ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ನಮ್ಮ ಕರ್ನಾಟಕ ಸರ್ಕಾರದ ಗರುಡಾ ಫೋರ್ಸ್ ಫುಲ್ ರೌಂಡ್ಸ್ ಹಾಕ್ತಿದ್ರು. ನಗರದ ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಗನ್ ಹಿಡಿದು ಪೊಜೆಸನ್ ನಲ್ಲಿ ಇರುವುದನ್ನು ನೋಡಿದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತು. ಅಷ್ಟಕ್ಕೂ ಇಂದು ರಿಚ್ಮಂಡ್ ರಸ್ತೆಯಲ್ಲಿ ಬರುವ ಖಾಸಗಿ ಹೊಟೆಲ್ ನ ನೊಳಗೆ ಆರ್ಮಿಯ ಅಧಿಕಾರಿಗಳು ಸೇರಿದಂತೆ ನಮ್ಮ ಗರುಡಾ ಫೋರ್ಸ್ ಪಡೆ ನಿಂದ ಸುಮಾರು 200 ಹೆಚ್ಚು ಸಿಬ್ಬಂದಿಯಿಂದ ಅಣುಕು ಪ್ರದರ್ಶನ ಮಾಡಲಾಯಿತು.
ನಮ್ಮ ದೇಶದಲ್ಲಿ ಒಂದು ವೇಳೆ ಟೆರರಿಸ್ಟ್ ಅಟ್ಯಾಕ್ ಆದರೆ ಅವರಿಗೆ ಕೌಂಟರ್ ಅಟ್ಯಾಕ್ ಹೇಗೆ ಮಾಡಬೇಕು. ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತಾಗಿ ನಮ್ಮ ರಾಜ್ಯದ ಗರುಡಾ ಫೋರ್ಸ್ ಪಡೆ ಅಣುಕು ಪ್ರದರ್ಶನ ಮಾಡಿದರು. ಅದರಿಂದಾಗಿ ನಗರದ ರಿಚ್ಮಂಡ್ ಸರ್ಕಲ್ ಹಾಗೂ ಮಲ್ಯ ರಸ್ತೆಯಲ್ಲಿ ಗರುಡ ಫೋರ್ಸ್ ಸಿಬ್ಬಂದಿ ಗನ್ ಹಿಡಿದು ಒಬ್ಬಬ್ಬರು ಒಂದೊಂದು ಆಂಗಲ್ನಲ್ಲಿ ನಿಂತು. ಕುಳಿತು.. ಮಲಗಿ.. ಟೆರರಿಸ್ಟ್ ಗಳಿಗೆ ಕೌಂಟರ್ ಕೊಡಲು ಹೇಗೆ ಸಿದ್ಧರಾಗುತ್ತೀವಿ ಎಂಬುದನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. ಇನ್ನೂ ಇದು ಯಾವುದೂ ಗೊತ್ತಿಲ್ಲದ ಜನರು ನಗರದಲ್ಲಿ ಏನಾದರೂ ಆಗಿರಬಹುದು ಎನ್ನುವ ಆತಂಕದಲ್ಲಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ರು. ಆದ್ರೆ ಮಾಕ್ ಡ್ರಿಲ್ನ ಮೂಲ ಉದ್ದೇಶ ಜನರಲ್ಲಿ ಧೈರ್ಯ ತುಂಬುವುದು. ನಮ್ಮ ದೇಶಕ್ಕೆ ಕ್ರಿಮಿಗಳು ಅಟ್ಯಾಕ್ ಮಾಡಿದ್ರೆ ನಾವು ಯಾವ ರೀತಿ ಅವರನ್ನು ಎದುರಿಸಲು ಸಿದ್ಧರಿದ್ದೇವೆ ಎಂಬುವುದನ್ನು ತೋರಿಸಲಾಗಿದೆ.
ವರದಿ: ಬಾಲಾಜಿ, ಟಿವಿ9 ಕನ್ನಡ ಬೆಂಗಳೂರು
Published On - 8:08 pm, Wed, 11 May 22