ಘಟಕ ಪರೀಕ್ಷೆಗಳಿಗೂ ವೆಬ್ ಕಾಸ್ಟಿಂಗ್ ಅಸ್ತ್ರ ಪ್ರಯೋಗ; ಸರ್ಕಾರಿ ಶಾಲಾ ಶಿಕ್ಷಕರ ಪರದಾಟಕ್ಕೆ ಕಾರಣಾಯ್ತು ಇಲಾಖೆ ನಡೆ

ಶಿಕ್ಷಣ ಇಲಾಖೆ ಕಳೆದ ವರ್ಷ ಎಸ್ಎಸ್ಎಲ್​ಸಿ ಮುಖ್ಯ ಪರೀಕ್ಷೆಯ ಅಕ್ರಮಕ್ಕೆ ಬ್ರೇಕ್ ಹಾಕಲು ವೆಬ್ ಕಾಸ್ಟಿಂಗ್ ಅಸ್ತ್ರ ಪ್ರಯೋಗಿಸಿತ್ತು. ಇದರಿಂದ ಕಳೆದ ವರ್ಷದ ಎಸ್ಎಸ್ಎಲ್​ಸಿ ಫಲಿತಾಂಶ ಪಾತಳಕ್ಕೆ ಕುಸಿತ ಕಂಡು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಇದರಿಂದಲೂ ಬುದ್ದಿ ಕಲಿಯದ ಶಾಲಾ ಶಿಕ್ಷಣ ಇಲಾಖೆ ಈಗ ಮತ್ತೊಂದು ಎಡವಟ್ಟು ಮಾಡಲು ಮುಂದಾಗಿದೆ.

ಘಟಕ ಪರೀಕ್ಷೆಗಳಿಗೂ ವೆಬ್ ಕಾಸ್ಟಿಂಗ್ ಅಸ್ತ್ರ ಪ್ರಯೋಗ; ಸರ್ಕಾರಿ ಶಾಲಾ ಶಿಕ್ಷಕರ ಪರದಾಟಕ್ಕೆ ಕಾರಣಾಯ್ತು ಇಲಾಖೆ ನಡೆ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on: Sep 11, 2024 | 9:04 AM

ಬೆಂಗಳೂರು, ಸೆ.11: ಕಳೆದ ವರ್ಷ 10ನೇ ತರಗತಿ ಫಲಿತಾಂಶ ನೋಡಿ ಇಡೀ ರಾಜ್ಯ ಶಾಕ್ ಆಗಿತ್ತು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ಶಿಕ್ಷಣ ಇಲಾಖೆ ವೆಬ್ ಕಾಸ್ಟಿಂಗ್ (Webcasting) ಮಾಡಿದ ಹಿನ್ನಲೆ ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನ ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಇದರಿಂದ ರಾಜ್ಯದಲ್ಲಿ ಶಿಕ್ಷಣ ಮಟ್ಟ ಕುಸಿದಿದೆ ಅನ್ನೋ ಟೀಕೆಗಳೂ ಕೇಳಿ ಬಂದಿದ್ವು. ಎಸ್ಎಸ್ಎಲ್ ಸಿ ಸ್ಟೂಡೆಂಟ್ಸ್​​ಗೆ ವೆಬ್ ಕಾಸ್ಟಿಂಗ್ ಮಾಡಿ ಶಿಕ್ಷಣ ಇಲಾಖೆ (Education Department) ಛೀಮಾರಿ ಹಾಕಿಸಿಕೊಂಡಿತ್ತು. ಇದರಿಂದ ಬುದ್ದಿ ಕಲಿಯದ ಇಲಾಖೆ ಈಗ ಮತ್ತೆ ಅದೇ ಎಡವಟ್ಟು ಮಾಡಲು ಮುಂದಾಗಿದೆ. ಮತ್ತೆ ಈಗ ಶಾಲಾ ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ (SSLC) ಎಲ್ಲ ಘಟಕ ಪರೀಕ್ಷೆಗಳಿಗೂ ವೆಬ್ ಕಾಸ್ಟಿಂಗ್​ಗೆ ಮುಂದಾಗಿದೆ. ಇದು ಸರ್ಕಾರಿ ಶಾಲಾ ಶಿಕ್ಷಕರ ಪರದಾಟಕ್ಕೆ ಕಾರಣವಾಗಿದೆ.

ಪ್ರಸಕ್ತ ವರ್ಷದಲ್ಲಿ ಶಾಲಾ ಶಿಕ್ಷಣ ಇಲಾಖೆ ಎಲ್ಲ ಪರೀಕ್ಷೆ ಹಾಗೂ ಘಟಕ ಪರೀಕ್ಷೆಗಳಿಗೆ ವೆಬ್ ಕಾಸ್ಟಿಂಗ್ ಮಾಡುವಂತೆ ಸೂಚಿಸಿದೆ. ಆದರೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೇ 50% ಶಾಲೆಗಳಲ್ಲಿ ವೆಬ್ ಕಾಸ್ಟಿಂಗ್ ಇಲ್ಲ. ವೆಬ್ ಕಾಸ್ಟಿಂಗ್ ಅಳವಡಿಕೆಗೆ ಸರ್ಕಾರದಿಂದ ಯಾವುದೇ ಅನುದಾನವನ್ನು ನೀಡಿಲ್ಲ. ಯಾವುದೇ ಅನುದಾನ ನೀಡದೆ ಹೇಗೆ ವೆಬ್ ಕಾಸ್ಟಿಂಗ್ ಅಳವಡಿಕೆ ಮಾಡಿಕೊಳ್ಳುವುದು ಅಂತಾ ಶಾಲಾ ಶಿಕ್ಷಕರು ಪರದಾಡುತ್ತಿದ್ದಾರೆ. ಈ ನಡುವೆ ಇಲಾಖೆ ಎಲ್ಲ ಘಟಕ ಪರೀಕ್ಷೆಗಳಿಗೂ ವೆಬ್ ಕಾಸ್ಟಿಂಗ್ ರೂಲ್ಸ್ ಜಾರಿಮಾಡಿದೆ. ವೆಬ್ ಕಾಸ್ಟಿಂಗ್ ಇಲ್ಲದ ಶಾಲೆಗಳು ಪಕ್ಕದ ಶಾಲೆಗೆ ಹೋಗಿ ಪರೀಕ್ಷೆ ಬರೆಸುವಂತೆ ಸೂಚನೆ ನೀಡಿರುವ ಇಲಾಖೆ ನಡೆ ಈಗ ಸರ್ಕರಿ ಶಾಲಾ ಶಿಕ್ಷಕರ ವಿರೋಧಕ್ಕೆ ಕಾರಣವಾಗಿದೆ. ವೆಬ್ ಕಾಸ್ಟಿಂಗ್ ವ್ಯವಸ್ಥೆ ಇಲ್ಲದ ಶಾಲೆಗಳು ಹತ್ತಾರೂ ಕಿಲೋ ಮೀಟರ್ ದೂರದವರೆಗೆ ಶಾಲಾ ಮಕ್ಕಳನ್ನ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸುವುದು ಹೇಗೆ ಅಂತಾ ಶಿಕ್ಷಕರಿಂದ ವಿರೋಧ ಕೇಳಿ ಬರ್ತಿದೆ.

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಪಾಲರಿಲ್ಲದೆಯೇ ನಡೆದ ಬೆಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮ

ಏನಿದು ವೆಬ್ ಕಾಸ್ಟಿಂಗ್?

ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಕ್ಕೆ ಸಿಸಿಟಿವಿ ಫಿಕ್ಸ್ ಮಾಡಿ ವೆಬ್‌ಕಾಸ್ಟಿಂಗ್ ಮೂಲಕ ನೇರವಾಗಿ ಪರೀಕ್ಷಾ ಕೊಠಡಿಯಿಂದ ಲೈವ್ ವಿಷ್ಯೂಯಲ್‌ಗಳು ಕಮಾಂಡ್ ರೂಂನಲ್ಲಿ ವೀಕ್ಷಿಸುವ ವ್ಯವಸ್ಥೆಯಾಗಿದೆ. ಇದರ ಸಹಾಯದಿಂದ ಶಿಕ್ಷಕರು ಹಾಗೂ ಅಭ್ಯರ್ಥಿಗಳ ಚಲನವಲನಗಳನ್ನ ಒಮ್ಮೆಲೇ ವೀಕ್ಷಿಸಬಹುದಾಗಿದೆ. ಸಾಮೂಹಿಕ ಅಕ್ರಮ ತಡೆಯುವ ವ್ಯವಸ್ಥೆಯಾಗಿದೆ.

ಒಟ್ನಲ್ಲಿ ಸಾಮೂಹಿಕ ನಕಲು ತಡೆಯಲು ಶಿಕ್ಷಣ ಇಲಾಖೆ ವೆಬ್ ಕಾಸ್ಟಿಂಗ್ ಮೊರೆ ಹೋಗಿದೆ. ಫಲಿತಾಂಶದ ಪ್ರತಿಷ್ಠೆಯ ಬೆನ್ನು ಹತ್ತದೆ ಅಕ್ರಮ ತಡೆಯುವ ವಸ್ತುನಿಷ್ಠ ಪರೀಕ್ಷೆಗೆ ಇಲಾಖೆ ಮುಂದಾಗಿದೆ. ಆದ್ರೆ ಪೂರ್ವ ಸಿದ್ಧತೆ ಇಲ್ಲದೆ ವೆಬ್ ಕಾಸ್ಟಿಂಗ್ ವ್ಯವಸ್ಥೆಗೆ ಬೇಕಾದ ಅನಕೂಲ ಕಲ್ಪಿಸದೆ ವೆಬ್ ಕಾಸ್ಟಿಂಗ್ ರೂಲ್ಸ್ ಜಾರಿ ಮಾಡಿರುವುದು ಈಗ ವಿರೋಧಕ್ಕೆ ಕಾರಣವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ