ಹೆಚ್ ಡಿ ರೇವಣ್ಣ ಏಕಾಂಗಿ ಪ್ರತಿಭಟನೆ! M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ ಸ್ನಾತಕೋತ್ತರ ಪದವಿ ಮಂಜೂರಿಗೆ ಒತ್ತಾಯ

| Updated By: sandhya thejappa

Updated on: Jan 18, 2022 | 2:13 PM

ಸಿಎಂ ಗೃಹ ಕಚೇರಿ ಕೃಷ್ಣಾ ಎದುರು ಪ್ರತಿಭಟನೆ ನಡೆಸುತ್ತಿರುವ ರೇವಣ್ಣ, M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ ಸ್ನಾತಕೋತ್ತರ ಪದವಿ ಮಂಜೂರಿಗೆ ಒತ್ತಾಯಿಸಿದ್ದಾರೆ.

ಹೆಚ್ ಡಿ ರೇವಣ್ಣ ಏಕಾಂಗಿ ಪ್ರತಿಭಟನೆ! M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ ಸ್ನಾತಕೋತ್ತರ ಪದವಿ ಮಂಜೂರಿಗೆ ಒತ್ತಾಯ
ಮಾಜಿ ಸಚಿವ ಹೆಚ್ ಡಿ ರೇವಣ್ಣ
Follow us on

ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Government) ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ಏಕಾಂಗಿಯಾಗಿ ಪ್ರತಿಭಟನೆ (Protest) ಮಾಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾ ಎದುರು ಪ್ರತಿಭಟನೆ ನಡೆಸುತ್ತಿರುವ ರೇವಣ್ಣ, M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ ಸ್ನಾತಕೋತ್ತರ ಪದವಿ ಮಂಜೂರಿಗೆ ಒತ್ತಾಯಿಸಿದ್ದಾರೆ. ಹೊಸ ಸ್ನಾತ್ತಕೋತ್ತರ ಪದವಿ ನೀಡಲು ರಾಜ್ಯ ಸರ್ಕಾರ ನಿರಾಕರಿಸಿದ್ದು, ಹೊಸ ಪದವಿಗಳನ್ನು ನೀಡಲು ಸಾಧ್ಯವಿಲ್ಲ ಅಂತ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜೂರು ಮಾಡಿದ್ದರೂ ಸಚಿವರು ತಡೆ ಹಿಡಿದಿದ್ದಾರೆ ಅಂತ ರೇವಣ್ಣ ಪ್ರತಿಭಟನೆ ಮಾಡುತ್ತಿದ್ದಾರೆ.

ರೇವಣ್ಣಗೆ ಸಿಎಂ ಕರೆ
ಧರಣಿ ನಡೆಸುತ್ತಿದ್ದ ರೇವಣ್ಣ ಜೊತೆ ದೂರವಾಣಿ ಮೂಲಕ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ‌ ಮಾತುಕತೆ ನಡೆಸಿದ್ದಾರೆ. ಶುಕ್ರವಾರ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ. ಸಿಎಂ ಭರವಸೆ ಹಿನ್ನೆಲೆಯಲ್ಲಿ ಎರಡು ಗಂಟೆಗಳ ಕಾಲ ಸಿಎಂ ಗೃಹ ಕಚೇರಿಯಲ್ಲಿ ಕುಳಿತಿದ್ದ ಶಾಸಕ ರೇವಣ್ಣ ವಾಪಸಾಗಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ರೇವಣ್ಣ, ಹೆಚ್​ಡಿಕೆ ನೀಡಿದ್ದನ್ನು ಅಶ್ವತ್ಥ್ ನಾರಾಯಣ ರದ್ದು ಮಾಡಿದ್ದಾರೆ. ನಮಗೆ ಕೊಟ್ಟ ಎಲ್ಲ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಬಡವರ ಮಕ್ಕಳು ಓದುವ ಕಾಲೇಜಿಗೆ ಯಾಕೆ ರಾಜಕೀಯ ಎಂದು ಪ್ರಶ್ನಿಸಿದ್ದಾರೆ. ಉದ್ದೇಶಪೂರ್ವಕವಾಗಿ ಯಾಕೆ ಇದನ್ನ ಸಚಿವರು ತಿರಸ್ಕರಿಸಿದ್ದಾರೆ. ಸರ್ಕಾರ ಪಾಪರ್ ಬಿದ್ದಿದ್ದರೆ ನಾನೇ ಟೀಚರ್​​ಗೆ ಸಂಬಳ ಕೊಡ್ತೀನಿ. ಬೇಕಿದ್ರೆ ಛಾಪಾ ಕಾಗದದ ಮೇಲೆ ಬರೆದುಕೊಡಲು ಸಿದ್ಧ. ಖಾಸಗೀ ಕಾಲೇಜಿಗೆ ಅನುಮತಿ ಕೊಡಲು ಸಚಿವರಿಗೆ ಆಗುತ್ತದೆ. ಕೆಲವರಿಗೆ 300-400 ಕೋಟಿ ರೂ. ನಿಯಮ ಮೀರಿ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಹಣ ಎಲ್ಲಿ ಕೊಟ್ಟಿದ್ದಾರೆ ಅಂತ ಗೊತ್ತಿದೆ ಅಂತ  ಬೆಂಗಳೂರಿನಲ್ಲಿ ಮಾಜಿ ರೇವಣ್ಣ ಹೇಳಿಕೆ ನೀಡಿದ್ದಾರೆ.

ಜನವರಿ 14ಕ್ಕೆ ಮಾಧ್ಯಮದೊಂದಿಗೆ ಮಾತನಾಡಿದ್ದ ರೇವಣ್ಣ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆಯಲ್ಲೂ ರಾಜಕೀಯ ನಡೆಸುತ್ತಿದ್ದಾರೆ. ಹೊಳೆನರಸೀಪುರ ಮಹಿಳಾ ಕಾಲೇಜಿಗೆ ಎಂ.ಎಸ್.ಸಿ ಪದವಿ ಮಂಜೂರು ಮಾಡಲು ರಾಜಕೀಯ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಒಪ್ಪಿಗೆ ನೀಡಿದ್ದಾರೆ. ಮೈಸೂರು ವಿವಿಯವರು ಸಹ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆದೇ ಯಾವುದೇ ಕಾರಣ ಕೊಡದೆ ಕಾಲೇಜಿನ ಕೋರ್ಸ್ ಮಂಜೂರು ಮಾಡಲು ಶಿಕ್ಷಣ ಸಚಿವರು ನಿರಾಕರಣೆ ಮಾಡಿದ್ದಾರೆ. ಹಾಗಾಗಿ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಮನೆ ಎದುರು ಧರಣಿ ಮಾಡುತ್ತೇನೆ. ನಾನು ಅಲ್ಲೇ ಕೂರುತ್ತೇನೆ, ನನ್ನ ಪ್ರಾಣ ಹೋದರೆ ಹೋಗಲಿ, ಅರೆಸ್ಟ್ ಮಾಡ್ತಾರಾ ಮಾಡಲಿ, ಇಂತಾ ಕೀಳು ಮಟ್ಟದ ರಾಜಕಾರಣ ಮಾಡಬೇಡಿ ಎಂದು ಎಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದರು.

ಬಡವರ ಹೆಣ್ಣು ಮಕ್ಕಳು ಅಲ್ಲಿ ಓದುತ್ತಾರೆ, ನನ್ನ ಮಕ್ಕಳು ಅಲ್ಲಿ ಓದುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದ ರೇವಣ್ಣ, ನಾನು ದೇವೇಗೌಡರಿಗೆ ಕೇಳುತ್ತೇನೆ ಈ ಜಿಲ್ಲೆಗೆ ಅನ್ಯಾಯ ಆದಾಗ ನೀವು ಎದ್ದೇಳಬೇಕು. ಜನರು ನಿಮಗೆ ಅಧಿಕಾರ ನೀಡಿದ್ದಾರೆ. ಹಾಗಾಗಿ ನೀವು ಜನರ ಪರವಾಗಿ ಸಿಡಿದೇಳಬೇಕು . ಈ ರಾಜ್ಯ ಲೂಟಿಕೋರರ ಕೈ ಸೇರಿದೆ. ಇವರನ್ನ ಶಿಕ್ಷಣ ಸಚಿವರು ಎನ್ನೋದಕ್ಕೆ ನಾಚಿಕೆ ಆಗಬೇಕು. ಬರಲಿ ನೋಡೋಣ, 2023 ಕ್ಕೆ ಏನಾಗುತ್ರೋ ನೋಡೋಣ ನಾನೂ ಇರುತ್ತೇನೆ. ಇಂತಹ ಶಿಕ್ಷಣ ಸಚಿವರಿಂದ ಸರ್ಕಾರ ಕ್ಕೂ ಕೆಟ್ಟ ಹೆಸರು ಬರ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ

ಶಮಾನಿಸಂಗೆ ಆಕರ್ಷಿತಳಾಗಿ ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆ ಹಚ್ಚಿದ ಪೊಲೀಸರು; ಪೂರ್ಣ ಮಾಹಿತಿ ಇಲ್ಲಿದೆ

ಸ್ತಬ್ಧಚಿತ್ರಗಳ ಆಯ್ಕೆ, ನಿರಾಕರಣೆ ನಮ್ಮ ಕೆಲಸವಲ್ಲ, ಇಂಥ ಪತ್ರ ಬರೆಯಬೇಡಿ ; ಮಮತಾ ಬ್ಯಾನರ್ಜಿ, ಸ್ಟಾಲಿನ್​ ಪತ್ರಕ್ಕೆ ಕೇಂದ್ರದ ಖಡಕ್​ ಪ್ರಕಟಣೆ

Published On - 11:47 am, Tue, 18 January 22