ಪ್ರಯಾಣಿಕರ ಗಮನಕ್ಕೆ: ಜು.18 ರಿಂದ ಪ್ಲಾಟ್‌ಫಾರ್ಮ್ 1 ರ ಮೂಲಕ ಯಶವಂತಪುರ ರೈಲು ನಿಲ್ದಾಣದ ಪ್ರವೇಶಕ್ಕೆ ನಿಷೇಧ

|

Updated on: Jul 15, 2023 | 8:48 PM

ಜು.18 ರಿಂದ ನವೀಕರಣ ಕಾರ್ಯ ಪ್ರಾರಂಭವಾಗುವ ಹಿನ್ನೆಲೆ ಯಶವಂತಪುರ ರೈಲು ನಿಲ್ದಾಣದ ಪ್ಲಾಟ್​ಫಾರಂ ನಂಬರ್​ ಒಂದರ ಮೂಲಕ ಪ್ರಯಾಣಿಕರು ನಿಲ್ದಾಣದ ಒಳಗೆ ಪ್ರವೇಶಕ್ಕೆ ನಿಷೇಧಿಸಲಾಗಿದೆ.

ಪ್ರಯಾಣಿಕರ ಗಮನಕ್ಕೆ: ಜು.18 ರಿಂದ ಪ್ಲಾಟ್‌ಫಾರ್ಮ್ 1 ರ ಮೂಲಕ ಯಶವಂತಪುರ ರೈಲು ನಿಲ್ದಾಣದ ಪ್ರವೇಶಕ್ಕೆ ನಿಷೇಧ
ಯಶವಂತಪುರ ರೈಲು ನಿಲ್ದಾಣ
Follow us on

ಬೆಂಗಳೂರು: ಜು.18 ರಿಂದ ನವೀಕರಣ ಕಾರ್ಯ ಪ್ರಾರಂಭವಾಗುವ ಹಿನ್ನೆಲೆ ಯಶವಂತಪುರ ರೈಲು ನಿಲ್ದಾಣದ (Yeshwantpur Railway Station) ಪ್ಲಾಟ್​ಫಾರಂ ನಂಬರ್​ ಒಂದರ (Platform) ಮೂಲಕ ಪ್ರಯಾಣಿಕರು ನಿಲ್ದಾಣದ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಯಶವಂತಪುರ ಮೆಟ್ರೊ (Metro) ನಿಲ್ದಾಣದ ಬಳಿ ಇರುವ ಪ್ಲಾಟ್‌ಫಾರ್ಮ್ ಆರರ ಸೈಡ್ ಎಂಟ್ರಿಯಿಂದ ನಿಲ್ದಾಣಕ್ಕೆ ಪ್ರವೇಶಿಸಲು ಮತ್ತು ನಿಲ್ದಾಣದಲ್ಲಿನ ಕಾಲು ಮೇಲ್ಸೇತುವೆಗಳ ಮೂಲಕ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶಿಸಲು ನೈಋತ್ಯ ರೈಲ್ವೆ (SWR) ಅಧಿಕಾರಿಗಳು ಪ್ರಯಾಣಿಕರಿಗೆ ವಿನಂತಿಸಿದ್ದಾರೆ.

ಪ್ಲಾಟ್‌ಫಾರ್ಮ್ ಆರರಲ್ಲಿ ಮಾತ್ರ ಪಾರ್ಕಿಂಗ್ ಲಭ್ಯವಿರುತ್ತದೆ ಮತ್ತು ಬ್ಯಾಟರಿ ಚಾಲಿತ ವಾಹನಗಳು ಶುಲ್ಕದ ಆಧಾರದ ಮೇಲೆ ಲಭ್ಯವಿರುತ್ತವೆ. ಡಿಜಿಟಲ್ ಮಾಹಿತಿ ಫಲಕಗಳು ಕೆಲವು ದಿನಗಳವರೆಗೆ ಬಂದ್​ ಇರಲಿವೆ. ಈ ಸಮಯದಲ್ಲಿ ಎಲ್ಲಾ ರೈಲ್ವೇ ಸಂಬಂಧಿತ ಮಾಹಿತಿಯನ್ನು ಹಸ್ತಚಾಲಿತ ಪ್ರಕಟಣೆಗಳ ಮೂಲಕ ಪ್ರಸಾರ ಮಾಡಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ