ಬೆಂಗಳೂರು ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ವಿದೇಶಿ ಪ್ರಜೆ ಅರೆಸ್ಟ್

ನಾಲ್ವರಲ್ಲಿ ಮೂವರು ಪೊಲೀಸರಿಗೆ ಕ್ಷಮೆ ಕೇಳಿ ಅಲ್ಲಿಂದ ತೆರಳಿದ್ದರು. ಆದರೆ ಮೋರ್ಗನ್ ಎಂಬುವವನು ಪೊಲೀಸರ ಜೊತೆಗೆ ವಾಗ್ವಾದ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದ. ಅಷ್ಟೇ ಅಲ್ಲದೇ ತನ್ನ ಕಾರ್ನಿಂದ ಚೀತಾ ಬೈಕ್ ಗುದ್ದಿ ಎಸ್ಕೇಪ್ ಆಗಿದ್ದ.

ಬೆಂಗಳೂರು ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ವಿದೇಶಿ ಪ್ರಜೆ ಅರೆಸ್ಟ್
ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿರುವ ಆರೋಪಿ

ಬೆಂಗಳೂರು: ಪೊಲೀಸರು ಮೇಲೆ ಹಲ್ಲೆ ನಡೆಸಿದ್ದ ವಿದೇಶಿ ಪ್ರಜೆಯನ್ನು(Foreign citizen )ಬಂಧಿಸಲಾಗಿದೆ. ಹಲ್ಲೆ ಮಾಡಿ ಪರಾರಿಯಾಗಿದ್ದ ಘಾನ ದೇಶದ ಆರೋಪಿ ಮೋರ್ಗನ್(34) ಎಂಬಾತನನ್ನು ಉತ್ತರ ಪ್ರದೇಶದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೂನ್ 25 ರಂದು ರಾತ್ರಿ 1.30 ಕ್ಕೆ 4 ವಿದೇಶಿ ಪ್ರಜೆಗಳು ಜಗಳ ಮಾಡುತ್ತಿದ್ದರು. ಕೆ.ಆರ್.ಪುರಂ ನ ವಾರಣಾಸಿ ಎನ್ಕ್ಲೇವ್ ಹತ್ತಿರ ಜಗಳ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಪೊಲೀಸರ ಮೇಲೆ ಮೋರ್ಗನ್ ಹಲ್ಲೆ ನಡೆಸಿದ್ದ.

ನಾಲ್ವರ ನಡುವೆ ಜಗಳವಾಗುತ್ತಿದ್ದಾಗ ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಬಂದಿದ್ದರು. ಆ ನಾಲ್ವರಿಗೆ ಪೊಲೀಸರು ಬುದ್ಧಿವಾದ ಹೇಳಿದ್ದರು. ನಾಲ್ವರಲ್ಲಿ ಮೂವರು ಪೊಲೀಸರಿಗೆ ಕ್ಷಮೆ ಕೇಳಿ ಅಲ್ಲಿಂದ ತೆರಳಿದ್ದರು. ಆದರೆ ಮೋರ್ಗನ್ ಎಂಬುವವನು ಪೊಲೀಸರ ಜೊತೆಗೆ ವಾಗ್ವಾದ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದ. ಅಷ್ಟೇ ಅಲ್ಲದೇ ತನ್ನ ಕಾರ್ನಿಂದ ಚೀತಾ ಬೈಕ್ ಗುದ್ದಿ ಎಸ್ಕೇಪ್ ಆಗಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿ ಬಂಧನ

ಬೆಂಗಳೂರಿನಲ್ಲಿ ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ ಸಖ್​ದೇವ್​ ಎಂಬುವವನನ್ನು ಅರೆಸ್ಟ್ ಮಾಡಿ, ಆತನಿಂದ 1.84 ಕೆ.ಜಿ ಅಫೀಮು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್ ಹಾಗೂ 9 ಸಾವಿರ ನಗದು ಸೀಜ್ ಮಾಡಲಾಗಿದೆ. ಆರೋಪಿ ಸಖ್ದೇವ್ ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್ ಪಕ್ಕದ ಎಎಸ್​​ಸಿ ಕಾಲೇಜು ಬಳಿ ಅಫೀಮು ಮಾರಾಟ ಮಾಡುತ್ತಿದ್ದ. ಈತನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ

ಬಾಂಗ್ಲಾದೇಶದ ಯುವತಿ ಗ್ಯಾಂಗ್‌ರೇಪ್ ಪ್ರಕರಣ; ಯುವತಿಯರ ಮಾಹಿತಿ ಕೇಳಿದ ಎನ್ಐಎ

ಅಪ್ಪನಿಗೆ ಬ್ಯಾಟರಿ ಚಾಲಿತ ಬೈಕ್, ಮಗನಿಗೆ ಜೀಪ್; ಲಾಕ್​ಡೌನ್​ ಸಮಯವನ್ನು ಸದುಪಯೋಗ ಮಾಡಿಕೊಂಡ ಬೀದರ್ ವ್ಯಕ್ತಿ

(Foreign citizen has been arrested for allegedly assaulting the Bangalore police)