೂ ಓದಿ:   Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ

Published on: Dec 18, 2021 05:36 PM