Gold Rate Today: ಗೆಳತಿಗಾಗಿ ಚಿನ್ನದ ಕಿವಿಯೋಲೆ ಕೊಡಿಸುವ ಪ್ಲಾನ್​​ ಮಾಡಿದ್ದೀರಾ? ದರ ಇಳಿಕೆ ಕಂಡಿದೆ ಖರೀದಿಯ ಕುರಿತು ಯೋಚಿಸಬಹುದು

Gold Price Today: ನೀವು ಇಷ್ಟಪಡುವ ಜನರಿಗಾಗಿ ಅಥವಾ ಹುಟ್ಟು ಹಬ್ಬದ ನೆಪವೊಡ್ಡಿ ಚಿನ್ನವನ್ನು ಉಡುಗೊರೆಯಾಗಿ ಕೊಡುವ ನಿರ್ಧಾರ ಮಾಡಿರಬಹುದು. ಹಾಗಿರುವಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.

Gold Rate Today: ಗೆಳತಿಗಾಗಿ ಚಿನ್ನದ ಕಿವಿಯೋಲೆ ಕೊಡಿಸುವ ಪ್ಲಾನ್​​ ಮಾಡಿದ್ದೀರಾ? ದರ ಇಳಿಕೆ ಕಂಡಿದೆ ಖರೀದಿಯ ಕುರಿತು ಯೋಚಿಸಬಹುದು
ಕನಿಷ್ಠ ಮತ್ತು ಗರಿಷ್ಠ ಹೂಡಿಕೆ
Updated By: shruti hegde

Updated on: Jul 19, 2021 | 9:01 AM

Gold silver Price Today | ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ದರ ಇಳಿಕೆ ಹಾದಿ ಹಿಡಿದಿದೆ. ಚಿನ್ನ ಖರೀದಿದಾರರಿಗೆ ಇದು ಖುಷಿ ಕೊಡುವ ವಿಚಾರ. ಇಂದು (ಜುಲೈ 19, ಸೋಮವಾರ) ಚಿನ್ನದ ಬೆಲೆ (Gold Price) ಅಲ್ಪವೇ ಇಳಿಕೆ ಕಂಡಿದೆ. ಚಿನ್ನ ಖರೀದಿದಾರರು ಇಂದು ಆಭರಣ ಕೊಳ್ಳುವುದಿದ್ದರೆ ಯೋಚಿಸಬಹುದು. ಬೆಳ್ಳಿ ದರವೂ(Silver Price) ಸಹ ಎರಡು ದಿನಗಳಿಂದ ಇಳಿಕೆ ಕಂಡಿತ್ತು. ಇಂದು ಸ್ಥಿರತೆಯಲ್ಲಿದೆ. ಆಭರಣದ ಮೇಲೆ ಮೋಹವಿರುವುದು ಸಹಜ. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರಿಗೆ ಚಿನ್ನಾಭರಣ ಅಂದರೆ ಕೊಂಚ ಜಾಸ್ತಿಯೇ ಪ್ರೀತಿ. ಹಾಗಾಗಿಯೇ ಚಿನ್ನದ ದರ ಇಳಿಕೆಯತ್ತ ಸಾಗುತ್ತಿದೆಯೇ ಎಂದು ಗಮನಿಸುತ್ತಿರುತ್ತಾರೆ.

ಕೇವಲ ಆಭರಣ ತೊಟ್ಟು ಖುಷಿ ಪಡುವುದೊಂದೇ ಅಲ್ಲದೇ ಚಿನ್ನ ಖರೀದಿಸಿಟ್ಟು ಕಷ್ಟ ಕಾಲದಲ್ಲಿ ಸಹಾಯವಾಗುತ್ತದೆ ಎಂಬ ನಂಬಿಕೆ, ವಿಶ್ವಾಸದೊಡನೆ ಆಭರಣ ಖರೀದಿಸುತ್ತಾರೆ. ಅಷ್ಟೇ ಅಲ್ಲದೇ ನೀವು ಇಷ್ಟಪಡುವ ಜನರಿಗಾಗಿ ಅಥವಾ ಹುಟ್ಟು ಹಬ್ಬದ ನೆಪವೊಡ್ಡಿ ಚಿನ್ನವನ್ನು ಉಡುಗೊರೆಯಾಗಿ ಕೊಡುವ ನಿರ್ಧಾರ ಮಾಡಿರಬಹುದು. ಹಾಗಿರುವಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,990 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,49,900 ರೂಪಾಯಿ ಆಗಿದೆ. ಸರಿಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ದರ 49,000 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,90,000 ರೂಪಾಯಿಗೆ ಇಳಿಕೆಯಾಗಿದೆ. ಸರಿಸುಮಾರು 100 ರೂಪಾಯಿಯಷ್ಟು ಇಳಿಕೆಯಾಗಿದೆ. ಬೆಳ್ಳಿ ದರ ಸ್ಥಿರತೆಯನ್ನು ಕಾಯ್ದುಕೊಂಡಿದ್ದು ಕೆಜಿ ಬೆಳ್ಳಿ ಬೆಲೆ 68,400 ರೂಪಾಯಿ ಇದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,410 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,54,100 ರೂಪಾಯಿ ಇದೆ. ಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್​ 10 ಗ್ರಾಂ ಚಿನ್ನದ ದರ 49,540 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,95,400 ರೂಪಾಯಿ ಬೆಲೆ ನಿಗದಿಯಾಗಿದೆ. ಕೆಜಿ ಬೆಳ್ಳಿ ಬೆಲೆ 73,200 ರೂಪಾಯಿ ಇದೆ.

ದೆಹಲಿಯಲ್ಲಿ ಇಂದು ಚಿನ್ನದ ದರ ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,400 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ 4,74,000 ರೂಪಾಯಿ ಆಗಿದೆ. ಸುಮಾರು 2,500 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,700 ರೂಪಾಯಿ ಇದೆ. ಹಾಗೆಯೇ 100 ಗ್ರಾಂ ಚಿನ್ನದ ದರ 5,17,000 ರೂಪಾಯಿ ಇದೆ. ಸುಮಾರು 2,600 ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರ ಸ್ಥಿರತೆ ಕಾಯ್ದುಕೊಂಡಿದ್ದು ಕೆಜಿ ಬೆಳ್ಳಿಗೆ 68,400 ರೂಪಾಯಿ ಇದೆ.

ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,190 ರೂಪಾಯಿ ಇದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,17,900 ರೂಪಾಯಿ ಆಗಿದೆ. ಸುಮಾರು 100 ರೂಪಾಯಿಯಷ್ಟು ಇಳಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್​ 10 ಗ್ರಾಂ ಚಿನ್ನಕ್ಕೆ 48,190 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಚಿನ್ನದ ದರ 4,81,900 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕೆಜಿ ಬೆಳ್ಳಿಗೆ 68,400 ರೂಪಾಯಿ ನಿಗದಿಯಾಗಿದೆ.

ಇದನ್ನೂ ಓದಿ:

Gold Rate Today: ಮನೆಯವರಿಗಾಗಿ ಚಿನ್ನದ ಆಭರಣವನ್ನು ಖರೀದಿಸಬೇಕು ಅಂದುಕೊಂಡಿದ್ದೀರಾ? ಇಂದಿನ ದರ ವಿವರ ಪರಿಶೀಲಿಸಿ

Gold Rate Today: ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆ; ಪ್ರಮುಖ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ ತಿಳಿಯಿರಿ