G20: ಪ್ರಸ್ತುತ ಆರ್ಥಿಕತೆಗೆ ರಿಡ್ಯೂಸ್, ರಿಯೂಸ್, ರೀಸೈಕಲ್ ಎನರ್ಜಿ ನೀತಿ ಅನುಸರಿಸುವುದು ಜಿ 20 ರಾಷ್ಟ್ರಗಳಿಗೆ ಅತ್ಯಗತ್ಯ – ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ

| Updated By: ಸಾಧು ಶ್ರೀನಾಥ್​

Updated on: Feb 05, 2023 | 4:11 PM

pralhad joshi: ಜಿ 20 ರಾಷ್ಟ್ರಗಳ ಮುಂದೆ ಗ್ಲೋಬಲ್ ಕ್ಲೈಮೆಟ್ ಚೇಂಜ್ ದೊಡ್ಡ ಸವಾಲಾಗಿದೆ.‌ ಪರಿಸರಕ್ಕೆ ಹಾನಿ ಮಾಡದಂತೆ ಎನಿರ್ಜಿ ಉತ್ಪಾದನೆಗೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಹೆಚ್ಚು ಗಮನ ಹರಿಸಿದೆ. ಇದಕ್ಕಾಗಿ ಭಾರತ ಸರ್ಕಾರ ಕೈಗೊಂಡಿರುವ ಇಂಧನ ಪರಿವರ್ತನಾ ಕ್ರಮಗಳ ಕುರಿತು ಪ್ರಲ್ಹಾದ್ ಜೋಶಿ ಸಭೆಯಲ್ಲಿ ವಿವರಿಸಿದರು.

G20: ಪ್ರಸ್ತುತ ಆರ್ಥಿಕತೆಗೆ ರಿಡ್ಯೂಸ್, ರಿಯೂಸ್, ರೀಸೈಕಲ್ ಎನರ್ಜಿ ನೀತಿ ಅನುಸರಿಸುವುದು ಜಿ 20 ರಾಷ್ಟ್ರಗಳಿಗೆ ಅತ್ಯಗತ್ಯ - ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ
ಬೆಂಗಳೂರಿನಲ್ಲಿ ನಡೆದಿರುವ ಜಿ20 ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ ಪ್ರಲ್ಹಾದ್ ಜೋಶಿ
Follow us on

ಬೆಂಗಳೂರು: ಪ್ರಪಂಚದಲ್ಲೇ ದೊಡ್ಡ ಆರ್ಥಿಕತೆ ಹೊಂದಿರುವ ಜಿ20 ರಾಷ್ಟ್ರಗಳು ಸುಸ್ಥಿರ, ಸೆಕ್ಯುರ್ ಮತ್ತು ಕ್ಲೀನ್ ಎನರ್ಜಿಯತ್ತ ಸಾಗಬೇಕಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಸಚಿವ ಪ್ರಲ್ಹಾದ್ ಜೋಶಿ (pralhad joshi) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಜಿ20 ರಾಷ್ಟ್ರಗಳ (G 20 countries) ಪ್ರಥಮ ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆಯಲ್ಲಿ (G20 Energy Transitions Group Meeting in Bengaluru – ETWG) ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಜಿ 20 ರಾಷ್ಟ್ರಗಳ ಪ್ರತಿನಿಧಿಯವರನ್ನು ಭಾರತದ ಪರವಾಗಿ ಸ್ವಾಗತಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎನರ್ಜಿ ಟ್ರಾನ್ಸಿಶನ್ ನಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ರಾಷ್ಟ್ರಗಳು ಪರಸ್ಪರ ಸಹಕರಿಸಬೇಕು ಎಂದರು. ಶಕ್ತಿಯ ಪರಿವರ್ತನೆಗೆ ಎಲ್ಲಾ ಪಾಲುದಾರರಿಂದ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯಗಳನ್ನು ಬೆಂಬಲಿಸಿದಾಗ ಮಾತ್ರ ಶುದ್ಧ ಇಂಧನಕ್ಕೆ ಸಾರ್ವತ್ರಿಕ ಪ್ರವೇಶ ಸಾಧ್ಯ ಎಂದು ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.

ಭಾರತೀಯರು ರಿಡ್ಯೂಸ್-ರಿಯೂಸ್-ರೀಸೈಕಲ್ ಎನರ್ಜಿ ನೀತಿಯನ್ನು (reduce, reuse, recycle energy policy) ಅನುಸರಿಸುತ್ತಿದೆ. ಭೂಮಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಎಲ್ಲವನ್ನೂ ಒದಗಿಸುತ್ತದೆ. ಆದರೆ ಇದು ಮನುಷ್ಯನ ದುರಾಸೆಯಾಗಬಾರದು. ಇಂಧನ ಸಂರಕ್ಷಣೆ ಮತ್ತು ಸುಸ್ಥಿರತೆಯ ಮಹತ್ವವನ್ನು ಅರಿತು ಜಿ 20 ರಾಷ್ಟ್ರಗಳು ಮುನ್ನಡೆಯಬೇಕಿದೆ ಎಂದರು.

ಜಿ 20 ರಾಷ್ಟ್ರಗಳ ಮುಂದೆ ಗ್ಲೋಬಲ್ ಕ್ಲೈಮೆಟ್ ಚೇಂಜ್ ದೊಡ್ಡ ಸವಾಲಾಗಿದೆ.‌ ಪರಿಸರಕ್ಕೆ ಹಾನಿ ಮಾಡದಂತೆ ಎನಿರ್ಜಿ ಉತ್ಪಾದನೆಗೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಹೆಚ್ಚು ಗಮನ ಹರಿಸಿದೆ. ಇದಕ್ಕಾಗಿ ಭಾರತ ಸರ್ಕಾರ ಕೈಗೊಂಡಿರುವ ಇಂಧನ ಪರಿವರ್ತನಾ ಕ್ರಮಗಳ ಕುರಿತು ಪ್ರಲ್ಹಾದ್ ಜೋಶಿ ಸಭೆಯಲ್ಲಿ ವಿವರಿಸಿದರು.

ಈ ಪರಿವರ್ತನೆಯ ಸಮಯದಲ್ಲಿ ಭಾಗವಹಿಸುವ G20 ಪ್ರತಿನಿಧಿಗಳು ಪರಸ್ಪರ ಬೆಂಬಲಿಸುವಂತೆ ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದರು. ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಅಗತ್ಯವಿರುವವರಿಗೆ ಆರ್ಥಿಕ ಮತ್ತು ತಾಂತ್ರಿಕ ಸಹಾಯವನ್ನು ಒದಗಿಸಲು ಒತ್ತು ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಪ್ರಸ್ತುತ ಸಮಯದಲ್ಲಿ ಭಾರತ ಸರಕಾರದ ಯೋಜನೆ ಹಾಗೂ ಕ್ರಮಗಳನ್ನು ಪ್ರತಿನಿಧಿಗಳು ಶ್ಲಾಘಿಸಿದರು. ಕೇಂದ್ರ ವಿದ್ಯುತ್ ಸಚಿವರಾದ ಆರ್.ಕೆ. ಸಿಂಗ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Published On - 4:08 pm, Sun, 5 February 23