ಬೆಂಗಳೂರು: ಮಾಜಿ ಶಾಸಕನ ಪತ್ನಿ, ವೇರ್ ಹೌಸ್ ಮೆಟಿರಿಯಲ್ಸ್ ತುಂಬಿದ್ದ ವಾಹನ ಹೈಜಾಕ್ ಮಾಡಿರುವ ಘಟನೆ ನಡೆದಿದೆ. ಯಲಹಂಕಕ್ಕೆ ಬರಬೇಕಿದ್ದ ವೇರ್ ಹೌಸ್ ಮೆಟಿರಿಯಲ್ಸ್, ಮೆಷಿನ್ಗಳನ್ನು ಕೃಷ್ಣಗಿರಿಯಲ್ಲಿ ಹೈಜಾಕ್ ಮಾಡಲಾಗಿದೆ.
ಕೃಷ್ಣಗಿರಿ ಮಾಜಿ ಶಾಸಕ ಸುಗೋಟಿಯನ್ ಪತ್ನಿ ಪಾರ್ವತಿ ಮೇಲೆ ದಾಂದಲೆ ಆರೋಪ ಕೇಳಿ ಬಂದಿದೆ. ಎಸ್ ಕೆ ಕಸ್ಟ್ರಕ್ಷನ್ ಮಾಲೀಕ ಎಸ್. ಕಾರ್ತೀಕ್ 30 ಲಕ್ಷ ಮೌಲ್ಯದ ಮೆಟಿರಿಯಲ್ಸ್ ಬುಕ್ ಮಾಡಿದ್ದರು. ವೇರ್ ಹೌಸ್ನ ಅಭಿ ಇಂಡಸ್ಟ್ರೀಸ್ ಮಾಲೀಕ ಅಭಿಷೇಕ್ ಹಣ ನೀಡಬೇಕೆಂದು ದಾಂದಲೆ ಮಾಡಿದ್ದಾರೆ. ಸದ್ಯ ಈ ಸಂಬಂಧ ಕೃಷ್ಣಗಿರಿಗೆ ಎಸ್.ಪಿಗೆ ದೂರು ನೀಡಲು ಯಲಹಂಕ ಎಸ್.ಕೆ.ಕಸ್ಟ್ರಕ್ಷನ್ ಕಾರ್ತೀಕ್ ಮುಂದಾಗಿದ್ದಾರೆ.
ಇದನ್ನೂ ಓದಿ: ನಾಡಿನ ಕಾನೂನು ಅವರಿಗೆ ಒಪ್ಪಿಗೆ ಇಲ್ಲ ಅಂತಾದ್ರೆ ಅವರ ವಾದವನ್ನು ಒಪ್ಪಿಕೊಳ್ಳುವಂಥ ದೇಶಕ್ಕೆ ಹೋಗಲಿ: ಕಲ್ಲಡ್ಕ ಪ್ರಭಾಕರ್ ಭಟ್