ಬೆಂಗಳೂರಿನ ಕೆಲ ಪ್ರದೇಶಗಳ ಜನರ ನಿದ್ದೆಗೆಡಿಸಿದ್ದ ಕಿಲಾಡಿ ಚಿರತೆ ಕೊನೆಗೂ ಸೆರೆ

| Updated By: ರಮೇಶ್ ಬಿ. ಜವಳಗೇರಾ

Updated on: Nov 01, 2023 | 3:24 PM

ಬೆಂಗಳೂರಿನ ಬೊಮ್ಮನಹಳ್ಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಓಡಾಡುತ್ತಿದ್ದ ಕಿಲಾಡಿ ಚಿರತನೆ ಕೊನೆಗೂ ಸೆರೆ ಸಿಕ್ಕಿದೆ. ಕಳೆದ ಎರಡು ದಿನಗಳಲ್ಲಿ ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ತಂದೊಡ್ಡಿದ್ದ ಚಿರತೆಯನ್ನು (Leopard) ಅರಣ್ಯ ಇಲಾಖೆ ಅಧಿಕಾರಿಗಳು (Forest Officer) ಸತತ ಕಾರ್ಯಾಚರಣೆ ನಂತರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಕೆಲ ಪ್ರದೇಶಗಳ ಜನರ ನಿದ್ದೆಗೆಡಿಸಿದ್ದ ಕಿಲಾಡಿ ಚಿರತೆ ಕೊನೆಗೂ ಸೆರೆ
Follow us on

ಬೆಂಗಳೂರು, (ನವೆಂಬರ್ 01): ಬೆಂಗಳೂರಿನ ಬೊಮ್ಮನಹಳ್ಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಓಡಾಡುತ್ತಿದ್ದ ಕಿಲಾಡಿ ಚಿರತನೆ ಕೊನೆಗೂ ಸೆರೆ ಸಿಕ್ಕಿದೆ. ಪದೇ ಪದೇ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತತಪ್ಪಿಸಿ ಓಡಾಡುತ್ತಿದ್ದ ಚಿರತೆ ಮೂರು ದಿನಗಳ ನಂತರ ಇಂದು (ನವೆಂಬರ್ 01) ಸಿಕ್ಕಿ ಬಿದ್ದಿದೆ. ಕಳೆದ ಎರಡು ದಿನಗಳಲ್ಲಿ ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ತಂದೊಡ್ಡಿದ್ದ ಚಿರತೆಯನ್ನು (Leopard) ಅರಣ್ಯ ಇಲಾಖೆ ಅಧಿಕಾರಿಗಳು (Forest Officer) ಸತತ ಕಾರ್ಯಾಚರಣೆ ನಂತರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಈ ಭಾಗದ ಜನರು ನಿಟ್ಟುಸಿರುಬಿಟ್ಟಿದ್ದಾರೆ.

ಬೊಮ್ಮನಹಳ್ಳಿಯ ಕೂಡ್ಲುಗೇಟ್ ಬಳಿ ಪಾಳುಬಿದ್ದ ಕಟ್ಟಡದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಚಿರತೆ ಕಟ್ಟಡದಲ್ಲಿ ಇರುವುದನ್ನು ಪತ್ತೆಹಚ್ಚಿದ ಥರ್ಮಲ್ ಡ್ರೋನ್ ಪತ್ತೆ ಮಾಡಿತ್ತು. ಇದರ ಆಧಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿ ಕೊನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಬಳಿಕ ಬಲೆ ಮೂಲಕ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಇದರೊಂದಿಗೆ ಮೈಸೂರು ಲೆಪರ್ಡ್ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ಯಶಸ್ವಿಯಾಗಿದೆ.

ಇದನ್ನೂ ಓದಿ: ಅರಿವಳಿಕೆ ನೀಡಲು ಹೋದ ವೈದ್ಯ, ಶಾರ್ಪ್​ ಶೂಟರ್​ ಮೇಲೆ ದಾಳಿ ಮಾಡಿ ಪರಾರಿಯಾದ ಚಿರತೆ

ಸದ್ಯ ಬಲೆಗೆ ಬಿದ್ದ ಚಿರತೆಯನ್ನು ಬೋನ್​ಗೆ ಹಾಕಲಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಮೈಸೂರು ಲೆಪರ್ಡ್ ಟಾಸ್ಕ್ ಫೋರ್ಸ್ ಶೋಧ ನಡೆಸಿದ್ದರು. ಅಲ್ಲದೇ ಅರಣ್ಯ ಇಲಾಖೆ ಡಿಸಿಎಫ್ ರವೀಂದ್ರ ಅವರು ಇಂದು ಬೆಳಗ್ಗೆಯಿಂದ ಕಾರ್ಯಚರಣೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಕಾರ್ಯಾಚರಣೆ ನಡೆದಿದ್ದು ಹೇಗೆ..?

ಬೊಮ್ಮನಹಳ್ಳಿ ಭಾಗದ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪಾಳುಬಿದ್ದ ಬಿಲ್ಡಿಂಗ್​ನಲ್ಲಿ ಚಿರತೆ ಇರುವುದನ್ನು ಥರ್ಮಲ್ ಡ್ರೋಣ್ ‌ಪತ್ತೆ ಮಾಡಿತ್ತು. ಬಳಿಕ ಕಾರ್ಯಚರಣೆಗಿಳಿದ ಅರಣ್ಯ ಸಿಬ್ಬಂದಿಗೆ ಬೆಳಗ್ಗೆ ಚಿರತೆ ಸಿಕ್ಕಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಸಿಬ್ಬಂದಿ ಕಣ್ಣಿಗೆ ಬಿದ್ದಿತ್ತು. ಕೂಡಲೇ ಅರವಳಿಕೆ ಚುಚ್ಚು ಮದ್ದು ನೀಡಲಾಗಿತ್ತು. ಆದರೂ ಅದು ಎಸ್ಕೇಪ್ ಆಗಿತ್ತು. ಕೊನೆಗೆ ಪಾಳು ಬಿದ್ದ ಬಿಲ್ಡಿಂಗ್​ ಸುತ್ತ ಬ್ಯಾರಿಕೇಡ್ ಹಾಗೂ ಬಲೆ ಹಾಕಲಾಗಿತ್ತು. ಅಲ್ಲದೇ ಜೆಸಿಬಿ ಮೂಲಕ ಬಿಲ್ಡಿಂಗ್​ನೊಳಗೆ ಇದ್ದ ಪೊದೆ ತೆರವು ಮಾಡಲಾಯ್ತು. ಅಲ್ಲದೇ ಪೊಲೀಸರು ಸಹ ರೈಫಲ್​ಗಳೊಂದಿಗೆ ಚಿರತೆ ಇದ್ದ ಬಿಲ್ಡಿಂಗ್​ನೊಳಗೆ ಹೋಗಿದ್ದರು.

ಆಟವಾಡಿಸುತ್ತಿದ್ದ ಕಿಲಾಡಿ ಚಿರತೆ

ಮೊನ್ನೆಯಷ್ಟೇ ಬೆಂಗಳೂರಿನ ಬೊಮ್ಮನಹಳ್ಳಿ ಸಮೀಪದ ಕೂಡ್ಲು ಹೊಸಪಾಳ್ಯ ಬಳಿಯ ಅಪಾರ್ಟ್‌ಮೆಂಟ್‌ಗೆ ಚಿರತೆ ಎಂಟ್ರಿಕೊಟ್ಟಿತ್ತು. ಬಿಂದಾಸ್ ಆಗಿ ಓಡಾಡಿತ್ತು. ಇದರ ಸಿಸಿಟಿವಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆ ಭಾಗದ ಜನ ಬೆಚ್ಚಿಬಿದ್ದಿದ್ದರು. ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ರೌಂಡ್ಸ್ ಹಾಕಿದ್ದು ಅರಣ್ಯಾಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು. ಕಳೆದೆರಡು ದಿನಗಳಿಂದ ಬೋನ್‌ಗಳನ್ನು ಇಟ್ಟು ಚಿರತೆ ಸೆರೆಗಾಗಿ ಹಗಲಿರುಳು ಕಾರ್ಯಾಚರಣೆ ನಡೆಸ್ತಿದ್ರೂ ಇನ್ನೂ ಸೆರೆಸಿಕ್ಕಿರಲಿಲ್ಲ. ನಿನ್ನೆ(ಅಕ್ಟೋಬರ್ 31_ ತಡರಾತ್ರಿ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು.

ರಾತ್ರಿ 11 ಗಂಟೆ ವೇಳೆ ಕಾಂಪೌಂಡ್ ಜಿಗಿದು ಚಿರತೆ ಓಡಿದೆ. ಪಾಳು ಬಿದ್ದಿರುವ ಬಿಲ್ಡಿಂಗ್ ಒಳಗೆ ನುಗ್ಗಿರುವ ಶಂಕೆ ಮೇಲೆ ತಡರಾತ್ರಿವರೆಗೂ ಹುಡುಕಾಟಲಾಯ್ತು ಆದ್ರೆ ಅಲ್ಲಿಯೂ ಚಿರತೆ ಕಾಣಸಿಗಲಿಲ್ಲ. ಕೆಲ ಹೊತ್ತು ಕಾಂಪೌಂಡ್ ಮೇಲೆ ಕುಳಿತು ಮತ್ತೆ ಹಳೆ ಕಟ್ಟಡದೊಳಗೆ ನುಗ್ಗಿತ್ತು. ಥರ್ಮಲ್ ಡ್ರೋಣ್ ‌ನಲ್ಲಿ ಚಿರತೆಯ ಚಲನವಲನ ಸೆರೆಯಾಗಿತ್ತು. ಹುಣಸೂರು ವನ್ಯಜೀವಿ ವಿಭಾಗದಿಂದ ಆಗಮಿಸಿದ್ದ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಬೆಳಗ್ಗೆ 6 ಗಂಟೆಯಿಂದ ಮತ್ತೆ ಕಾರ್ಯಾಚರಣೆ ಶುರು ಮಾಡಿತ್ತು.

ಸಿಬ್ಬಂದಿ ಮೇಲೆಯೇ ಅಟ್ಯಾಕ್ ಮಾಡಿ ಪರಾರಿಯಾಗಿದ್ದ ಚಿರತೆ

ಬೆಳಗ್ಗೆ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾಗಿದ್ದ ವೈದ್ಯ ಕಿರಣ್ ಮೇಲೆ ಚಿರತೆ ದಾಳಿ ಕುತ್ತಿಗೆಗೆ ಪರಚಿ ಎಸ್ಕೇಪ್ ಆಗಿತ್ತು.. ಇನ್ನು ಇದೇ ವೇಳೆ ಚಿರತೆ, ಲೆಪರ್ಡ್​ ಟಾಸ್ಕ್​ಫೋರ್ಸ್ ​ಶಾರ್ಪ್​ ಶೂಟರ್​ ಧನ್​ರಾಜ್ ಮೇಲೆ ಅಟ್ಯಾಕ್ ಮಾಡಿತ್ತು. ಇದರಿಂದ ಅವರಿಗೆ ಕಾಲು ಮತ್ತು ಭುಜಕ್ಕೆ ಗಾಯವಾಗಿತ್ತು. ಹಾಗೇ ಕಾರ್ಯಚರಣೆಯಲ್ಲಿರುವ ಬಿಬಿಎಂಪಿ ಸಿಬ್ಬಂದಿ ಮಹೇಶ್ ಮೇಲೂ ದಾಳಿ ಮಾಡಿದ್ದು, ಅವರ ಕಾಲಿಗೆ ಗಾಯವಾಗಿತ್ತು. ಇದೀಗ ಹಲವು ತಂತ್ರ ರಣತಂತ್ರಗಳ ಮೂಲಕ ಅರಣ್ಯ ಸಿಬ್ಬಂದಿ ಕಿಲಾಡಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Wed, 1 November 23