
ಬೇಸಿಗೆ ಕಾಲದಲ್ಲಿ ಮಕ್ಕಳಿಗೆ ರಜೆ ಕೊಡುವಂತೆ, ಈ ಕಂಪನಿಯ ಉದ್ಯೋಗಿಗಳಿಗೂ ಚಳಿಗಾಲದ ರಜೆ ನೀಡುತ್ತಾರೆ. ಹೌದು ಈ ಬಗ್ಗೆ ಫ್ಲಿಪ್‌ಕಾರ್ಟ್ ಉದ್ಯೋಗಿಯೊಬ್ಬರು ತಮ್ಮ ಇನ್ಸ್ಟಾಗ್ರಾಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್‌ನಲ್ಲಿ ಚಳಿ (winter break) ಹೆಚ್ಚಿರುತ್ತದೆ. ಈ ಸಮಯದಲ್ಲಿ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಾರೆ. ಇನ್ನು ಕೆಲವರು ವರ್ಷದ ಕೊನೆಯಲ್ಲಿ ಉಳಿದ ರಜೆಯನ್ನು ತೆಗೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಹಾಜರಾತಿ ಕಡಿಮೆಯಾಗುವುದು ಸಾಮಾನ್ಯ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಉದ್ಯೋಗಿಯೊಬ್ಬರು ಹಂಚಿಕೊಂಡಿದ್ದಾರೆ. ಅವರು ಚಳಿಗಾಲದ ಅವಧಿಯನ್ನು ಇ-ಕಾಮರ್ಸ್ ಕಂಪನಿಗಳಲ್ಲಿ “ಕಡಿಮೆ-ಕೀ ಚಳಿಗಾಲದ ವಿರಾಮ” ಎಂದು ಬಣ್ಣಿಸಿದ್ದಾರೆ.
ಫ್ಲಿಪ್‌ಕಾರ್ಟ್‌ನ ಸಹಾಯಕ ಬ್ರಾಂಡ್ ಮ್ಯಾನೇಜರ್ (ಮಾರ್ಕೆಟಿಂಗ್) ಸಿಮ್ರಾನ್ ಎಂ ಭಂಬಾನಿ ಅವರು ಚಳಿಗಾಲದ ರಜೆ ಆರಂಭ ಮುನ್ನವೇ ಊರಿಗೆ ಹೋರಟಿದ್ದಾರೆ. ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಂತು ಬೆಂಗಳೂರಿನ ಚಳಿಯ ಬಗ್ಗೆ ಹಾಗೂ ಅವರಿಗೆ ಸಿಕ್ಕ ರಜೆಯ ಬಗ್ಗೆ ವಿಡಿಯೋ ಮಾಡಿದ್ದಾರೆ. ” ರಜೆಯ ಅವಧಿಗೆ ಮುಂಚಿತವಾಗಿ ಮನೆಗೆ ಪ್ರಯಾಣಿಸುತ್ತಿದ್ದೇನೆ. ಚಳಿಗಾಲದಲ್ಲಿ, ವಿಶೇಷವಾಗಿ ಡಿಸೆಂಬರ್ 20 ರ ನಂತರ, ನಮ್ಮ ಸಂಸ್ಥೆಯ ಉದ್ಯೋಗಿಗಳು ಹೆಚ್ಚಾಗಿ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗಳನ್ನು ಆರಿಸಿಕೊಳ್ಳುತ್ತಾರೆ ಅಥವಾ ತಮ್ಮ ಉಳಿದ ವಾರ್ಷಿಕ ರಜೆಯನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತಾರೆ. ಹಾಗಾಗಿ ನಾನು ರಜೆ ತೆಗೆದುಕೊಂಡು ಮನೆಗೆ ಹೋಗುತ್ತಿರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇದು ಭಾರತದ ಅತಿ ದುಬಾರಿ ಚಹಾ: ಕೆಜಿ ಪುಡಿಗೆ 1.15 ಲಕ್ಷ ರೂ.
ಚಳಿ ರಜೆ ಸಿಗುವ ಮುನ್ನವೇ ವಿಮಾನ ಪ್ರಯಾಣ ಮಾಡುತ್ತಿದ್ದೇನೆ. ಏಕೆಂದರೆ ವರ್ಷ ಬಂದ ಕಾರಣ ವಿಮಾನದ ಟಿಕೆಟ್ ದರ ಹೆಚ್ಚಾಗುವ ಕಾರಣ, ಮೊದಲೇ ಊರಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಇದರ ನಡುವೆ ಬಾಲ್ಯದ ದಿನಗಳ್ನು ನೆನಪಿಸಿಕೊಂಡಿದ್ದಾರೆ. ಇದು ನನಗೆ ಶಾಲೆಯ ಅನುಭವವನ್ನು ನೆನಪಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಬೇಸಿಗೆ ರಜೆಯಂತೆ ನಮಗೆ ಈಗ ಚಳಿಯ ರಜೆ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ. ನಮಗೆ ಚಳಿ ರಜೆ ಎಂದರೆ ಕೆಲಸ ಇಲ್ಲ ಎಂದಲ್ಲ, ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಮುಂದಿನ ವರ್ಷವೇ ಕಚೇರಿಗೆ ಬರುವುದು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ