ಬರ ಪರಿಹಾರಕ್ಕಾಗಿ ಸರ್ಕಾರದಿಂದ ಕೇಂದ್ರಕ್ಕೆ ಪತ್ರ; ನನ್ನ ಆರೋಗ್ಯ ಸುಧಾರಿಸಿದ್ರೆ ಪ್ರಧಾನಿ ಭೇಟಿಗೆ ಹೋಗ್ತೀನಿ; ಹೆಚ್​ಡಿಡಿ

ಪ್ರತಿಯೊಬ್ಬರೂ ನಾಡಿನ ಏಳಿಗೆಗಾಗಿ ಶ್ರಮಿಸಬೇಕು. ನಾವು ಕನ್ನಡಿಗರು ಕಡಿಮೆ ಇಲ್ಲ. ಇಂತಹ ಸಂಕಷ್ಟದಲ್ಲಿ ಸರ್ಕಾರ ಹೆಚ್ಚು ಆಸಕ್ತಿವಹಿಸಿ ಕೆಲಸ ಮಾಡಲಿ, ಜನ ತುಂಬಾ ಕಷ್ಟ ಮತ್ತು ನೋವಿನಲ್ಲಿದ್ದಾರೆ. ಯಾವುದೋ ಗ್ಯಾರಂಟಿಯಿಂದ ಜನರಿಗೆ ತೃಪ್ತಿ ಆಗಲ್ಲ. ಜನರ ನೋವನ್ನು ನೋಡೋಕೆ ಆಗುತ್ತಿಲ್ಲ. ನಾನು ಅವರನ್ನೆಲ್ಲ ನೋಡಿದಾಗ 91 ನೇ ವಯಸ್ಸಿನಲ್ಲಿರುವ ನನಗೆ ತುಂಬಾ ನೋವು ಆಗುತ್ತೆ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಮನದಾಳದ ನೋವನ್ನು ತೋಡಿಕೊಂಡರು.

ಬರ ಪರಿಹಾರಕ್ಕಾಗಿ ಸರ್ಕಾರದಿಂದ ಕೇಂದ್ರಕ್ಕೆ ಪತ್ರ; ನನ್ನ ಆರೋಗ್ಯ ಸುಧಾರಿಸಿದ್ರೆ ಪ್ರಧಾನಿ ಭೇಟಿಗೆ ಹೋಗ್ತೀನಿ; ಹೆಚ್​ಡಿಡಿ
ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ
Follow us
Sunil MH
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 01, 2023 | 6:21 PM

ಬೆಂಗಳೂರು, ನ.01: ‘ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ, ಬಾಂಬೆ, ಮುಂಬೈ ಕರ್ನಾಟಕ ಎಂದು ವಿಭಿನ್ನ ಭಾವನೆ ಬರಬಾರದು. ಎಲ್ಲರೂ ಇಡೀ ಕರ್ನಾಟಕ ಸಮೃದ್ಧಿಗಾಗಿ ಆರ್ಥಿಕ, ರಾಜಕೀಯವಾಗಿ ಜೊತೆಗೆ ಎಲ್ಲ ಸಮುದಾಯಗಳು ಬೆಳೆಯಲಿಕ್ಕೆ ಸರ್ಕಾರ ಯೋಜನೆ ರೂಪಿಸುವಂತೆ ಕೆಲಸ ಮಾಡುವುದು ಅವಶ್ಯಕ ಇದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ(HD Deve Gowda) ಹೇಳಿದರು. ಬೆಂಗಳೂರಿ(Bengaluru)ನಲ್ಲಿ ಮಾತನಾಡಿದ ಅವರು ‘ ಬರ ಪರಿಹಾರಕ್ಕಾಗಿ ಸರ್ಕಾರದಿಂದ ಕೇಂದ್ರಕ್ಕೆ ಪ್ರತ್ರ ವಿಚಾರವಾಗಿ ‘ನನ್ನ ಆರೋಗ್ಯ ಸುಧಾರಣೆ ಆದ್ರೆ ಖಂಡಿತವಾಗಿಯೂ ಪ್ರಧಾನಿ ಭೇಟಿಗೆ ಹೋಗುತ್ತೇನೆ. ನಿಮಗೆ ಅರ್ಥ ಆಗುತ್ತೆ ನನ್ನ ಆರೋಗ್ಯ ಸ್ಥಿತಿ ಹೇಗಿದೆ ಎಂದು‌ ಎಂದರು.

‘ಮಧ್ಯ ಕರ್ನಾಟಕದಲ್ಲಿ ರೈತರಿಗೆ ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಕಿದ ಬೆಳೆ ಒಣಗಿದ್ದು, ರೈತರು ಕಿತ್ತು ಹಾಕುತ್ತಿದ್ದಾರೆ. ಇದರಿಂದ ಬೆಳೆ ನಾಶ ಆಗುತ್ತಿದೆ. ನೆಲಗಡಲೆ, ಕಬ್ಬು ಸೇರಿದಂತೆ ವಿವಿಧ ಬೆಳೆಗೆ ಬೆಂಕಿ ಹಾಕಿ ರೈತರು ಸುಡುತ್ತಿದ್ದಾರೆ. ಹೀಗೆ ರಾಜ್ಯದಲ್ಲಿ ಅನೇಕ ಪ್ರಶ್ನೆಗಳಿವೆ. ಸರ್ಕಾರಕ್ಕೆ ಅದೆಲ್ಲವನ್ನು ಎದುರಿಸುವ ಶಕ್ತಿ ಇದೆ. ಈ ಕುರಿತು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಕಾವೇರಿ ವಿವಾದ: ಸಿದ್ದರಾಮಯ್ಯ ಅಭಯಕ್ಕೂ ಮಣಿಯದ ಮಂಡ್ಯದ ರೈತರು, ಮತ್ತೆ 14 ದಿನ ಪ್ರತಿಭಟನೆ

ಜನ ತುಂಬಾ ಕಷ್ಟ, ನೋವಿನಲ್ಲಿದ್ದಾರೆ

ಪ್ರತಿಯೊಬ್ಬರೂ ನಾಡಿನ ಏಳಿಗೆಗಾಗಿ ಶ್ರಮಿಸಬೇಕು. ನಾವು ಕನ್ನಡಿಗರು ಕಡಿಮೆ ಇಲ್ಲ. ಇಂತಹ ಸಂಕಷ್ಟದಲ್ಲಿ ಸರ್ಕಾರ ಹೆಚ್ಚು ಆಸಕ್ತಿವಹಿಸಿ ಕೆಲಸ ಮಾಡಲಿ, ಜನ ತುಂಬಾ ಕಷ್ಟ ಮತ್ತು ನೋವಿನಲ್ಲಿದ್ದಾರೆ. ಯಾವುದೋ ಗ್ಯಾರಂಟಿಯಿಂದ ಜನರಿಗೆ ತೃಪ್ತಿ ಆಗಲ್ಲ. ಜನರ ನೋವನ್ನು ನೋಡೋಕೆ ಆಗುತ್ತಿಲ್ಲ. ನಾನು ಅವರನ್ನೆಲ್ಲ ನೋಡಿದಾಗ 91 ನೇ ವಯಸ್ಸಿನಲ್ಲಿರುವ ನನಗೆ ತುಂಬಾ ನೋವು ಆಗುತ್ತೆ ಎಂದು ಮನದಾಳದ ನೋವನ್ನು ತೋಡಿಕೊಂಡರು. ಇದೇ ವೇಳೆ ನಾಡಿನ ಎಲ್ಲ ಜನತೆಗೆ, ಪ್ರಶಸ್ತಿ ಪುರಸ್ಕೃತರಿಗೆ ಶುಭಾಶಯ ಕೋರುತ್ತೇನೆ ಎಂದರು.

ಹೋರಾಟ ಮಾಡುವ ಕಾಲ ಒಂದು ಇತ್ತು ಹೋರಾಟ ಮಾಡ್ದೆ

ಬೆಂಗಳೂರು ಸೇರಿದಂತೆ ಅನೇಕ ಕಡೆ ನೀರಿಲ್ಲ, ಹೆಣ್ಣು ಮಕ್ಕಳು ನೀರಿಗಾಗಿ ಕಿತ್ತಾಡುವ ಪರಿಸ್ಥಿತಿ ಬಂದಿದೆ. ನಾನು ಎನು ಮಾಡಲಿ ಈ ವಯಸ್ಸಿನಲ್ಲಿ. ಹೋರಾಟ ಮಾಡುವ ಕಾಲ ಒಂದು ಇತ್ತು, ಹೋರಾಟ ಮಾಡಿದೆ. ನನಗೆ ಗೊತ್ತಿದೆ ಕಾವೇರಿ ನೀರಿನಲ್ಲಿ ಎಷ್ಟು ಅನ್ಯಾಯ ಆಗಿದೆಯೆಂದು. ಈ ಸರ್ಕಾರ ಯಾವ ರೀತಿ ನಡೆದುಕೊಂಡಿದೆ. ಮೊನ್ನೆನು ಎರಡುವರೆ ಸಾವಿರ ಕ್ಯೂಸೆಕ್ ಬಿಡುವುದಕ್ಕೆ ಹೇಳಿದೆ. ನನಗೆ ಒಂದು ಅರ್ಥ ಆಗುತ್ತಿಲ್ಲ. ಈ ಅಧಿಕಾರಿಗಳು ಏನು ಕೆಲಸ ಮಾಡ್ತಾರೆ?, ಕೆರೆ ತುಂಬಿದ್ದೀವಿ ಎಂದು ಒಂದು ನೆಪ ಹೇಳಿ, ಜನರಿಗೆ ಸಮಾಧಾನ ಮಾಡೋಕೆ ಆಗಿಲ್ಲ. ನನ್ನ ಆರೋಗ್ಯ ಬೇರೆ ಸರಿಯಲ್ಲ ಏನ್ ಮಾಡಲಿ ಎಂದು ಬರಗಾಲ ನಿರ್ವಹಣೆ ಕುರಿತು ಸರ್ಕಾರದ ನಿರ್ವಹಣೆಗೆ ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?