ಬಾಗಲಕೋಟೆ ಜಿಲ್ಲೆಯಲ್ಲಿ ನಕಲಿ ಎಸಿಬಿ ಗ್ಯಾಂಗ್​ನಿಂದ ವಂಚನೆ: ಕರೆ ಮಾಡಿ ಹಣಕ್ಕೆ ಬೇಡಿಕೆ

ಟ್ರ್ಯೂ ಕಾಲರ್‌ನಲ್ಲಿ ಎಸಿಬಿ ಡಿವೈಎಸ್​ಪಿ ಎಂದು ಗೋಚರವಾಗಿದೆ. ಸಂಶಯ ಬಂದು ಈಶ್ವರ ಕುರುಬಗಟ್ಟಿ ಅವರಿಂದ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇತರೆ ಅಧಿಕಾರಿಗಳಿಗೆ ವಿವಿಧ ನಂಬರ್​ಗಳಿಂದ ಕರೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ನಕಲಿ ಎಸಿಬಿ ಗ್ಯಾಂಗ್​ನಿಂದ ವಂಚನೆ: ಕರೆ ಮಾಡಿ ಹಣಕ್ಕೆ ಬೇಡಿಕೆ
ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್
Updated By: ಗಂಗಾಧರ​ ಬ. ಸಾಬೋಜಿ

Updated on: May 07, 2022 | 5:20 PM

ಬೆಂಗಳೂರು: ರಾಜ್ಯದಲ್ಲಿ ಪಿಎಸ್​ಐ ನೇಮಕಾತಿ ಡೀಲ್‌ ಬೆನ್ನಲ್ಲೇ ನಕಲಿ ಎಸಿಬಿ ಅಧಿಕಾರಿಗಳ ಜಾಲ ಬೆಳಕಿಗೆ ಬಂದಿದೆ. ಜಿಲ್ಲೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಮೂಲಕ ಪ್ರಕರಣ ಬಯಲಾಗಿದೆ. ಎಸಿಬಿ ಅಧಿಕಾರಿಗಳ ಹೆಸರು ಹೇಳಿ ಡೀಲ್​ಗೆ ಯತ್ನ. ನಾವು ಎಸಿಬಿ ಅಧಿಕಾರಿಗಳು. ನಿಮ್ಮ ಮೇಲೆ ಎಸಿಬಿ ದಾಳಿ ಆಗುತ್ತೆ ಹುಷಾರ್. ಕೂಡಲೆ ಹಣ ಸೆಟಲ್ ಮಾಡಿ‌ ಬಚಾವಾಗಿ ಎಂದು ಜಿಲ್ಲೆಯ ಒಂಬತ್ತು ಇಲಾಖೆಯ ವಿವಿಧ ಅಧಿಕಾರಿಗಳಿಗೆ ಕರೆ ಮಾಡಲಾಗಿದೆ. ಬಾಗಲಕೋಟೆ ಎಸಿಬಿ ಡಿವೈ ಎಸ್​ಪಿ ಸುರೇಶ್ ರೆಡ್ಡಿ ಸೇರಿದಂತೆ ಎಸಿಬಿ ವಿವಿಧ ಅಧಿಕಾರಿಗಳ ಹೆಸರಲ್ಲಿ ವಂಚಕರು ಕರೆ ಮಾಡಿದ್ದಾರೆ.  ವಿವಿಧ ಅಧಿಕಾರಿಗಳಿಂದ ಅರ್ಧ ಕೋಟಿಯಷ್ಟು ಹಣ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಹಣ ಕೊಟ್ಟು ಸುಮ್ಮನೆ ಇರುವ ಕೆಲ ಅಧಿಕಾರಿಗಳು. 9035706932 ನಂ ನಿಂದ ಎಇಇ ಈಶ್ವರ ಕುರುಬಗಟ್ಟಿಗೂ ಕರೆ ಮಾಡಿ ಬೆದರಿಕೆ, ಡೀಲ್​ಗೆ ಯತ್ನಿಸಿಲಾಗಿದೆ.

ಟ್ರ್ಯೂ ಕಾಲರ್‌ನಲ್ಲಿ ಎಸಿಬಿ ಡಿವೈಎಸ್​ಪಿ ಎಂದು ಗೋಚರವಾಗಿದೆ. ಸಂಶಯ ಬಂದು ಈಶ್ವರ ಕುರುಬಗಟ್ಟಿ ಅವರಿಂದ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇತರೆ ಅಧಿಕಾರಿಗಳಿಗೆ ವಿವಿಧ ನಂಬರ್​ಗಳಿಂದ ಕರೆ ಮಾಡಲಾಗಿದೆ. ಬೇರೆ ಬೇರೆ ಜನರ ಖಾತೆಗೆ ಹಣ ಹಾಕಿಸಿಕೊಂಡು ಹಣ ಎತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ವಂಚಕನ ಬಗ್ಗೆ ಸಿಇಎನ್ ಪೊಲೀಸರಿಂದ ಶೋಧ ಕಾರ್ಯ ನಡೆಸಲಾಗುತ್ತದೆ. ನಕಲಿ ಎಸಿಬಿ ಜಾಲ ಇರುವ ಬಗ್ಗೆ ಶಂಕೆಯಿದ್ದು, ಬಾಗಲಕೋಟೆ ಸಿಇಎನ್ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ ಎಂದು ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.

ರಾಯಚೂರು ಸರ್ಕಾರಿ ಅಧಿಕಾರಿಗಳಿಗೆ ನಕಲಿ ಎಸಿಬಿ ತಂಡದಿಂದ ಬ್ಲಾಕ್​ಮೇಲ್​ ಕರೆ! ಹಣಕ್ಕೆ ಬೇಡಿಕೆ

ರಾಯಚೂರು: ಜಿಲ್ಲೆಯ ಸರ್ಕಾರಿ (Government) ಅಧಿಕಾರಿಗಳಿಗೆ ನಕಲಿ ಎಸಿಬಿ ತಂಡದಿಂದ ಬ್ಲಾಕ್​ಮೇಲ್​ (Blackmail) ಕರೆ ಬಂದಿರುವ ಘಟನೆ ನಡೆದಿದೆ. ಫೇಕ್ ಕಾಲ್​ನಿಂದ ಕೆಲವು ಹಿರಿಯ ಅಧಿಕಾರಿಗಳು ಕಂಗಾಲಾಗಿದ್ದಾರೆ. ಅಧಿಕಾರಿ ಹನುಮಂತ ಜೊತೆ ಮಾತಾಡಿರುವ ಆಡಿಯೋ ವೈರಲ್ ಆಗಿದೆ. ಇನ್ನು ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಜೊತೆಗೆ ದಾಳಿ ಮಾಡದಿರಲು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಸದ್ಯ ಈ ಪ್ರಕರಣ ರಾಯಚೂರು ಸೈಬರ್ ಕ್ರೈಂ ವಿಭಾಗದ ಠಾಣೆಯಲ್ಲಿ ದಾಖಲಾಗಿದೆ.

ಅಬಕಾರಿ ನಿರೀಕ್ಷಕ ಹನುಮಂತ ಎಂಬುವವರ ಜೊತೆ ಆರೋಪಿ ಮಾತನಾಡಿರುವ ಆಡಿಯೋ ಕ್ಲಿಪ್ ಟಿವಿ9 ಗೆ ಲಭ್ಯವಾಗಿದೆ. ಆರೋಪಿಗಳು ರಾಯಚೂರು ಎಸಿಬಿ ಡಿವೈಎಸ್​ಪಿ ವಿಜಯ್ ಕುಮಾರ್ ಹೆಸರು ದುರ್ಬಳಕೆ ಮಾಡಿಕೊಂಡು ಅಬಕಾರಿ ಇಲಾಖೆ ಡಿಸಿ ಲಕ್ಷ್ಮೀ ನಾಯಕ್, ಅಬಕಾರಿ ಇಲಾಖೆ ನಿರೀಕ್ಷಕ ಹನುಮಂತ ಗುತ್ತಿಗೆದಾರ್​ಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಜೊತೆಗೆ ಜಿ.ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮ ರೆಡ್ಡಿಗೂ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳನ್ನು ಒದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.