ಸಿಎಂ ನಿವಾಸದ ಬಳಿ ಗಾಂಜಾ ಮಾರಾಟ ಪ್ರಕರಣ; ಇಬ್ಬರು ಡ್ರಗ್ ಪೆಡ್ಲರ್​ಗಳು ಸಿಸಿಬಿ ವಶಕ್ಕೆ

ಬಾಡಿ ವಾರಂಟ್ ಮೇಲೆ ಜೈಲಿನಿಂದ ವಶಕ್ಕೆ ಪಡೆದ ಪೊಲೀಸರು ಗಾಂಜಾ ಎಲ್ಲಿಂದ ಬರ್ತಿತ್ತು, ಯಾರಿಗೆ ಗಾಂಜಾ ಸೇಲ್ ಮಾಡುತ್ತಿದ್ದರು? ಸಿಎಂ ಮನೆ ಬಳಿ ನಿಯೋಜಿಸಿದ್ದ ಪೊಲೀಸರ ಜತೆ ಲಿಂಕ್ ಹೇಗೆ? ಎಷ್ಟು ದಿನದಿಂದ ಆರೋಪಿಗಳು ಪೊಲೀಸರ ಜತೆ ಸಂಪರ್ಕದಲ್ಲಿದ್ದರು? ಎಂಬೆಲ್ಲಾ ವಿಚಾರಗಳ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ.

ಸಿಎಂ ನಿವಾಸದ ಬಳಿ ಗಾಂಜಾ ಮಾರಾಟ ಪ್ರಕರಣ; ಇಬ್ಬರು ಡ್ರಗ್ ಪೆಡ್ಲರ್​ಗಳು ಸಿಸಿಬಿ ವಶಕ್ಕೆ
ಗಾಂಜಾ
Edited By:

Updated on: Jan 22, 2022 | 6:05 PM

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಬಳಿ ಪೊಲೀಸರಿಂದ ಗಾಂಜಾ ಮಾರಾಟ ಪ್ರಕರಣ ಬೆಂಗಳೂರಿನಲ್ಲಿ ಸಂಚಲನ ಮೂಡಿಸಿತ್ತು. ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಸಿಸಿಬಿ ಪೊಲೀಸರು ಇಬ್ಬರು ಗಾಂಜಾ ಪೆಡ್ಲರ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಅಖಿಲ್ ರಾಜ್‌, ಅಮ್ಜದ್ ಖಾನ್ ಎಂಬುವವರನ್ನು ಸಿಸಿಬಿ ವಶಕ್ಕೆ ಪಡೆಯಲಾಗಿದೆ. ಬಾಡಿ ವಾರಂಟ್ ಮೇಲೆ ಜೈಲಿನಿಂದ ವಶಕ್ಕೆ ಪಡೆದ ಪೊಲೀಸರು ಗಾಂಜಾ ಎಲ್ಲಿಂದ ಬರ್ತಿತ್ತು, ಯಾರಿಗೆ ಗಾಂಜಾ ಸೇಲ್ ಮಾಡುತ್ತಿದ್ದರು? ಸಿಎಂ ಮನೆ ಬಳಿ ನಿಯೋಜಿಸಿದ್ದ ಪೊಲೀಸರ ಜತೆ ಲಿಂಕ್ ಹೇಗೆ? ಎಷ್ಟು ದಿನದಿಂದ ಆರೋಪಿಗಳು ಪೊಲೀಸರ ಜತೆ ಸಂಪರ್ಕದಲ್ಲಿದ್ದರು? ಎಂಬೆಲ್ಲಾ ವಿಚಾರಗಳ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆಯೇ ಗಾಂಜಾ ಮಾರಾಟ ಮಾಡ್ತಿದ್ದ ಇಬ್ಬರು ಯುವ ಪೊಲೀಸ್ ಕಾನ್ಸ್​ಟೇಬಲ್​​ಗಳ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿತ್ತು. ಪ್ರಕರಣ ಹಳೆಯದೇ ಆದರೂ ಮಾದಕ ವಸ್ತು ಅಪರಾಧದಲ್ಲಿ ಈ ಹಿಂದೆಯೂ ಇವರ ಹಸ್ತಕ್ಷೇಪ ಇರುವುದು ಪ್ರಧಾನವಾಗಿ ಬೆಳಕಿಗೆ ಬಂದಿತ್ತು. ಗಾಂಜಾ ಪ್ರಕರಣದಲ್ಲಿ ಅಖಿಲ್ ರಾಜ್ ಹಾಗೂ ಅಮ್ಜದ್ ಜೊತೆ ಈ ಇಬ್ಬರು ಪೊಲೀಸ್ ಸಿಬ್ಬಂದಿ ಅರೆಸ್ಟ್ ಆಗಿದ್ದರು.

ನೆಲಮಂಗಲದ ತಮ್ಮೇನಹಳ್ಳಿ ಬಳಿ ಗಾಂಜಾ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಮಾದನಾಯಕ‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಯಿನ್, ರಿಯಾಜ್ ಎಂಬ ಆರೋಪಿಗಳನ್ನು ಬಂಧಿಸಿ 3 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ನಿವಾಸದ ಬಳಿ ಗಾಂಜಾ ಮಾರಾಟ ಕೇಸ್: ಈ ಹಿಂದೆಯೂ ಇಬ್ಬರೂ ಕಾನ್ಸ್​ಟೇಬಲ್​ ಪಾರ್ಟ್​ನರ್ಸ್​ ಇನ್​ ಕ್ರೈಂ!

Most Wanted Peddler ಗಳಿಂದ ಗಾಂಜಾ ತರಿಸಿ ಮಾರಾಟ: ಸಿಎಂ ಬೊಮ್ಮಾಯಿ ಮನೆ ಭದ್ರತೆಯಲ್ಲಿದ್ದ ಇಬ್ಬರು ಪೊಲೀಸ್ರು ಅರೆಸ್ಟ್!