Gold Rate Today: ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ದರ ವಿವರ ಪರಿಶೀಲಿಸಿ ಆಭರಣ ಕೊಳ್ಳುವತ್ತ ಯೋಚಿಸಿ

Gold Price Today: ಚಿನ್ನದ ಆಭರಣ ಕೊಳ್ಳಬೇಕು ಎಂಬ ಆಸೆ ಇರುವುದು ಸಹಜವಾದರೂ ದರ ಇಳಿಕೆಯತ್ತ ಸಾಗಿರಲಿ ಎಂಬ ಆಶಯ ಇರುವುದೂ ತಪ್ಪಲ್ಲ. ಕೂಡಿಟ್ಟ ಹಣದಲ್ಲಿ ಉತ್ತಮ ಗುಣ ಮಟ್ಟದ ಚಿನ್ನಾಭರಣ ಖರೀದಿಸಬೇಕು ಎಂಬ ಆಸೆ ಇರುತ್ತದೆ. ಇಂದಿನ ದರ ವಿವರ ಪರಿಶೀಲಿಸಿ ಚಿನ್ನ ಖರೀದಿಸುವತ್ತ ಯೋಚಿಸಿ.

Gold Rate Today: ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ದರ ವಿವರ ಪರಿಶೀಲಿಸಿ ಆಭರಣ ಕೊಳ್ಳುವತ್ತ ಯೋಚಿಸಿ
ಚಿನ್ನದ ಕಿವಿಯೋಲೆ
Edited By:

Updated on: Jul 18, 2021 | 8:49 AM

Gold Silver Price Today | ಬೆಂಗಳೂರು: ಕಳೆದ ವಾರದಲ್ಲಿ ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಪ್ರತಿದಿನವೂ ಏರುತ್ತಲೇ ಇತ್ತು. ಆದರೆ ಈ ವಾರದಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ದರ ಕೊಂಚ ಇಳಿಕೆಯ ಹಾದಿ ಹಿಡಿದಿದೆ. ನಿನ್ನೆ ಕೂಡಾ ಚಿನ್ನ ಮತ್ತು ಬೆಳ್ಳಿ ದರ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಅದೇ ರೀತಿ ಇಂದು ( ಜುಲೈ 18, ರವಿವಾರ) ಚಿನ್ನದ ದರ(Gold Rate) ಮತ್ತು ಬೆಳ್ಳಿ ದರದಲ್ಲಿ(Silver rate) ಕೊಂಚ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 100 ಗ್ರಾಂ ಚಿನ್ನದ ದರದಲ್ಲಿ ಸುಮಾರು 2,500 ರೂಪಾಯಿಯಷ್ಟು ಇಳಿಕೆ ಆಗಿದೆ.

ಚಿನ್ನದ ಆಭರಣ ಕೊಳ್ಳಬೇಕು ಎಂಬ ಆಸೆ ಇರುವುದು ಸಹಜವಾದರೂ ದರ ಇಳಿಕೆಯತ್ತ ಸಾಗಿರಲಿ ಎಂಬ ಆಶಯ ಇರುವುದೂ ತಪ್ಪಲ್ಲ. ಕೂಡಿಟ್ಟ ಹಣದಲ್ಲಿ ಉತ್ತಮ ಗುಣ ಮಟ್ಟದ ಚಿನ್ನಾಭರಣ ಖರೀದಿಸಬೇಕು ಎಂಬ ಆಸೆ ಇರುತ್ತದೆ. ಕೆಲವರು ಮದುವೆ ಸಮಾರಂಭಗಳಿಗೆ ಆಭರಣ ಕೊಳ್ಳಲು ನಿರ್ಧರಿಸಿದ್ದರೆ, ಇನ್ನು ಕೆಲವರು ಪ್ರೀತಿ ಪಾತ್ರರಿಗಾಗಿ ಚಿನ್ನದ ಸರವನ್ನೋ, ಬಳೆಗಳನ್ನೋ ಉಡುಗೊರೆಯಾಗಿ ನೀಡಬೇಕೆಂಬ ಆಸೆ ಇರಬಹುದು. ಹಾಗಿರುವಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ? ದೈನಂದಿನ ದರ ಬದಲಾವಣೆಯಲ್ಲಿ ದರ ಏರಿದೆಯೋ? ಅಥವಾ ಇಳಿಕೆಯಾಗಿದೆಯೋ? ಎಂಬೆಲ್ಲಾ ಕುತೂಹಲಗಳಿರುವುದು ಸರ್ವೇಸಾಮಾನ್ಯ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 1ಒ ಗ್ರಾಂ ಚಿನ್ನದ ದರ 45,000 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,50,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,500 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,010 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,90,100 ರೂಪಾಯಿ ಆಗಿದೆ. ಸುಮಾರು 3,600 ರೂಪಾಯಿಯಷ್ಟು ದರ ಇಳಿಕೆ ಕಂಡು ಬಂದಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,420 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,54,200 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಮ ಚಿನ್ನದ ರ 49,550 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ 4,95,500 ರೂಪಾಯಿಗೆ ಇಳಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,000 ರೂಪಾಯಿ ಇಳಿಕೆ ಕಂಡು ಬಂದಿದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,150 ರೂಪಾಯಿ ಇದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,71,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,500 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,440 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,14,400 ರೂಪಾಯಿಗೆ ಇಳಿಕೆಯಾಗಿದೆ. ಸರಿಸುಮಾರು 2,600 ರೂಪಾಯಿ ಇಳಿಕೆ ಕಂಡು ಬಂದಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,200 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,72,000 ರೂಪಾಯಿಗೆ ಇಳಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,200 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,82,000 ರೂಪಾಯಿಗೆ ಇಳಿಕೆ ಆಗಿದೆ. ಸರಿಸುಮಾರು 1,500 ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ.

ಬೆಳ್ಳಿ ದರ ಮಾಹಿತಿ
ಮುಂಬೈನಲ್ಲಿ ಇಂದು ಕೆಜಿ ಬೆಳ್ಳಿ ಬೆಲೆಯಲ್ಲಿ 1,300 ರೂಪಾಯಿ ಇಳಿಕೆ ಕಂಡು ಬಂದಿದೆ. ದೆಹಲಿಯಲ್ಲಿ ಕೆಜಿ ಬೆಳ್ಳಿ ಬೆಲೆ 68,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಪರಿಶೀಲನೆಯಲ್ಲಿ 1,300 ರೂಪಾಯಿ ಇಳಿಕೆ ಕಂಡು ಬಂದಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿ ಬೆಲೆ 73,200 ರೂಪಾಯಿ ನಿಗದಿಯಾಗಿದ್ದು, 1,100 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ ಬೆಂಗಳೂರು ನಗರದಲ್ಲಿ ಕೆಜಿ ಬೆಳ್ಳಿ ಬೆಲೆ 68,400 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 1,300 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಇದನ್ನೂ ಓದಿ:

Gold Rate Today: ಪ್ರೀತಿಪಾತ್ರರಿಗಾಗಿ ಚಿನ್ನ ಖರೀದಿಸಲು ಯೋಚಿಸುತ್ತಿದ್ದೀರಾ? ಚಿನ್ನದ ದರದಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ಪರಿಶೀಲಿಸಿ

Gold Rate Today: ಇಂದು ಅಲ್ಪವೇ ಏರಿದ ಚಿನ್ನದ ದರ; ವಿವಿಧ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ? ಪರಿಶೀಲಿಸಿ