ಗಣೇಶ ಮೆರವಣಿಗೆ: ಬೆಂಗಳೂರಿನ ಈ ರಸ್ತೆಯಲ್ಲಿ ಇಂದು ವಾಹನ ಸಂಚಾರ ಬಂದ್​​

|

Updated on: Sep 11, 2024 | 7:35 AM

ಗಣೇಶ ಮೆರವಣಿಗೆ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ರಸ್ತೆಯಲ್ಲಿ ಬುಧವಾರ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಯಾವ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗವನ್ನು ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಗಣೇಶ ಮೆರವಣಿಗೆ: ಬೆಂಗಳೂರಿನ ಈ ರಸ್ತೆಯಲ್ಲಿ ಇಂದು ವಾಹನ ಸಂಚಾರ ಬಂದ್​​
ಇಂದಿರಾನಗರ 100 ಅಡಿ ರಸ್ತೆ
Follow us on

ಬೆಂಗಳೂರು, ಸೆಪ್ಟೆಂಬರ್​ 11: ಹಲಸೂರು ಸಂಚಾರ ಪೊಲೀಸ್​ ಠಾಣಾ ವ್ಯಾಪ್ತಿಯ ಹಾಗೂ ಇಂದಿರಾನಗರದ 80 ಅಡಿ ರಸ್ತೆ ಮತ್ತು ಇಂದಿರಾನಗರ 100 ಅಡಿ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಮೂಲಕ ಗಣಪತಿ ಮೂರ್ತಿಗಳ ಮೆರವಣಿಗೆ ಬುಧವಾರ (ಸೆ.11) ನಡೆಯಲಿದೆ. ಹೀಗಾಗಿ ವಾಹನಗಳ ಸುಗಮ ಸಂಚಾರಕ್ಕಾಗಿ ಸಂಜೆ 5:00 ಗಂಟೆಯಿಂದ ಮರುದಿನ ಬೆಳಗ್ಗೆ 6:00 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಿ (Vehicular traffic restriction) ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಪ್ರಕಟಣೆ ಹೊರಡಿಸಿದ್ದಾರೆ. ಮಾರ್ಗ ಬದಲಾವಣೆ ಇಲ್ಲಿದೆ.

ಸಂಚಾರ ನಿರ್ಬಂಧ:

  • ಹಳೆ ಮದ್ರಾಸ್ ರಸ್ತೆ ಆಂಜನೇಯ ಜಂಕ್ಷನ್​ನಿಂದ ಕೆನ್ಸಿಂಗ್ಟನ್ ಜಂಕ್ಷನ್ ಗುರುದ್ವಾರ ಜಂಕ್ಷನ್​ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
  • ಗಂಗಾಧರಜೆಟ್ಟಿ ರಸ್ತೆ ನಾಗಮ್ಮ ದೇವಸ್ಥಾನದ ಜಂಕ್ಷನ್‌ನಿಂದ ತಿರುವಳ್ಳವರ್ ಪ್ರತಿಮೆ ಜಂಕ್ಷನ್‌ ವರೆಗೆ ವಾಹನ ಸಂಚಾರ ಬಂದ್​ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಲ್ಲದ ರೋಡ್ ರೇಜ್‌‌​: ಕಾರಿನ ಬಾನೆಟ್, ಮಿರರ್ ಡ್ಯಾಮೇಜ್, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್​ ಭರವಸೆ

ಪರ್ಯಾಯ ಮಾರ್ಗ

  1. ಇಂದಿರಾನಗರದ 80 ಅಡಿ ರಸ್ತೆ ಮತ್ತು 100 ಅಡಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ ಮೂಲಕ ಬರುವ ವಾಹನಗಳು ಆಂಜನೇಯ ಜಂಕ್ಷನ್ ಬಳಿ ಎಡ ತಿರುವು ಪಡೆದುಕೊಂಡು ಪಡೆದು ಸ್ವಾಮಿ ವಿವೇಕಾನಂದ ರಸ್ತೆಯ ಮೂಲಕ ಆದರ್ಶ ಜಂಕ್ಷನ್ – ರಾಮಯ್ಯ ಜಂಕ್ಷನ್ – ಕಾಮಧೇನು ಜಂಕ್ಷನ್ – ಟ್ರಿನಿಟಿ ಜಂಕ್ಷನ್ ವೆಬ್ ಜಂಕ್ಷನ್ ಮೂಲಕ ಮುಂದೆ ಸಂಚರಿಸಬೇಕು.
  2. ಎಂ.ಜಿ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಕಡೆ ಚಲಿಸುವ ವಾಹನಗಳು ಟ್ರಿನಿಟಿ ಜಂಕ್ಷನ್ – ಕಾಮಧೇನು ಜಂಕ್ಷನ್‌ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೂಲಕ ರಾಮಯ್ಯ ಜಂಕ್ಷನ್ – ಆದರ್ಶ ಜಂಕ್ಷನ್ ಆಂಜನೇಯ ಜಂಕ್ಷನ್ ಬಳಿ ಬಲ ತಿರವು ಪಡೆದು ಹಳೆ ಮದ್ರಾಸ್ ರಸ್ತೆ ಮೂಲಕ ಮುಂದೆ ಸಂಚರಿಸಬೇಕು.
  3. ಕಬ್ಬನ್ ರಸ್ತೆಯಿಂದ ಬರುವ ವಾಹನಗಳು ಮಣಿಪಾಲ್ ಜಂಕ್ಷನ್ ಬಳಿ ಬಲ ತಿರುವು ಪಡೆದು ವೆಬ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಟ್ರಿನಿಟಿ ಜಂಕ್ಷನ್ ಮೂಲಕ ಸ್ವಾಮಿ ವಿವೇಕಾನಂದ ರಸ್ತೆ ಕಡೆಗೆ ಸಂಚರಿಸುವುದು.
  4. ಹಲಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಬೇಗಂ ಮಹಲ್ ಜಂಕ್ಷನ್ ಮೂಲಕ ಬಜಾರ್ ಸ್ಟ್ರೀಟ್​ನಿಂದ ರಾಮಯ್ಯ ಜಂಕ್ಷನ್ ಮೂಲಕ ಮುಂದೆ ಸಂಚರಿಸಬೇಕು.
  5. ಡಿಕೆನ್ಸನ್ ರಸ್ತೆಯಿಂದ ಸೆಂಟ್ ಜಾನ್ಸ್ ರಸ್ತೆಯ ಮೂಲಕ ಗಂಗಾಧರ ಬೆಟ್ಟಿ ರಸ್ತೆ ಕಡೆಗೆ ಬರುವ ವಾಹನಗಳು ಸೆಂಟ್ ಜಾನ್ಸ್ ರಸ್ತೆಯ ನಾಗಮ್ಮ ದೇವಸ್ಥಾನದ ಜಂಕ್ಷನ್ ಮೂಲಕ ಹಾದು ಹೋಗಿ ಶ್ರೀ ಸರ್ಕಲ್ ಬಳಿ ಬಲ ತಿರುವು ಪಡೆದು ಅಜಂತಾ ರಸ್ತೆಯ ಮೂಲಕ ಹಾದು ಆರ್.ಬಿ.ಐ ಜಂಕ್ಷನ್ ಬಳಿ ಬಲ ತಿರುವು ಪಡೆದು ತಿರುವಳ್ಳವ‌ರ್ ಪ್ರತಿಮೆ ಜಂಕ್ಷನ್ ಬಳಿ ಎಡ ತಿರುವು ಪಡೆದು ಗಂಗಾಧರ ಚೆಟ್ಟ ರಸ್ತೆಯ ಮೂಲಕ ಮುಂದೆ ಸಂಚರಿಸಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ