ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಾನಸ ವಾರಣಾಸಿ 10ನೇ ಗ್ರೇಡ್ವರೆಗೆ ಓದಿದ್ದು ಮಲೇಷ್ಯಾನಲ್ಲಿ!
ಹೈದರಾಬಾದ್ನ ತೆಲುಗು ಮಾತಾಡುವ ದಂಪತಿಯ ಪುತ್ರಿಯಾದರೂ ಮಾನಸ ಹತ್ತನೇ ಗ್ರೇಡ್ವರೆಗೆ ಮಲೇಷ್ಯಾನಲ್ಲಿ ಓದಿದ್ದಾರೆ. ಅವರ ತಂದೆ ರವಿಶಂಕರ್ ನೌಕರಿ ನಿಮಿತ್ತ ಆ ದೇಶದಲ್ಲಿ ನೆಲೆಸಬೇಕಾಗಿತ್ತು
ಒಂದೇ ತಿಂಗಳ ಅವಧಿಯಲ್ಲಿ ಭಾರತೀಯ ಸುಂದರಿಬ್ಬರು ‘ಭುವನ ಸುಂದರಿ’ ಮತ್ತು ‘ವಿಶ್ವ ಸುಂದರಿ’ ಕಿರೀಟ ಧರಿಸುವುದನ್ನು ನೋಡುವ ಸೌಭಾಗ್ಯದಿಂದ ನಾವು ವಂಚಿತರಾಗಿದೆವೆನೋ ಅಂತೆನಿಸುತ್ತಿದೆ ಮಾರಾಯ್ರೇ. ಹೌದು, ಇಸ್ರೇಲ್ನಲ್ಲಿ ಭುವನ ಸುಂದರಿ ಕಿರೀಟ ಧರಿಸಿದ ಹರ್ನಾಜ್ ಸಂಧು ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಡಿಸೆಂಬರ್ 16 ರಂದು ಉತ್ತರ ಅಮೆರಿಕ ಖಂಡದ ಪುಟ್ಟ ದ್ವೀಪರಾಷ್ಟ್ರವಾಗಿರುವ ಪ್ಯೂರ್ಟೊ ರಿಕೋದ ರಾಜಧಾನಿ ಸ್ಯಾನ್ ಜುವಾನ್ ನಲ್ಲಿ ನಡೆಯಬೇಕಿದ್ದ ಮಿಸ್ ವರ್ಲ್ಡ್ ಪೇಜೆಂಟ್ ಕೊವಿಡ್-19 ಪಿಡುಗಿನಿಂದಾಗಿ ಮುಂದೂಡಲ್ಪಟ್ಟಿದೆ. ಭಾರದತ ಮಾನಸ ವಾರಣಾಸಿ ಸೇರಿದಂತೆ ಸ್ಪರ್ಧೆಯಲ್ಲಿ ಭಾಗವಹಿಸಬೇಕಿದ್ದ ಬೇರೆ ಬೇರೆ ದೇಶಗಳ ಕೆಲ ಸುಂದರಿಯರು ಮತ್ತು ಸ್ಪರ್ಧೆ ಆಯೋಜಿಸುತಿದ್ದ ಸಿಬ್ಬಂದಿಯಲ್ಲಿ ಒಂದಷ್ಟು ಜನರಿಗೆ ಕೊರೋನಾ ಸೋಂಕು ಅಂಟಿರುವುದರಿಂದ ವಿಶ್ವ ಸುಂದರಿ ಸ್ಪರ್ಧೆಯನ್ನು 90 ದಿನಗಳ ಮಟ್ಟಿಗೆ ಮುಂದೂಡಲಾಗಿದೆ.
23-ವರ್ಷ ವಯಸ್ಸಿನ ಮಾನಸ ವಾರಣಾಸಿ ಫೆಮಿನಾ ಮಿಸ್ ಇಂಡಿಯಾ 2020 ವಿಜೇತರಾಗಿದ್ದು ಸ್ವಾಬಾವಿಕವಾಗಿಯೇ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. 2019 ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದ ಜಮೈಕಾದ ಟೋನಿ-ಆನ್ ಸಿಂಗ್ ಅತಿಹೆಚ್ಚು ಸಮಯದವರೆಗೆ ತಲೆಮೇಲೆ ವಿಶ್ವ ಸುಂದರಿ ಕಿರೀಟ ಹೊತ್ತ ಮಹಿಳೆಯೆನಿಸಿಕೊಂಡಿದ್ದಾರೆ. ನಿಮಗೆ ನೆನೆಪಿರಬಹುದು, 2020 ರಲ್ಲಿ ನಡೆಯಬೇಕಿದ್ದ ವಿಶ್ವ ಸುಂದರಿ ಈವೆಂಟ್ ಕೋವಿಡ್-19 ಪಿಡುಗುನಿಂದಾಗಿ ರದ್ದುಗೊಂಡಿತ್ತು.
ಹೈದರಾಬಾದ್ನ ತೆಲುಗು ಮಾತಾಡುವ ದಂಪತಿಯ ಪುತ್ರಿಯಾದರೂ ಮಾನಸ ಹತ್ತನೇ ಗ್ರೇಡ್ವರೆಗೆ ಮಲೇಷ್ಯಾನಲ್ಲಿ ಓದಿದ್ದಾರೆ. ಅವರ ತಂದೆ ರವಿಶಂಕರ್ ನೌಕರಿ ನಿಮಿತ್ತ ಆ ದೇಶದಲ್ಲಿ ನೆಲೆಸಬೇಕಾಗಿತ್ತು. ಅಲ್ಲಿಂದ ವಾಪಸ್ಸಾದ ನಂತರ ಮಾನಸ ಹೈದರಾಬಾದ್ನ ವಾಸವಿ ಇಂಜಿನೀಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದು ಅದೇ ನಗರದಲ್ಲಿ ನೆಲೆಗೊಂಡಿರುವ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಾನಸ ಅವರು ಮಕ್ಕಳ ರಕ್ಷಣೆ ವಿಷಯವನ್ನು ಪ್ರತಿಪಾದಿಸಲಿದ್ದಾರೆ. ಮಕ್ಕಳ ಲೈಂಗಿಕ ಶೋಷಣೆ ವಿರುದ್ಧ ‘ವಿ ಕ್ಯಾನ್’ ಎಂಬ ಜಾಗೃತಿ ಅಭಿಯಾನವನ್ನು ಅವರು ನಡೆಸುತ್ತಿದ್ದು ಈ ಬಗೆಯ ಅಭಿಯಾನ ಹಿಂದೆ ಯಾವತ್ತೂ ನಡೆದಿರಲಿಲ್ಲ ಎಂದು ಹೇಳಲಾಗುತ್ತಿದೆ. ಮಕ್ಕಳಿಗೆ ಶಿಕ್ಷಣ ಒದಗಿಸಬೇಕು ಮತ್ತು ಅವರಿಗೆ ತಮ್ಮ ಬದುಕಿನ ಬಗ್ಗೆ ಕನಸು ಕಾಣುವ ಅವಕಾಶ ಒದಗಿಸಬೇಕು ಎಂದು ಮಾನಸ ಹೇಳುತ್ತಾರೆ.
ಇಷ್ಟೆಲ್ಲ ಬುದ್ಧಿಮತ್ತೆಯ ಜೊತೆಗೆ ಸಾಂಪ್ರದಾಯಿಕ ಚೆಲುವಿನ ಒಡತಿಯಾಗಿರುವ 5 ಅಡಿ 9 ಇಂಚ ಎತ್ತರಿಕ್ಕಿರುವ ‘ಮಿಸ್ ಇಂಡಿಯಾ’ ಮಾನಸ ‘ಮಿಸ್ ವರ್ಲ್ಡ್’ ಆಗಲಾರರೇ?
ಇದನ್ನೂ ಓದಿ: Viral Video: ತನ್ನ ಒಡತಿಯ ಜನ್ಮದಿನಕ್ಕೆ ಚಪ್ಪಾಳೆ ತಟ್ಟಿ ಶುಭಾಶಯ ಹೇಳಿದ ಶ್ವಾನ; ಮುದ್ದಾದ ವಿಡಿಯೋ ಇಲ್ಲಿದೆ