AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ ಕೆಂಪೇಗೌಡ ವಿಮಾನ ನಿಲ್ದಾಣದ ಹೊಸ ಗ್ಯಾಲರಿ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಹೊಸ ಸಾರ್ವಜನಿಕ ಗ್ಯಾಲರಿ ಮತ್ತು ಉದ್ಯಾನವನ್ನು ಅನಾವರಣಗೊಳಿಸಿದೆ. ಈ ಸುಂದರ ಹಸಿರು ಪ್ರದೇಶವು ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಮತ್ತು "ಉದ್ಯಾನ ನಗರ" ಬೆಂಗಳೂರಿನ ಖ್ಯಾತಿಯನ್ನು ಎತ್ತಿಹಿಡಿಯಲು ಅವಕಾಶ ನೀಡುತ್ತದೆ. ನೈಸರ್ಗಿಕ ವಿನ್ಯಾಸಗಳು ಮತ್ತು ಮೃದುವಾದ ಬೆಳಕು ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತವೆ, ವಿಮಾನ ನಿಲ್ದಾಣದ ಗದ್ದಲದಿಂದ ಮುಕ್ತಿ ನೀಡುತ್ತವೆ.

ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ ಕೆಂಪೇಗೌಡ ವಿಮಾನ ನಿಲ್ದಾಣದ ಹೊಸ ಗ್ಯಾಲರಿ
ಬೆಂಗಳೂರು ವಿಮಾನ ನಿಲ್ದಾಣ
ಅಕ್ಷಯ್​ ಪಲ್ಲಮಜಲು​​
|

Updated on: Dec 17, 2025 | 12:33 PM

Share

ಬೆಂಗಳೂರು, ಡಿ.17: ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2ರಲ್ಲಿ ಹೊಸ ಸಾರ್ವಜನಿಕ ಗ್ಯಾಲರಿ ಮತ್ತು ಉದ್ಯಾನ ಮಾಡಲಾಗಿದೆ. ಇನ್ನು ಈ ಗ್ಯಾಲರಿಯಿಂದಲ್ಲೇ ವಿಮಾನ ನಿಲ್ದಾಣದ ಒಳಗೆ ಹೋಗಬಹುದು. ಇದು ಜನರಿಗೆ ಹೆಚ್ಚಿನ ಕಾಲ ವಿಶ್ರಾಂತಿ ಪಡೆಯಲು ಅವಕಾಶ ನೀಡುತ್ತದೆ. ಈ ಗ್ಯಾಲರಿಯನ್ನು ತುಂಬಾ ಸುಂದರವಾಗಿ ವಿನ್ಯಾಸ ಮಾಡಲಾಗಿದೆ. ಸಂಪೂರ್ಣ ಹಸಿರಿನಿಂದ ಇದು ಕಂಗೊಳಿಸುತ್ತದೆ. ಇದು ಭಾರತದ “ಉದ್ಯಾನ ನಗರ” ಎಂಬ ಖ್ಯಾತಿಯನ್ನು ಕೂಡ ಪಡೆದುಕೊಂಡಿದೆ. ಈಗಾಗಲೇ ಬೆಂಗಳೂರಿನ ವಿಮಾನ ನಿಲ್ದಾಣದ ಎರಡು ಟರ್ಮಿನಲ್ ಅದ್ಭುತ ವಿನ್ಯಾಸಗಳನ್ನು ಹೊಂದಿದೆ.

ಸಸ್ಯಗಳು, ನೈಸರ್ಗಿಕ ವಿನ್ಯಾಸಗಳು ಮತ್ತು ಹಿತವಾದ ದೃಶ್ಯಗಳು ಪ್ರಯಾಣಿಕರನ್ನು ಸೆಳೆಯುತ್ತದೆ. ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಅಥವಾ ಒಂದು ವೇಳೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಬೇಗ ಬಂದರೆ, ಇಲ್ಲಿ ಕಾಲ ಕಳೆಯಬಹುದು. ಜತೆಗೆ ಬೆಳಕಿನ ವಿನ್ಯಾಸವನ್ನು ಕೂಡ ಅದ್ಭುತವಾಗಿ ಮಾಡಲಾಗಿದೆ. ಜತೆಗೆ ವಿಮಾನ ನಿಲ್ದಾಣಗಳಾಗುವ ಗದ್ದಲಗಳನ್ನು ತಪ್ಪಿಸಲು ಕೂಡ ಇದು ಸಹಾಯಕವಾಗಿದೆ. ಗಾರ್ಡನ್ ಟ್ರಯಲ್​​ನ್ನು ಕೂಡ ವಿನ್ಯಾಸ ಮಾಡಲಾಗಿದೆ. ಪ್ರಕೃತಿ ಆಧಾರಿತ ವಿನ್ಯಾಸ, ಮೃದುವಾದ ಬೆಳಕು ಮತ್ತು ವಿಶಾಲ ಕಾರಿಡಾರ್​​ಗಳನ್ನು ಕೂಡ ಮಾಡಲಾಗಿದೆ.

ಇದನ್ನೂ ಓದಿ: ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಮೂರು ಜಿಲ್ಲೆಗಳ ಗಾಳಿ ಗುಣಮಟ್ಟ ಭಾರೀ ಕುಸಿತ: ಪ್ರವಾಸಿಗರೇ ಎಚ್ಚರ

ಎಕ್ಸ್​​ ಪೋಸ್ಟ್​​ ಇಲ್ಲಿದೆ ನೋಡಿ:

ಇದರ ವಿನ್ಯಾಸ ಹಾಗೂ ಈ ಗ್ಯಾಲರಿ ಹೇಗಿದೆ ಎಂಬುದನ್ನು ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ವಿಮಾನ ನಿಲ್ದಾಣದಲ್ಲಿರುವ ಈ  ವ್ಯವಸ್ಥೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟರ್ಮಿನಲ್ 2 ಈಗಾಗಲೇ ತನ್ನ ಪರಿಸರ ಸ್ನೇಹಿ ಕಲಾಕೃತಿ ಹಾಗೂ ಬಿದಿರಿನಿಂದ ಮಾಡಿದ ವಿನ್ಯಾಸವನ್ನು ಹೊಂದಿದೆ. ಇದೀಗ ಹೊರಾಂಗಣ ಕೂಡ ಅದ್ಭುತವಾಗಿ ಕಾಣುತ್ತಿದೆ. ಇದು ಪ್ರಯಾಣಿಕರಿಗೆ ಮತ್ತಷ್ಟು ಅನುಭವವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ