Bengaluru News: ಅಪಾರ್ಟ್ಮೆಂಟ್ ಲಿಫ್ಟ್​ನಲ್ಲಿ 10 ವರ್ಷದ ಬಾಲಕಿ ಮೇಲೆ ಫುಡ್ ಡೆಲಿವರಿ ಬಾಯ್ ಲೈಂಗಿಕ ದೌರ್ಜನ್ಯ, ಕಾಮುಕ ಅರೆಸ್ಟ್

ಫುಡ್ ಡೆಲಿವರಿ ಬಾಯ್ ಅಪಾರ್ಟ್ಮೆಂಟ್​ನ ಲಿಫ್ಟ್​ನಲ್ಲಿ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

Bengaluru News: ಅಪಾರ್ಟ್ಮೆಂಟ್ ಲಿಫ್ಟ್​ನಲ್ಲಿ 10 ವರ್ಷದ ಬಾಲಕಿ ಮೇಲೆ ಫುಡ್ ಡೆಲಿವರಿ ಬಾಯ್ ಲೈಂಗಿಕ ದೌರ್ಜನ್ಯ, ಕಾಮುಕ ಅರೆಸ್ಟ್
ಪೋಕ್ಸೋ
Follow us
Shivaprasad
| Updated By: ಆಯೇಷಾ ಬಾನು

Updated on:Jun 24, 2023 | 9:30 AM

ಬೆಂಗಳೂರು: ಫುಡ್ ಡೆಲಿವರಿ ಮಾಡಲು ಅಪಾರ್ಟ್ಮೆಂಟ್​ಗೆ ಬಂದಿದ್ದ ಫುಡ್ ಡೆಲಿವರಿ ಬಾಯ್(Food Delivery Boy) ಅಪಾರ್ಟ್ಮೆಂಟ್​ನ ಲಿಫ್ಟ್​ನಲ್ಲಿ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ(Sexual Assault) ಎಸಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ(Bengaluru) ನಡೆದಿದೆ. ಸದ್ಯ ಕಾಮುಕನನ್ನು ಅಪಾರ್ಟ್ಮೆಂಟ್​ಗೆನವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಊಟ ಡೆಲಿವರಿ ಮಾಡಲು ಬಂದ ವ್ಯಕ್ತಿ ಈಗ ಪೋಕ್ಸೋ ಕಾಯ್ದೆ ಅಡಿ ಖಾಕಿ ಸೆರೆಗೆ ಸಿಕ್ಕಿದ್ದಾನೆ.

ಕೆಲಸದ ಒತ್ತಡ ಅಥವಾ ಇನ್ಯಾವುದೋ ಕಾರಣಕ್ಕೆ ಮನೆಯಲ್ಲಿ ಅಡುಗೆ ಮಾಡಲಾಗದೆ ಮನೆಯಲ್ಲೇ ಕೂತು ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡ್ಕೊಂಡು, ಫ್ಯಾಮಿಲಿ ಜೊತೆಗೆ ಆರಾಮಾಗಿ ಊಟ ಮಾಡೋ ಲೈಫ್ ಸ್ಟೈಲ್​ಗೆ ಬೆಂಗಳೂರಿನ ಕೆಲ ಜನರು ಒಗ್ಗಿಕೊಂಡಿದ್ದಾರೆ. ಇದೇ ರೀತಿ ನಿನ್ನೆ(ಜೂನ್ 23) ಕೂಡಾ ಬೆಂಗಳೂರಿನ ತಲ್ಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್​ನಲ್ಲೊಬ್ರು ಆನ್ ಲೈನ್​ನಲ್ಲಿ ಫುಡ್ ಆರ್ಡರ್ ಮಾಡಿದ್ರು. ಆರ್ಡರ್ ಮಾಡಿದ್ದ ಫುಡ್ ತಗೊಂಡು ಡೆಲಿವರಿ ಬಾಯ್ ನಿನ್ನೆ ಅಪಾರ್ಟ್ಮೆಂಟ್ ಗೆ ಬಂದಿದ್ದ. ಅಪಾರ್ಟ್ಮೆಂಟ್ ಗೆ ಬಂದ ಫುಡ್ ಡೆಲಿವರಿ ಬಾಯ್ ಫುಡ್ ಡೆಲಿವರಿ ಮಾಡಿ ಹೋಗುವ ಬದಲಾಗಿ, ಅಪಾಟ್ಮೆಂಟ್ ಲಿಫ್ಟ್ ನಲ್ಲಿ 10 ವರ್ಷದ ಬಾಲಕಿ, 13 ನೇ ಮಹಡಿಗೆ ಹೊರಡಲು ಲಿಫ್ಟ್ ಏರಿದ್ದ ವೇಳೆ ಕಾಮಕ್ರಿಮಿ ಅಟ್ಟಹಾಸಗೈದಿದ್ದಾನೆ. ಲೈಂಗಿಕ ಕಿರುಕುಳ ನೀಡಿ ಹಿಂಸಿಸಿದ್ದಾನೆ.

ಇದನ್ನೂ ಓದಿ: ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಹಂತಕರನ್ನು ಬಂಧಿಸಿ, ಇಲ್ಲ ದಯಾಮರಣ ಕೊಡಿ

ಹೌದು, ನಿನ್ನೆ ಖಾಸಗಿ ಅಪಾರ್ಟ್ಮೆಂಟ್​ಗೆ ಫುಡ್ ಡೆಲಿವರಿಗೆ ಅಂತಾ ಬಂದಿದ್ದ 30 ವರ್ಷದ ಚೇತನ್ ಎಂಬ ಫುಡ್ ಡೆಲಿವರಿ ಬಾಯ್ ಆರ್ಡರ್ ಮಾಡಿದ್ದ ಫ್ಲ್ಯಾಟ್​ಗೆ ಡೆಲಿವರಿ ನೀಡೋಕ್ಕೆ ಲಿಫ್ಟ್ ನಲ್ಲಿ ಹೋಗ್ತಾಯಿದ್ದ, ಆಗ ಅದೇ ಲಿಫ್ಟ್ ನಲ್ಲಿ 10 ವರ್ಷದ ಬಾಲಕಿ‌ ಕೂಡಾ, 13 ನೇ ಅಂತಸ್ತಿನಲ್ಲಿರುವ ತನ್ನ ಫ್ಲಾಟ್ ಗೆ ಹೋಗ್ತಾಯಿದ್ಳು. ಈ ವೇಳೆ ಫುಡ್ ಡೆಲಿವರಿ ಬಾಯ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ದೌರ್ಜನ್ಯ ಎಸಗಿದ್ದಾನೆ. ಕೂಡಲೇ ಬಾಲಕಿ ಪೋಷಕರ ಮೂಲಕ ಅಪಾರ್ಟ್ಮೆಂಟ್​ನ ಸೆಕ್ಯುರಿಟಿ ಗಮನಕ್ಕೆ ತಂದಿದ್ದಾಳೆ. ಆಗ ತಕ್ಷಣ ಸೆಕ್ಯುರಿಟಿ ಫುಡ್ ಡೆಲಿವರಿ ಬಾಯ್ ಚೇತನ್ ನನ್ನ ಪೊಲೀಸ್ರಿಗೆ ಒಪ್ಪಿಸಿದ್ದಾರೆ.

ಬಾಲಕಿ ಲಿಫ್ಟ್ ನಲ್ಲಿ ಒಬ್ಬಳೆ ಇದ್ದ ಕಾರಣ ಲೈಂಗಿಕ ದೌರ್ಜನ್ಯ ಎಸೆಗಿದ್ದು, ಲಿಫ್ಟ್ ನಲ್ಲಿರೋ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ. ಸದ್ಯ ತಲ್ಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ. ಅಪಾರ್ಟ್ಮೆಂಟ್​ನಲ್ಲಿ‌ ನಡೆದಿರುವ ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹುಟ್ಟುಹಾಕಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:09 am, Sat, 24 June 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ