AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣಿ ಪ್ರಿಯರಿಗೆ ಗುಡ್​​ನ್ಯೂಸ್​​: ದಕ್ಷಿಣ ಆಫ್ರಿಕಾದ ಚೀತಾಗಳು ಬನ್ನೇರುಘಟ್ಟದಲ್ಲಿ ಜೂನ್ 4ರಿಂದ ವೀಕ್ಷಣೆಗೆ ಲಭ್ಯ

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿರುವ ದಕ್ಷಿಣ ಆಫ್ರಿಕಾದ ನಾಲ್ಕು ಚೀತಾಗಳು ಜೂನ್ 4ರಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿವೆ. ದಕ್ಷಿಣ ಆಫ್ರಿಕಾದ ಇಂಡುನಾ ಪ್ರೈಮೇಟ್ ಮತ್ತು ಪ್ಯಾರಟ್ ಪಾರ್ಕ್‌ನಿಂದ ಬೆಂಗಳೂರಿಗೆ ಏಪ್ರಿಲ್​​ 18ರಂದು ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿ ನಾಲ್ಕು ಚೀತಾಗಳನ್ನು ಕರೆತರಲಾಗಿತ್ತು. ಅವುಗಳ ಕಡ್ಡಾಯ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.

ಪ್ರಾಣಿ ಪ್ರಿಯರಿಗೆ ಗುಡ್​​ನ್ಯೂಸ್​​: ದಕ್ಷಿಣ ಆಫ್ರಿಕಾದ ಚೀತಾಗಳು ಬನ್ನೇರುಘಟ್ಟದಲ್ಲಿ ಜೂನ್ 4ರಿಂದ ವೀಕ್ಷಣೆಗೆ ಲಭ್ಯ
ದಕ್ಷಿಣ ಆಫ್ರಿಕಾದ ಚೀತಾImage Credit source: Eshwar Khandre Facebook Page
ಪ್ರಸನ್ನ ಹೆಗಡೆ
|

Updated on:May 29, 2026 | 4:20 PM

Share

ಬೆಂಗಳೂರು, ಮೇ 29: ಪ್ರಾಣಿ ಪ್ರಿಯರಿಗೆ ಅರಣ್ಯ ಇಲಾಖೆ ಗುಡ್​​ನ್ಯೂಸ್​​ ನೀಡಿದ್ದು, ಕಳೆದ ತಿಂಗಳು ಬೆಂಗಳೂರಿಗೆ (Bengaluru) ತರಲಾಗಿದ್ದ ದಕ್ಷಿಣ ಆಫ್ರಿಕಾದ ನಾಲ್ಕು ಚೀತಾಗಳು ಜೂನ್ 4ರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ. ಚೀತಾಗಳು ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅವುಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಚೀತಾಗಳ ಸಹಜ ಚುರುಕು ಚಲನವಲನಗಳಿಗೆ ಅನುಗುಣವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಹೊಸ ಎನ್‌ಕ್ಲೋಸರ್‌ನಲ್ಲಿ ಅವುಗಳನ್ನು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಅರಣ್ಯ ಇಲಾಖೆಯಿಂದ ಪ್ರಾಣಿ ಪ್ರಿಯರಿಗೆ ಶುಭಸುದ್ದಿ
  • ಸಾರ್ವಜನಿಕರಿಗೆ ಆಫ್ರಿಕಾ ಚೀತಾಗಳ ವೀಕ್ಷಣೆಗೆ ಅವಕಾಶ
  • ಬನ್ನೇರುಘಟ್ಟದಲ್ಲಿ ಜೂನ್ 4ರಿಂದ ವೀಕ್ಷಣೆಗೆ ವ್ಯವಸ್ಥೆ

ದಕ್ಷಿಣ ಆಫ್ರಿಕಾದ ಇಂಡುನಾ ಪ್ರೈಮೇಟ್ ಮತ್ತು ಪ್ಯಾರಟ್ ಪಾರ್ಕ್‌ನಿಂದ ಬೆಂಗಳೂರಿಗೆ ಏಪ್ರಿಲ್​​ 18ರಂದು ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿ ನಾಲ್ಕು ಚೀತಾಗಳನ್ನು ಕರೆತರಲಾಗಿತ್ತು. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಅವುಗಳನ್ನು ಸ್ಥಳಾಂತರಿಸಲಾಗಿತ್ತು. ಇವುಗಳನ್ನು ಭಾರತಕ್ಕೆ ಕರೆತರುವ ಮೊದಲು ದಕ್ಷಿಣ ಆಫ್ರಿಕಾದಲ್ಲೇ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್​​ ಮಾಡಲಾಗಿತ್ತು. ಬಳಿಕ ಬೆಂಗಳೂರಿಗೆ ಬಂದ ನಂತರವೂ 30 ದಿನಗಳಿಗಿಂತ ಹೆಚ್ಚು ಕಾಲ ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿ ಇವನ್ನು ಇಡಲಾಗಿದ್ದು, ಪಶುವೈದ್ಯರ ವಿಶೇಷ ತಂಡವು ಅವುಗಳ ಆರೋಗ್ಯ ಮತ್ತು ಪರಿಸರ ಹೊಂದಾಣಿಕೆಯನ್ನು 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಿತ್ತು.

ಇದನ್ನೂ ಓದಿ: ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!

ಕರ್ನಾಟಕದಲ್ಲಿ ‘ಶಿವಂಗಿ’ ಎಂದು ಕರೆಯಲ್ಪಡುತ್ತಿದ್ದ ಏಷ್ಯಾಟಿಕ್ ಚೀತಾಗಳು ಡೆಕ್ಕನ್ ಸಮತಟ್ಟು ಪ್ರದೇಶಗಳಲ್ಲಿ ಕಂಡುಬರುತ್ತಿದ್ದವು. ಆದರೆ ಅತಿಯಾದ ಬೇಟೆ ಮತ್ತು ವಾಸಸ್ಥಳ ನಾಶದಿಂದಾಗಿ ಅವು ನಾಮಾಶೇಷಾಗಿವೆ. ಭಾರತದಲ್ಲಿ ಏಷ್ಯಾಟಿಕ್ ಚೀತಾ ಸಂಪೂರ್ಣವಾಗಿ ಅಳಿದುಹೋಗಿದ್ದರೂ, ಇದೀಗ ಆಫ್ರಿಕನ್ ಚೀತಾಗಳನ್ನು ರಾಜ್ಯದ ಪ್ರಮುಖ ಜೈವಿಕ ಉದ್ಯಾನವನಲ್ಲಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಿರೋದು ಪ್ರಾಣಿ ಪ್ರಿಯರ ಸಂತಸ ಹೆಚ್ಚಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:54 pm, Fri, 29 May 26

Follow Us
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ