ಟ್ರಾಫಿಕ್ ಜಾಮ್​ ಉಂಟಾಗಲು ಕಾರಣಗಳೇನು? ಒಂದು ವಾಕ್ಯದಲ್ಲಿ ಉತ್ತರಿಸಿ ಎಂದ ಯಶವಂತಪುರ ಪೊಲೀಸ್​​

ಬೆಂಗಳೂರಿನ ಟ್ರಾಫಿಕ್​ ಜಾಮ್​ ವಿಚಾರವಾಗಿ ಯಶವಂತಪುರ ಟ್ರಾಫಿಕ್​ ಪೊಲೀಸ್​ ಸಾರ್ವಜನಿಕರಿಗೆ ಟ್ರಾಫಿಕ್​ ಜಾಮ್​ ಉಂಟಾಗಲು ಕಾರಣ ಏನು? ಒಂದು ವಾಕ್ಯದಲ್ಲಿ ಉತ್ತರಿಸಿ. ಅತ್ಯುತ್ತಮ ಉತ್ತರ ನೀಡುವವರಿಗೆ ಉತ್ತಮ ಬಹುಮಾನವೂ ಇದೆ ಎಂದು ಹೇಳುವ ಮೂಲಕ ಟ್ವೀಟ್​ ಮಾಡಿದ್ದಾರೆ.

ಟ್ರಾಫಿಕ್ ಜಾಮ್​ ಉಂಟಾಗಲು ಕಾರಣಗಳೇನು? ಒಂದು ವಾಕ್ಯದಲ್ಲಿ ಉತ್ತರಿಸಿ ಎಂದ ಯಶವಂತಪುರ ಪೊಲೀಸ್​​
ಯಶವಂತಪುರ ಟ್ರಾಫಿಕ್​ ಪೊಲೀಸ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 08, 2023 | 11:33 PM

ರಾಜ್ಯ ರಾಜಧಾನಿ ಬೆಂಗಳೂರು ಎಂದಾಕ್ಷಣ ಸಾಕಷ್ಟು ಸಂಗತಿಗಳು ನಮ್ಮ ಕಣ್ಣ ಮುಂದೆ ಹೋಗುತ್ತದೆ. ಅದರಲ್ಲಿ ಪ್ರಮುಖವಾಗಿ ಬೆಂಗಳೂರಿನ ಟ್ರಾಫಿಕ್​ ಜಾಮ್ (traffic jam) ಕೂಡ ಒಂದು. ವಿಶ್ವದಲ್ಲಿಯೇ ಅತೀ ಹೆಚ್ಚು ವಾಹನಗಳ ದಟ್ಟಣೆ ಇರುವ ನಗರಗಳಲ್ಲಿ ಸಿಲಿಕಾನ್​ ಸಿಟಿ ಕೂಡ ಒಂದು. ಬೆಂಗಳೂರಿನ ಟ್ರಾಫಿಕ್​ ಜಾಮ್​ಗೆ ಮೂಗು ಮೂರಿಯದ ಜನರು ಇಲ್ಲ. ಇಂಹತ ಟ್ರಾಫಿಕ್​ ಜಾಮ್​ ನಿಯಂತ್ರಣಕ್ಕೆ ಸರ್ಕಾರ ಹೊಸ ಹೊಸ ಯೋಜನೆ, ನಿಯಮಗಳನ್ನು ಆಗಾಗ ಜಾರಿಗೊಳಿಸುತ್ತಿರುತ್ತದೆ.

ಸದ್ಯ ಇದೇ ಬೆಂಗಳೂರಿನ ಟ್ರಾಫಿಕ್​ ಜಾಮ್​ ವಿಚಾರವಾಗಿ ಯಶವಂತಪುರ ಟ್ರಾಫಿಕ್​ ಪೊಲೀಸ್​​  ಸಾರ್ವಜನಿಕರಿಗೆ ಟ್ರಾಫಿಕ್​ ಜಾಮ್​ ಉಂಟಾಗಲು ಕಾರಣ ಏನು? ಒಂದು ವಾಕ್ಯದಲ್ಲಿ ಉತ್ತರಿಸಿ. ಅತ್ಯುತ್ತಮ ಉತ್ತರ ನೀಡುವವರಿಗೆ ಉತ್ತಮ ಬಹುಮಾನವೂ ಇದೆ ಎಂದು ಹೇಳುವ ಮೂಲಕ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ನನ್ನಾಕಿ ಹೃದಯದಲ್ಲಿರಲಿ, ಗಾಡಿ ನಂಬರ್ ಪ್ಲೇಟ್ ಮೇಲಲ್ಲ! ವೈರಲ್ ಆಗ್ತಿದೆ ಹುಬ್ಬಳ್ಳಿ ಧಾರವಾಡ ಪೊಲೀಸರ ಜಾಗೃತಿ ಸಂದೇಶ

ಟ್ವೀಟ್​ನಲ್ಲಿ ಏನಿದೆ?

ಮೇಷ್ಟ್ರು: ಟ್ರಾಫಿಕ್ ಜಾಮ್​ಗಳು ಉಂಟಾಗಲು ಕಾರಣಗಳೇನು ಮತ್ತು ಅವುಗಳನ್ನು ಹೇಗೆ ನಿವಾರಿಸಬಹುದು? (1 ವಾಕ್ಯದಲ್ಲಿ ಉತ್ತರಿಸಿ)

ಬುದ್ದಿವಂತ ವಿದ್ಯಾರ್ಥಿಗಳು ಈ ಕೂಡಲೇ ಉತ್ತರಿಸಬಹುದು. (ಪ್ರತಿಯೊಬ್ಬರೂ ಸಹ ವಿದ್ಯಾರ್ಥಿಗಳೇ ಅಂಬೋದು ಸತ್ಯ ಅಲ್ವಾ)

“ಅತ್ಯುತ್ತಮ ಉತ್ತರದ ಮಾಲೀಕರಿಗೆ ನಮ್ಮೊಟ್ಟಿಗೆ ಠಾಣೆಯಲ್ಲಿ ಕಾಫಿ ಕುಡಿಯುವ ಅವಕಾಶ ಉಂಟು” ಎಂದು ಟ್ವೀಟ್​ ಮಾಡಿದೆ.

ಯಶವಂತಪುರ ಟ್ರಾಫಿಕ್​ ಪೊಲೀಸ್​ರ ಈ ಟ್ವೀಟ್​ಗೆ ಸಾಕಷ್ಟು ಜನರು ಮರು ಟ್ವೀಟ್​ ಮಾಡುವ ಮೂಲಕ ಅತ್ಯುತ್ತಮ ಉತ್ತರ ನೀಡಲು ಪ್ರಯಿತ್ನಿಸಿದ್ದಾರೆ. ಕಾರಣಗಳು ಹಲವಾರು, ನಿವಾರಣೆಗೆ ಕೈಗೂಡಿಸಬೇಕು ಪೊಲೀಸರು ಹಾಗೂ ವಾಹನ ಸವಾರರು.

ಇದನ್ನೂ ಓದಿ: ಬೆಂಗಳೂರಿನ ಸುತ್ತಮುತ್ತ ಧಾರಾಕಾರ ಮಳೆ; ಬೈಕ್ ಸವಾರರು, ರಸ್ತೆ ಬದಿ ವ್ಯಾಪಾರಿಗಳ ಪರದಾಟ

ಅನವಶ್ಯಕ ಗಡಿಬಿಡಿ, ಅಸಹನೆ, ಟ್ರಾಫಿಕ್ ಗದ್ದಲ ಗೋಜುಗಳಲ್ಲಿ ಮೊಂಡು ಕೋಪ, ಸರ್ ಹೀಗೆ ಹೇಳುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತೆ. ನಮ್ಮ ಸುರಕ್ಷತೆ ಹೊಣೆಹೊತ್ತ ಪೊಲೀಸ್​ ದೇವರಿಗೆ ಸಹಕಾರ ನೀಡಿದರೆ, ನಮ್ಮೆಲ್ಲ ಬಾಳು ಚೆಂದ.

ಒಬ್ಬರ ಹಿಂದೆ ಒಬ್ಬರು ಹೋಗುವ ಬದಲು ಓವರ್​ಟೇಕ್​ ಮಾಡುವುದು ಟ್ರಾಫಿಕ್ ಜಾಮ್​ಗೆ ಮೂಲ ಕಾರಣ. ಹೀಗೆ ಸಾಕಷ್ಟು ಜನರು ತಮ್ಮ ತಮ್ಮ ಉತ್ತರಗಳನ್ನು ನೀಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.