ಹೆಚ್​ಎಸ್​ಆರ್​​ ಲೇಔಟ್​ನಿಂದ ಅಪಹರಣಕ್ಕೀಡಾಗಿದ್ದವರ ರಕ್ಷಣೆ: ನಾಲ್ವರು ವಶಕ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 15, 2023 | 8:10 PM

ಬೆಂಗಳೂರಿನ HSR ಲೇಔಟ್​ನಿಂದ ಅಪಹರಣಕ್ಕೀಡಾಗಿದ್ದ ನಂದನ್, ಕಾರ್ತಿಕ್ ರಕ್ಷಿಸಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಟಿವಿ9ಗೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಹೇಳಿದ್ದಾರೆ.

ಹೆಚ್​ಎಸ್​ಆರ್​​  ಲೇಔಟ್​ನಿಂದ ಅಪಹರಣಕ್ಕೀಡಾಗಿದ್ದವರ ರಕ್ಷಣೆ: ನಾಲ್ವರು ವಶಕ್ಕೆ
ಅಪಹರಣ
Follow us on

ಬೆಂಗಳೂರು: ನಗರದ HSR ಲೇಔಟ್​ನಿಂದ ಅಪಹರಣಕ್ಕೀಡಾಗಿದ್ದವರನ್ನು ರಕ್ಷಣೆ ಮಾಡುವ ಮೂಲಕ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನಂದನ್, ಕಾರ್ತಿಕ್ ರಕ್ಷಣೆಗೊಳಗಾದವರು. ಈ ಪ್ರಕರಣ ಕುರಿತಾಗಿ ಟಿವಿ9ಗೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ರಾತ್ರಿ 12ಗಂಟೆ ಸುಮಾರಿಗೆ ವಿಡಿಯೋ ಮೂಲಕ ಮಾಹಿತಿ ಸಿಕ್ಕಿತ್ತು. ತಕ್ಷಣ ಕಿಡ್ನ್ಯಾಪ್ ಕೇಸ್ ದಾಖಲಿಸಿ ರಕ್ಷಣೆಗಾಗಿ 2 ತಂಡ ರಚಿಸಲಾಗಿತ್ತು ಎಂದರು.

ಸ್ನೇಹಿತರ ನಡುವೆ ಹಣಕಾಸಿನ ವ್ಯವಹಾರ ಹಿನ್ನೆಲೆ ಗಲಾಟೆಯಾಗಿತ್ತು. ಹಣ ಕೊಡಬೇಕಾಗಿದ್ದವನನ್ನು ಬಲವಂತವಾಗಿ ಗ್ಯಾಂಗ್ ಎಳೆದೊಯ್ದಿದೆ. ಎಲ್ಲರೂ ಆಂಧ್ರ ಮೂಲದವರಾಗಿದ್ದಾರೆ, ಅಪಹರಕ್ಕೀಡಾದವರ ರಕ್ಷಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪ್ರತೇಕ ಘಟನೆ: ಕಚೇರಿಯಲ್ಲೇ ನೋಡಲ್ ಅಧಿಕಾರಿ ಆತ್ಮಹತ್ಯೆ, ಮನೆಯಲ್ಲಿ ನೇಣಿಗೆ ಶರಣಾದ ಶಿಕ್ಷಕಿ

ಪುಷ್ಪ ಸಿನಿಮಾ ಮಾದರಿಯಲ್ಲಿ ಗಾಂಜಾ ಪೂರೈಸುತ್ತಿದ್ದ ಗ್ಯಾಂಗ್​​​ ಬಂಧನ

ಪುಷ್ಪ ಸಿನಿಮಾ ಮಾದರಿಯಲ್ಲಿ ಗಾಂಜಾ ಪೂರೈಸುತ್ತಿದ್ದ ಗ್ಯಾಂಗ್​​ ಒಂದನ್ನು​ ಪೊಲೀಸರ ಬಂಧಿಸಿದ್ದಾರೆ. ಕುಖ್ಯಾತ ಗಾಂಜಾ ಪೆಡ್ಲರ್​​ ಚಾಂದ್​​​​ ಸಹೋದರ ಸಲ್ಮಾನ್​ ಪಾಷಾ, ಚಂದ್ರಭಾನು ಬಿಷ್ಣೋಯ್​​, ಲಕ್ಷ್ಮೀಮೋಹನ್ ದಾಸ್ ಬಂಧಿತರು. ಸಿಸಿಬಿ ಮಹಿಳಾ ಸಂರಕ್ಷಕ ದಳದ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ 12 ಕೋಟಿ ರೂ. ಮೌಲ್ಯದ 1,500 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಹಾಸನ: ಮಲಗಿದ್ದಲ್ಲೇ ನಿಗೂಢವಾಗಿ ಸಾವನ್ನಪ್ಪಿದ ಉತ್ತರ ಪ್ರದೇಶ ಮೂಲದ ಯುವಕರು

ಪುಷ್ಪ ಸಿನಿಮಾ ಮಾದರಿಯಲ್ಲಿ ​​ಆಂಧ್ರದ ವಿಶಾಖಪಟ್ಟಣದಿಂದ ಬೆಂಗಳೂರಿಗೆ ಗಾಂಜಾ ಪೂರೈಕೆ ಮಾಡಲಾಗುತ್ತಿತ್ತು. ಪಾಷಾ ವಿಚಾರಣೆ ವೇಳೆ ಗಾಂಜಾ ಪೂರೈಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾನೆ. ಗಾಂಜಾ ಪೂರೈಕೆಗೆಂದೇ ಗೂಡ್ಸ್ ವಾಹನದ ಚಾರ್ಸಿ ಮಾರ್ಪಾಡು ಮಾಡಲಾಗಿದೆ. ಅದರಲ್ಲಿ ಗಾಂಜಾ ಪ್ಯಾಕ್​ಗಳನ್ನು ಜೋಡಿಸಿ ಕ್ಲೋಸ್​​ ಮಾಡುತ್ತಿದ್ದರು. ಬಳಿಕ ಅದರ ಮೇಲೆ ಖಾಲಿ ಕಾಟನ್​ ಬಾಕ್ಸ್​ಗಳನ್ನು ಇಟ್ಟು ಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ಕಳೆದ 3 ವಾರದಿಂದ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:19 pm, Sat, 15 July 23