ಗಲ್ಲಿಗಲ್ಲಿಯಲ್ಲಿ ಗಣೇಶ ಮೂರ್ತಿ ಕೂರಿಸುವಂತಿಲ್ಲ; ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ

| Updated By: preethi shettigar

Updated on: Sep 03, 2021 | 9:35 AM

ಸರ್ಕಾರದ ಮಾರ್ಗಸೂಚಿಗಳ ಅನ್ವಯ ಗಣೇಶ ಹಬ್ಬ ಆಚರಿಸಬೇಕು. ಹೀಗಾಗಿ ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಗಲ್ಲಿಗಲ್ಲಿಯಲ್ಲಿ ಗಣೇಶ ಮೂರ್ತಿ ಕೂರಿಸುವಂತಿಲ್ಲ; ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
Follow us on

ಬೆಂಗಳೂರು: ಗೌರಿ ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಗಲ್ಲಿಗಲ್ಲಿಯ ರಸ್ತೆಗಳಲ್ಲಿ ಗಣೇಶ ಮೂರ್ತಿ ಕೂರಿಸುವಂತಿಲ್ಲ. ಸರ್ಕಾರದ ಮಾರ್ಗಸೂಚಿಗಳ ಅನ್ವಯ ಗಣೇಶ ಹಬ್ಬ ಆಚರಿಸಬೇಕು. ಹೀಗಾಗಿ ದೇವಸ್ಥಾನಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಬಳಿಕ ಕೋರಮಂಗಲ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಕೋರಮಂಗಲ ಅಪಘಾತ ಪ್ರಕರಣದ ತನಿಖೆ ನಡೆಯುತ್ತಿದೆ. ವೈಜ್ಞಾನಿಕವಾಗಿ ಈ ಕುರಿತು ತನಿಖೆ ನಡೆಸಲಾಗುತ್ತಿದೆ. 7 ಜನ ಒಂದೇ ಅಪಘಾತದಲ್ಲಿ ಸತ್ತಿದ್ದಾರೆ ಮುಂದೆ ಈ ರೀತಿ ಆಗಬಾರದು. ಹಾಗಾಗಿ ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದರು.

ಅವತ್ತು ಪೊಲೀಸರು ಮನೆಗೆ ಹೋಗಿ ಎಂದು ಅಪಘಾತದಲ್ಲಿ ಮೃತಪಟ್ಟವರಿಗೆ ತಿಳಿಸಿದ್ದರು. ಆಗ ಅವರು ಮನೆಗೆ ಹೋಗಿ ಬಂದಿದ್ದಾರಾ ಎನ್ನುವುದು ಗೊತ್ತಾಗುತ್ತಿಲ್ಲ. ಅವರ ಪಿಜಿ ಕೂಡ ಅಲ್ಲೇ ಇದ್ದಿದ್ದರಿಂದ ಓಡಾಡಿದ್ದಾರೆ. ಏಳು ಜನರ ಮರಣ ದುಖಃದ ಘಟನೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ಸಿಸಿಬಿಗೆ
ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ಈಗಾಗಲೇ ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಉತ್ತಮವಾಗಿ ತನಿಖೆಯಾಗಲಿ ಎಂದು ಸಿಸಿಬಿಗೆ ಕೊಟ್ಟಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

ಬಡವ, ಶ್ರೀಮಂತ ಕಾರಣ ಕೊಡುತ್ತಿರುವ ಆರೋಪಿಗಳು
ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆಗ್ನೇಯ ವಿಭಾಗದ ಪೊಲೀಸರು ಮೂವರು ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳಿಂದ ಬಾಯಿ ಬಿಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು ಎಷ್ಟೇ ಕೇಳಿದರೂ ಆರೋಪಿಗಳು ಮಾತ್ರ ಬಡವ, ಶ್ರೀಮಂತ ಕಾರಣ ನೀಡುತ್ತಿದ್ದಾರೆ. ಮತ್ತೊಂದೆಡೆ ಸೋಮಶೇಖರ್ಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.

ಈ ಹಿಂದೆ ಸತೀಶ್ ರೆಡ್ಡಿ ಮನೆಗೆ ಕಲ್ಲು ಹೊಡೆದಿದ್ದ ಆರೋಪಿ ಸೋಮಶೇಖರ್, ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಬಳಿಕ ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರಿಗೆ ಸೋಮಶೇಖರ್ ಮೇಲೆ ಅನುಮಾನ ಬಂದಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ನಿನ್ನೆ (ಆಗಸ್ಟ್ 18) ಅಜ್ಞಾತ ಸ್ಥಳದಿಂದ ಸೋಮಶೇಖರ್ ವಿಡಿಯೋ ಹರಿಬಿಟ್ಟಿದ್ದರು. ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಲಾಗುತ್ತಿದೆ ಎಂದು ವಿಡಿಯೋದಲ್ಲಿ ಸೋಮಶೇಖರ್ ಸತೀಶ್ ರೆಡ್ಡಿ ವಿರುದ್ಧ ಆರೋಪ ಮಾಡಿದ್ದಾರೆ.

ಮೂವರಿಗೆ ನ್ಯಾಯಾಂಗ ಬಂಧನ
ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಾಗರ್ ತಾಪ, ನವೀನ್ ಮತ್ತು ಶ್ರೀಧರ್​ಗೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಆಗಸ್ಟ್ 14ಕ್ಕೆ ಪೊಲೀಸರು ಆರೋಪಿಗಳನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ಶಿಕ್ಷೆ ನೀಡಲಾಗಿದೆ.

ಇದನ್ನೂ ಓದಿ:
Ganesha Chaturthi 2021: ಗಣೇಶ ಹಬ್ಬ ಆಚರಣೆಗೆ ಷರತ್ತುಬದ್ಧ ಅವಕಾಶ, ತಜ್ಞರ ಸಲಹೆ ಏನು?

ಅಪಘಾತಕ್ಕೂ ಮುನ್ನ ಜಿಗ್​ಜ್ಯಾಗ್​ ರೈಡ್: ಪೊಲೀಸರ​ ಮೇಲೆಯೇ ಕಾರು ಹತ್ತಿಸೋ ಯತ್ನ, ಜೊಮ್ಯಾಟೋ ಹುಡುಗ ಜಸ್ಟ್​ ಮಿಸ್

Published On - 9:30 am, Fri, 3 September 21