AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಜ್ ವೆಸ್ಟ್ ಎಂಡ್ ಬಗ್ಗೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದ ಬಿಜೆಪಿ ನಾಯಕ, ಸಿಡಿ ಯಾತ್ರೆ ಮಾಡಲಿ ಎಂದ ಎಚ್​ಡಿಕೆ

ಕುಮಾರಸ್ವಾಮಿ ಕುರಿತ ಸಿಡಿ, ತೋಟದ ಮನೆ ಮತ್ತು ತಾಜ್ ವೆಸ್ಟ್ ಎಂಡ್ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಬಿಜೆಪಿ ಎಂಎಲ್​ಸಿ ಎನ್.ರವಿಕುಮಾರ್ ಹೇಳಿದರು.

ತಾಜ್ ವೆಸ್ಟ್ ಎಂಡ್ ಬಗ್ಗೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದ ಬಿಜೆಪಿ ನಾಯಕ, ಸಿಡಿ ಯಾತ್ರೆ ಮಾಡಲಿ ಎಂದ ಎಚ್​ಡಿಕೆ
ಎನ್.ರವಿಕುಮಾರ್, H.D.ಕುಮಾರಸ್ವಾಮಿ
TV9 Web
| Edited By: |

Updated on:Feb 05, 2023 | 9:12 PM

Share

ಬೆಂಗಳೂರು: ಕುಮಾರಸ್ವಾಮಿ (H D Kumaraswamy) ಕುರಿತ ಸಿಡಿ, ತೋಟದ ಮನೆ ಮತ್ತು ತಾಜ್ ವೆಸ್ಟ್ ಎಂಡ್ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಬಿಜೆಪಿ ಎಂಎಲ್​ಸಿ ಎನ್.ರವಿಕುಮಾರ್ (N Ravikumar) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಇದೇ ತರಹ ಮುಂದುವರಿದ್ರೆ ನಾವು ಕೂಡ ಮುಂದೆ ಮಾತಾಡ್ತೇವೆ. ಹೆಚ್​.ಡಿ.ಕುಮಾರಸ್ವಾಮಿ ಏನೂ ಬಹಳ ಸತ್ಯ ಹರಿಶ್ಚಂದ್ರ ಅಲ್ಲ. ತಾಜ್ ವೆಸ್ಟ್ ಎಂಡ್​ ಹೋಟೆಲ್​ನಿಂದ ಆಡಳಿತ ನಡೆಸುತ್ತಿದ್ದರು. H.D.ಕುಮಾರಸ್ವಾಮಿ ಸ್ವಜಾತಿ ಬಿಟ್ಟು ಹೊರಬರದ ಕೂಪ ಮಂಡೂಕ ಎಂದು ಎನ್.ರವಿಕುಮಾರ್ ವಾಗ್ದಾಳಿ ಮಾಡಿದರು.

ನಿಮ್ಮ ಕುಟುಂಬ ಬಿಟ್ಟು ಜೆಡಿಎಸ್ ಸಿಎಂ ಅಭ್ಯರ್ಥಿ ಯಾರೆಂದು ಹೇಳಿ

ಕೂಪ ಮಂಡೂಕ ನಾಯಕ ಯಾರಾದ್ರು ಇದ್ದರೆ ಅದು ಕುಮಾರಸ್ವಾಮಿ. ನಿಮ್ಮ ಕುಟುಂಬ ಬಿಟ್ಟು ಜೆಡಿಎಸ್ ಸಿಎಂ ಅಭ್ಯರ್ಥಿ ಯಾರೆಂದು ಹೇಳಿ ಎಂದು ಪ್ರಶ್ನಿಸಿದರು. ಬ್ರಾಹ್ಮಣ ಸಮಾಜದ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಬಿಜೆಪಿ ಖಂಡಿಸುತ್ತೆ. ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಬರುತ್ತೆ ಅಂತಾ ಅಂದುಕೊಂಡಿದ್ದಾರೆ. ನನ್ನ ಮನೆ ಬಾಗಿಲಿಗೆ ಬರಬೇಕೆಂದು ಅದ್ಭುತ ಆಸೆ ಇಟ್ಟುಕೊಂಡಿದ್ದಾರೆ. ಕೂಪ ಮಂಡೂಕ ಯೋಚನೆಗಳಿಗೆ H.D.ಕುಮಾರಸ್ವಾಮಿ ಉದಾಹರಣೆ ಎಂದರು.

ಇದನ್ನೂ ಓದಿ: ಸುಮ್ಮ ಸುಮ್ಮನೆ ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ: ಸಿದ್ದರಾಮಯ್ಯ

ಸತ್ಯ ಹೇಳಿದರೆ H.D.ಕುಮಾರಸ್ವಾಮಿಗೆ ಕೋಪ ಬರುತ್ತೆ

ಪಂಚರತ್ನ ಯಾತ್ರೆ ಬಗ್ಗೆ ಪ್ರಹ್ಲಾದ್ ಜೋಶಿ ಸರಿಯಾಗಿಯೇ ಹೇಳಿದ್ದಾರೆ. ಸತ್ಯ ಹೇಳಿದರೆ ಮಾಜಿ ಸಿಎಂ H.D.ಕುಮಾರಸ್ವಾಮಿಗೆ ಕೋಪ ಬರುತ್ತದೆ. ಕರ್ನಾಟಕದಲ್ಲಿ ಪೇಶ್ವೆ ಬ್ರಾಹ್ಮಣ, ಸ್ಮಾರ್ತ ಬ್ರಾಹ್ಮಣ ಅಂತಾ ಏನಿಲ್ಲ. ಬ್ರಾಹ್ಮಣರ ಬಗ್ಗೆ ಕುಮಾರಸ್ವಾಮಿ ಏನೂ ಪಿಹೆಚ್​ಡಿ ಮಾಡಿದ್ದಾರಾ ಎಂದರು. ಜೆಡಿಎಸ್​ನಲ್ಲಿದ್ದ ಒಬ್ಬ ಬ್ರಾಹ್ಮಣ YSV ದತ್ತ ಯಾಕೆ ಬಿಟ್ಟು ಹೋದರು? ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಭಯದಿಂದ HDK ಮಾತಾಡ್ತಿದ್ದಾರೆ. ಜೆಡಿಎಸ್ ಬಗ್ಗೆ ನಾವು ಯಾವತ್ತೂ ಸಾಫ್ಟ್ ಇರಲಿಲ್ಲ ಎಂದು ಎನ್.ರವಿಕುಮಾರ್ ಹೇಳಿದರು.

ರವಿ ಕುಮಾರ್​ಗೆ ಕುಮಾರಸ್ವಾಮಿ ತಿರುಗೇಟು

ಹೆಚ್‌ಡಿಕೆರದ್ದು ಸಿಡಿಯಿದೆ ಎಂದು N.ರವಿಕುಮಾರ್‌ ಹೇಳಿಕೆ ವಿಚಾರಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಬಿಜೆಪಿಯವ್ರು ವಿಜಯೋತ್ಸವ ಯಾತ್ರೆ ಬಿಟ್ಟು, ಸಿಡಿ ಯಾತ್ರೆ ಮಾಡಲಿ. ಸಿಡಿ ತೋಟದ ಮನೆಯದ್ದೋ ಅಥವಾ ವೆಸ್ಟೆಂಡ್‌ ಹೋಟೆಲ್‌ನದ್ದೋ ಯಾವ್ಯಾವ ಸಿಡಿ ಇವೆ ಎಂದು ಯಾತ್ರೆಯಲ್ಲಿ ತೋರಿಸಿಕೊಂಡು ಹೋಗ್ಲಿ. ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ್‌ ಒಂದು ಸಿಡಿ ಬಿಡ್ತಾರಂತಲ್ಲಾ ಎಂದು ಪ್ರಶ್ನಿಸಿದರು. ಇದನ್ನು ಸೇರಿಸಿ 70MM ಸಿನಿಮಾ ತೋರಿಸಿಕೊಂಡು ಹೋಗಲು ಹೇಳಿ. ಸ್ಕ್ರೀನ್ ವ್ಯವಸ್ಥೆ ಮಾಡುತ್ತೇನೆಂದು ಸಚಿವ ಮುನಿರತ್ನ ಹೇಳಿದ್ದಾರೆ ಎಂದು ಟಾಂಗ್​ ನೀಡಿದರು.

ಇದನ್ನೂ ಓದಿ: ಪ್ರಮೋದ್ ಮುತಾಲಿಕ್ ಸ್ಪರ್ಧೆಯಿಂದ ಹಿಂದೂ ಪರ ರಾಜಕೀಯ ಪಕ್ಷಕ್ಕೆ ಹಿನ್ನಡೆ: ಸುನಿಲ್ ಕುಮಾರ್

ಸಿಡಿ ವಿಚಾರದಲ್ಲಿ BJPಯವ್ರು ಎಕ್ಸ್‌ಪರ್ಟ್‌ ಅಂತಾ ನಿನ್ನೆಯೇ ಹೇಳಿದ್ದೀನಿ. ಬಿಜೆಪಿಯವ್ರು ಲೂಟಿ ಮಾಡಿದ್ದಾರೆ, ಬಿಜೆಪಿಗೆ ಇದು ಕೊನೆ ಚುನಾವಣೆ. ಅವರು ಮಾಡಿರುವ ಕರ್ಮ ಕಾಂಡಗಳಿಂದ ಮೂಲೆ ಗುಂಪು ಆಗುತ್ತಾರೆ ಎಂದು ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:22 pm, Sun, 5 February 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?