ಬೆಂಗಳೂರು: ಎಚ್.ಡಿ.ದೇವೇಗೌಡರು ಹೋದರೆ ಜೆಡಿಎಸ್ ಪಕ್ಷವೇ ಹೋಗುತ್ತೆಂದು ಅಣಕ ಮಾಡುತ್ತಾರೆ. ಆದರೆ ನೀವು ಯಾರೂ ದೇವೇಗೌಡರನ್ನು ನೋಡಿ ಪಕ್ಷಕ್ಕೆ ಬಂದಿಲ್ಲ. ಕಾರ್ಯಕರ್ತರಿಂದಲೇ ಜೆಡಿಎಸ್ ಪಕ್ಷ ಇರುವುದು. ಮುಸ್ಲಿಂ ಸಮುದಾಯವನ್ನು ಜೆಡಿಎಸ್ ಕೈಬಿಡುವುದಿಲ್ಲ. ನಮಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ, ಇದನ್ನು ನಾನು ಸಂಸತ್ತಿನಲ್ಲಿಯೂ ಹೇಳಿದ್ದೇನೆ ಎಂದು ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಹೇಗೆ ಪಕ್ಷ ಸಂಘಟನೆ ಮಾಡಬೇಕು ಎಂದು ಎಲ್ಲರಿಗೂ ಸೂಚನೆ ಕೊಟ್ಟಿದ್ದೇನೆ. ರಾಜಕೀಯವಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡಲು ಮಹಿಳೆಯರು ಆಗಮಿಸಿದ್ದೀರಿ. ನಾನು ಸಿಎಂ ಆಗೋದಿಕ್ಕೆ ಮುಂಚೆಯೇ ಹೆಣ್ಣು ಮಕ್ಕಳಿಗೆ ಏನೂ ಮಾಡಬೇಕು ಎಂದು ಚಿಂತನೆ ಮಾಡಿ ಮೀಸಲಾತಿಗೆ ಹೋರಾಟ ಮಾಡಿದ್ದೆ ಎಂದು ಅವರು ಸಮಾವೇಶದಲ್ಲಿ ನೆರೆದ ಮಹಿಳೆಯರನ್ನುದ್ದೇಶಿಸಿ ತಿಳಿಸಿದರು.
ಆದರೆ ಜೆಡಿಎಸ್ ಮಹಿಳಾ ಸಮಾವೇಶಕ್ಕೆ ಜೆಡಿಎಸ್‌ನ ಏಕೈಕ ಮಹಿಳಾ ಶಾಸಕಿ ಅನಿತಾ ಕುಮಾರಸ್ವಾಮಿ ಗೈರಾಗಿದ್ದರು. ಇದು ಹಲವು ಕುತೂಹಲಕ್ಕೆ ಕಾರಣವಾಗಿದೆ.
ಅರುಣ್ ಸಿಂಗ್ ಹೇಳಿಕೆಗೆ ತಿರುಗೇಟು
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಮುಳುಗುತ್ತಿರುವ ಹಡಗು ಎಂಬ ಹೇಳಿಕೆಗೆ ಜೆಡಿಎಸ್ ನಾಯಕ ಹೆಚ್ ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಅದೇ ಹಡಗಿನ ಜತೆ ಎರಡು ಬಾರಿ ಸರ್ಕಾರ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಇದನ್ನೂ ಓದಿ:
ಜೆಡಿಎಸ್ ಮುಳುಗುತ್ತಿದೆ, ಬಿಜೆಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ: ಮೈಸೂರಿನಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
ಕುಕ್ಕರ್, ಸೀರೆ ಅಲ್ಲ; ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ರಿಯಾಯಿತಿ ಆರೋಗ್ಯ ಕಾರ್ಡ್ನ ಆಮಿಷ!
(Former PM HD DeveGowda says JDS party from karyakarta in Women Samavesha)
Published On - 4:06 pm, Thu, 2 September 21