ಬೆಂಗಳೂರು: ನಗರದಲ್ಲಿ ಚಿನ್ನದ ದರ ಇಂದು ಕೊಂಚ ಏರಿಕೆ ಕಂಡಿದೆ. ಮದುವೆ ಸಮಾರಂಭಗಳು ಎದುರಿಗಿದ್ದು, ಕೊರೊನಾ ಹಾವಳಿಯಿಂದಾಗಿ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಕಡಿಮೆ ಪ್ರಮಾಣದ ಜನರಿಗೆ ಅವಕಾಶ ನೀಡಿ ಮದುವೆ ಸಮಾರಂಭಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಮದುವೆ ಅಂದಾಕ್ಷಣ ಚಿನ್ನ ಖರೀದಿಸಲೇ ಬೇಕು. ಹಾಗಿದ್ದಾಗ ಬೆಂಗಳೂರು ನಗರ ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬರದ ವಿವರವನ್ನು ನೋಡೋಣ. ಅದೇ ರೀತಿ ಬೆಳ್ಳಿ ದರವನ್ನು ಗಮನಿಸಿದಾಗ ಇಂದು ಭಾರೀ ಪ್ರಮಾಣದ ಏರಿಕೆ ಕಂಡಿದೆ. 1ಕೆಜಿ ಬೆಳ್ಳಿ ದರ ಇಂದು 73,300 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 5,500 ರೂಪಾಯಿ ಏರಿಕೆ ಕಂಡಿದೆ.
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,300 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 150 ರೂಪಾಯಿ ಏರಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ದರವನ್ನು ಗಮನಿಸಿದಾಗ 10 ಗ್ರಾಂ ಚಿನ್ನದ ದರ 48,330 ರೂಪಾಯಿ ಆಗಿದೆ. ದೈನಂದಿನ ದರ ಏರಿಕೆಯಲ್ಲಿ 1,700 ರೂಪಾಯಿ ಏರಿಕೆ ಕಂಡಿದೆ. ನಗರದಲ್ಲಿ 1ಕೆಜಿ ಬೆಳ್ಳಿ ದರ ಇಂದು 73,300 ರೂಪಾಯಿಗೆ ಏರಿಕೆಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 5,500 ರೂಪಾಯಿ ಏರಿಕೆ ಕಂಡಿದೆ.
ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ ಮಾಹಿತಿ
ಚೆನ್ನೈ ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,380 ರೂಪಾಯಿಗೆ ಮಾರಾಟವಾಗಿತ್ತು. ಇಂದು ಕೊಂಚ ದರ ಕುಸಿತ ಕಂಡಿದ್ದು, 44,370 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 48,400 ರೂಪಾಯಿಗೆ ಮಾರಾಟವಾಗಿತ್ತು. ದರ ಇಳಿಕೆಯ ನಂತರ ಇಂದು 48,390 ರೂಪಾಯಿ ಆಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿಯೂ ಕೊಂಚ ಇಳಿಕೆ ಕಂಡಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 73,500 ರೂಪಾಯಿಗೆ ಮಾರಾಟವಾಗಿದೆ. ಇಂದು 200 ರೂಪಾಯಿ ಇಳಿಕೆಯ ನಂತರ 73,300 ರೂಪಾಯಿ ಆಗಿದೆ.
ದೆಹಲಿಯಲ್ಲಿ ಚಿನ್ನದ ದರ
ದೆಹಲಿಯಲ್ಲಿ ಚಿನ್ನದ ದರ ಕೊಂಚ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 45,690 ರೂಪಾಯಿಗೆ ಮಾರಾಟವಾಗಿದೆ. ಇಂದು ದರ ಇಳಿಕೆಯ ನಂತರ 45,680 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 49,870 ರೂಪಾಯಿಗೆ ಮಾರಾಟವಾಗಿದೆ. ಇಂದು ದರ ಇಳಿಕೆಯ ನಂತರದಲ್ಲಿ 49,860 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ದರ ಇಂದು ಕೊಂಚ ಏರಿಕೆಯಾಗಿದ್ದು, 1ಕೆಜಿ ಬೆಳ್ಳಿ ದರ ನಿನ್ನೆ 67,800 ರೂಪಾಯಿ ಮಾರಾಟವಾಗಿತ್ತು, ಇಂದು 800 ರೂಪಾಯಿ ಏರಿಕೆಯ ನಂತರ 68,600 ರೂಪಾಯಿ ಆಗಿದೆ.
ಹೈದರಾಬಾದ್ನಲ್ಲಿ ಚಿನ್ನ, ಬೆಳ್ಳಿ ದರದ ಮಾಹಿತಿ
ಹೈದರಾಬಾದ್ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 44,300 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 150 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 170 ರೂಪಾಯಿ ಏರಿಕೆ ಕಂಡಿದ್ದು, 48,330 ರೂಪಾಯಿ ಆಗಿದೆ. ನಗರದಲ್ಲಿ ಬೆಳ್ಳಿ ದರ ಕೊಂಚ ಇಳಿಕೆ ಕಂಡಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 73,500 ರೂಪಾಯಿಗೆ ಮಾರಾಟವಾಗಿದೆ. ಇಂದು ದರ ಕುಸಿತದ ನಂತರ 73,300 ರೂಪಾಯಿಗೆ ಇಳಿಕೆಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಚಿನ್ನದ ದರ
ವಾಣಿಜ್ಯ ನಗರಿ ಮುಂಬೈನಲ್ಲಿ ಬೆಳ್ಳಿ ದರ ಏರಿಕೆ ಕಂಡಿದ್ದು, 1 ಕೆಜಿ ಬೆಳ್ಳಿ ದರ ನಿನ್ನೆ 67,800 ರೂಪಾಯಿಗೆ ಮಾರಾಟವಾಗಿತ್ತು. ಇಂದು 800 ರೂಪಾಯಿ ಏರಿಕೆಯ ನಂತರ 68,600 ರೂಪಾಯಿಗೆ ಏರಿಕೆಯಾಗಿದೆ. ಚಿನ್ನದ ದರವನ್ನು ಗಮನಿಸಿದಾಗ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,490 ರೂಪಾಯಿಗೆ ಮಾರಾಟವಾಗಿದೆ. ಇಂದು ಕೊಂಚ ಪ್ರಮಾಣದಲ್ಲಿ ದರ ಇಳಿಕೆ ಕಂಡಿದೆ. ನಿನ್ನೆ 44,490 ರೂಪಾಯಿಗೆ ಇದ್ದ ಚಿನ್ನದ ದರ ಇಂದು 44,480 ರೂಪಾಯಿಗೆ ಇಳಿದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 45,490 ರೂಪಾಯಿ ಇದ್ದು, ಇಂದು ದರ 45,480 ರೂಪಾಯಿಗೆ ಇಳಿಕೆಯಾಗಿದೆ.
(Gold and Silver Rate Today On 2021 April 30 Bangalore Chennai Hyderabad Mumbai)