ರಾಷ್ಟ್ರಕವಿ ಕುವೆಂಪು, ನಾಡಗೀತೆಗೆ ಅಪಮಾನ ಆರೋಪ; ರೋಹಿತ್ ಚಕ್ರತೀರ್ಥ, ಲಕ್ಷ್ಮಣ ಆಕಾಶೆ ಕಾರ್ಕಳ ವಿರುದ್ಧ ದೂರು ದಾಖಲಿಸಿದ ವಕೀಲರ ಸಂಘದ ಮಾಜಿ ಅಧ್ಯಕ್ಷ ರಂಗನಾಥ್
ನಾಡು ನುಡಿಯ ಹೆಮ್ಮೆ ಕುವೆಂಪುರ ಬಗ್ಗೆ ಅವಹೇಳನ ರೀತಿಯಲ್ಲಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಲಕ್ಷ್ಮಣ ಎಂಬುವವರು ಕುವೆಂಪುರ ಬಗ್ಗೆ ಕೆಟ್ಟ ಪದದಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಇಬ್ಬರ ವಿರುದ್ದ ಕ್ರಮ ಕೈಗೊಳ್ಳುವಂತೆ ರಂಗನಾಥ್ ನೇತೃತ್ವದಲ್ಲಿ ದೂರು ನೀಡಲಾಗಿದೆ.
ಬೆಂಗಳೂರು: ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಅವಹೇಳನ ಮಾಡಿ ನಾಡಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ರೋಹಿತ್ ಚಕ್ರತೀರ್ಥ, ಲಕ್ಷ್ಮಣ ಆಕಾಶೆ ಕಾರ್ಕಳ ವಿರುದ್ಧ ದೂರು ದಾಖಲಿಸಲಾಗಿದೆ. ವಕೀಲರ ಸಂಘದ ಮಾಜಿ ಅಧ್ಯಕ್ಷ ರಂಗನಾಥ್ ನೇತೃತ್ವದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ಸಲ್ಲಿಸಲಾಗಿದೆ.
ನಾಡು ನುಡಿಯ ಹೆಮ್ಮೆ ಕುವೆಂಪುರ ಬಗ್ಗೆ ಅವಹೇಳನ ರೀತಿಯಲ್ಲಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಲಕ್ಷ್ಮಣ ಎಂಬುವವರು ಕುವೆಂಪುರ ಬಗ್ಗೆ ಕೆಟ್ಟ ಪದದಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಸಮಾಜ ಸ್ವಾಸ್ಥ ಕೆಡುವ ಪ್ರಚೋದಿತ ಹಿನ್ನಲೆ ಇಬ್ಬರ ವಿರುದ್ದ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ರಂಗನಾಥ್ ನೇತೃತ್ವದಲ್ಲಿ ದೂರು ನೀಡಲಾಗಿದೆ.
ಕನ್ನಡ ಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥ, ವಿದ್ಯಾರ್ಥಿಗಳು ಏನ್ನು ಕಲಿಯಬೇಕು ಎಂಬುವುದನ್ನು ನಿರ್ಧರಿಸಬೇಕೆ? ಬೆಂಗಳೂರು: ರೋಹಿತ್ ಚಕ್ರತೀರ್ಥ ಎಂಬ ವಿಕೃತ ಮನಸ್ಸಿನ ವ್ಯಕ್ತಿ 2017ರಲ್ಲಿ ನಾಡಗೀತೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ ಪದ್ಯವಿದು. ನಾಡಗೀತೆಗೆ ಅವಮಾನ ಮಾಡಿದ, ಕನ್ನಡ ಧ್ವಜವನ್ನು ಒಳ ಉಡುಪಿಗೆ ಹೋಲಿಸಿದ ರೋಹಿತ್ ಚಕ್ರತೀರ್ಥ ಎಂಬ ಮತಾಂಧ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ಎಂದು ಟ್ವಿಟರ್ನಲ್ಲಿ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ ಕಾಡಿದ್ದಾರೆ.
ಸರ್ಕಾರ ಈ ಶತಮೂರ್ಖನಿಗೆ ಪಠ್ಯ ಪರಿಷ್ಕರಿಸುವ ಜವಾಬ್ದಾರಿ ನೀಡಿದೆ. ಇಂತಹ ವ್ಯಕ್ತಿ ಪಠ್ಯವನ್ನು ನಿರ್ಧರಿಸುವುದು ದುರಂತವಲ್ಲವೆ? ರೋಹಿತ್ ಚಕ್ರತೀರ್ಥ ಎಂಬ ಈ ವಿಕೃತ ಮನಸ್ಸಿನ ವ್ಯಕ್ತಿ 2017ರಲ್ಲಿ ನಾಡಗೀತೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ. ನಮ್ಮ ಕನ್ನಡದ ಬಾವುಟವನ್ನು ಒಳ ಉಡುಪಿಗೆ ಹೋಲಿಸಿದ್ದ. ನಾಡಗೀತೆಗೆ ಅಪಮಾನಿಸಿದ್ದ ಈ ಮತಾಂಧ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ. ಇಂಥವನನ್ನ ಅಧ್ಯಕ್ಷನನ್ನಾಗಿ ಮಾಡಿರುವುದು ನಾಚಿಕೆಗೇಡು. ಅಧ್ಯಯನ ಇಲ್ಲದ, ಅನುಭವ ಇಲ್ಲದ ರೋಹಿತ್‌ನಂಥವರು ವಿದ್ಯಾರ್ಥಿಗಳು ಏನ್ನು ಕಲಿಯಬೇಕು ಎಂದು ನಿರ್ಧರಿಸಬೇಕೆ? ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಲಿಕಾ ವಿಷಯವನ್ನು ಇಂತಹ ವ್ಯಕ್ತಿ ನಿರ್ಧರಿಸಲು ಹೊರಟಿರುವುದು ವಿಪರ್ಯಾಸ ಎಂದು ಆಕ್ರೋಶ ಹೊರ ಹಾಕಿದ್ದಾರೆ.
3ಹಿಂದಿನ ಸರ್ಕಾರಗಳು ಪಠ್ಯ ಪುಸ್ತಕ ಪರಿಷ್ಕರಿಸಲು ಲೇಖಕರನ್ನು,ಚಿಂತಕರನ್ನು ಹಾಗೂ ವಿಷಯ ತಜ್ಞರನ್ನು ಮುಖ್ಯಸ್ಥರನ್ನಾಗಿ ನೇಮಿಸುತ್ತಿದ್ದವು.ಆದರೆ ಈಗಿನ ಸರ್ಕಾರ ಧರ್ಮದ ಅಫೀಮ್ ತಲೆಗೇರಿಸಿಕೊಂಡ ಶತಮೂರ್ಖನೊಬ್ಬನಿಗೆ ಪಠ್ಯ ಪುಸ್ತಕ ಪರಿಷ್ಕರಿಸುವ ಜವಾಬ್ಧಾರಿ ನೀಡಿದೆ. ಮೂರ್ಖನ ಸಲಹೆಯ ಆಧಾರದಲ್ಲಿ ಇಂದಿನ ವಿದ್ಯಾರ್ಥಿಗಳು ಪಾಠ ಕಲಿಯಬೇಕಾಗಿದೆ
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 23, 2022
Published On - 10:35 pm, Thu, 26 May 22